ನಾರಾಯಣ ಗುರು ಸ್ತಬ್ಧಚಿತ್ರ ನಿರಾಕರಣೆ ವಿರೋಧಿಸಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿಭಟನೆ

4 years ago

ಬೆಳಗಾವಿ: 73ನೇ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರು, ಸುಭಾಷ್ ಚಂದ್ರ ಬೋಸ್ ಮತ್ತು ತಮಿಳುನಾಡಿನ ಸ್ವಾತಂತ್ರ್ಯ ಹೋರಾಟದ ಸ್ಥಬ್ಧ ಚಿತ್ರ ಪ್ರದರ್ಶನ ತಿರಸ್ಕರಿಸಿರುವ ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಗೋಕಾಕನ ಕೋರ್ಟ್‌ ನಲ್ಲಿ ಮಾನವ ಬಂಧುತ್ವ ವೇದಿಕೆ ಸಂಸ್ಥಾಪಕ ಸತೀಶ್ ಜಾರಕಿಹೊಳಿಯವರ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಪ್ರತಿಭಟನೆ ನಡೆಯಿತು.
ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಇಲ್ಲಿನ ಕೋರ್ಟ್ ಸರ್ಕಲ್ ನಿಂದ ತಹಶೀಲ್ದಾರ್‌ ಕಚೇರಿ ವರೆಗೆ ಪಾದಯಾತ್ರೆ ನಡೆಸಿ, ತಹಶೀಲ್ದಾರ್‌ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಗೆ ಮಾನವ ಬಂಧುತ್ವ ವೇದಿಕೆ, ವಿದ್ಯಾರ್ಥಿ ಬಂಧತ್ವ ವೇದಿಕೆ, ದಲಿತ ಸಂಘಟನೆಗಳು, ಈಡಿಗ ಆರ್ಯ ಸಂಘಟನೆ, ಕಲಾಲ್‌ ಸಮಾಜ, ಕುರುಬ ಸಂಘಟನೆ, ಸಾಹಿತಿಗಳು ಪ್ರಗತಿಪರ ಚಿಂತಕರು ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಸಾಥ್‌ ನೀಡಿದವು.

Leave a Reply