“ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರದ  ಪೋಸ್ಟರ್, ಟ್ರೈಲರ್ ಬಿಡುಗಡೆಗೆ ವೇದಿಕೆ ಸಿದ್ಧ  

4 years ago

ಬೆಂಗಳೂರು: ರವೀಂದ್ರನಾಥ್ ಠಾಕೂರ್ ಅವರ “Once There Was A King” ಕಾದಂಬರಿಯು “ಒಂದಾನೊಂದು ಕಾಲದಲ್ಲಿ ಒಬ್ಬ ರಾಜ‌ ಇದ್ದ” ಶೀರ್ಷಿಕೆಯಾಗಿ ಕಲಾತ್ಮಕ ಸಿನಿಮಾ ರೂಪದಲ್ಲಿ ತಯಾರಾಗಿದೆ. ದೃಷ್ಟಿ ಮಿಡಿಯಾ ಸಂಸ್ಥೆಯ ಚೊಚ್ಚಲ ನಿರ್ಮಾಣದಲ್ಲಿ ಈ ಚಿತ್ರ ತಯಾರಾಗಿದೆ.

ಜಗತ್ತಿನ ಚಲನಚಿತ್ರ ಇತಿಹಾಸದಲ್ಲಿಯೇ ವಿಶೇಷ ಚಿತ್ರವಾಗಿದೆ.‌‌ ಮುಖ್ಯವಾಗಿ ಈ ಚಿತ್ರದ 24 ಪಾತ್ರಗಳನ್ನು ಒಬ್ಬರೇ ಕಲಾವಿದರು ಮಾಡಿದ್ದಾರೆ. ರಂಗಭೂಮಿಯ ಕಲಾವಿದ, ನಿರ್ದೇಶಕ, ಚಿಂತಕ, ಬರಹಗಾರ ಯೋಗೇಶ್ ಮಾಸ್ಟರ್ ಈ ಎಲ್ಲಾ ಪಾತ್ರಗಳಿಗೂ ಜೀವ ತುಂಬಿದ್ದಾರೆ. ಜೊತೆಗೆ ಠಾಕೂರರ ಈ  ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.

ನಿರ್ದೇಶಕ ಸಂತೋಷ್ ಕೊಡೆಂಕೇರಿಯವರು ಈ ಚಿತ್ರವನ್ನು ಕೇವಲ 11 ಜನರ ತಂಡದೊಂದಿಗೆ ನಿರ್ದೇಶನ ಮಾಡಿದ್ದು ವಿಶೇಷ.‌ ಗುಣಮಟ್ಟದಲ್ಲಿ ಎಲ್ಲಿಯೂ ಕಾಂಪ್ರಮೈಸ್ ಆಗದೆ ಸಿನಿಮಾ ತಯಾರಾಗಿದೆ ಮತ್ತು ಈ ಚಿತ್ರವೂ ವಿಶ್ವದ ಹಲವಾರು ಚಿತ್ರೋತ್ಸವದಲ್ಲಿ ಪಾಲ್ಗೊಂಡು ಹತ್ತಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೆಲ್ಲದರೊಂದಿಗೆ ಇದೇ ಮಾರ್ಚ್ 5 ರ ಶನಿವಾರ ಮಧ್ಯಾಹ್ನ 12ಘಂಟೆಗೆ ಮಲ್ಲೇಶ್ವರಂ ನ ರೇಣುಕಾಂಬ ಸ್ಟುಡಿಯೋದಲ್ಲಿ ಚಿತ್ರತಂಡ ಟ್ರೈಲರ್, ಪೋಸ್ಟರ್ ಮತ್ತು ಚಿತ್ರದ ವಿಶೇಷತೆಗಳನ್ನು ಬಿಡುಗಡೆ ಮಾಡುತ್ತಿದೆ. ಹಾಗೂ ವಿಶೇಷ ವ್ಯಕ್ತಿಗಳ ಮುಂದಾಳತ್ವದಲ್ಲಿ ಚಿತ್ರದ ಎಲ್ಲಾ ಮಾಹಿತಿ ಹಂಚಿಕೊಳ್ಳಲಿದೆ.

One Response

Leave a Reply