ಕೋಮುವಾದಿ ಸಂಘಟನೆಯ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗದಿರಲಿ

1 year ago

ಸ್ವಾತಂತ್ರ್ಯ ಪೂರ್ವದಿಂದಲೂ, ಜಾತಿ ಧರ್ಮಗಳ ವಿಭಜನೆಯ ಮೂಲಕ ಕೋಮುವಾದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಸಂವಿಧಾನ ಜಾರಿಯಾದ ನಂತರ, ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದೆ ಒಂದಲ್ಲಾ ಒಂದು ಬಗೆಯಲ್ಲಿ ಸಂವಿಧಾನವನ್ನು ಗೌಣಗೊಳಿಸಿ  ಧರ್ಮ ಹಾಗು ಕೋಮುವಾದದ ನೆಲೆಯಲ್ಲಿ ಭಾರತವನ್ನು ಒಂದು ಜನಾಂಗೀಯ ರಾಷ್ಟ್ರವನ್ನಾಗಿಸಲು ನಿರಂತರವಾಗಿ ಒಡಕಿನ ರಾಜಕೀಯ ಮಾಡುತ್ತಾ ಬಂದಿರುವ  ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು ಇದೀಗ ತನ್ನ ಶತಮಾನೋತ್ಸವ ಕಾರ್ಯಕ್ರಮಗಳಿಗೆ ದೇಶಾದ್ಯಂತ ಚಾಲನೆ ನೀಡಿದೆ.

ಇದೇ ಕೋಮುವಾದಿ ಆರೆಸ್ಸೆಸಿನ ಹೊಕ್ಕುಳಬಳ್ಳಿಯೊಂದು ಸೇಡಂನಲ್ಲಿ ಜನವರಿ ೨೯ರಿಂದ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಅಖಿಲ ಭಾರತ ಮಟ್ಟದ ಸಮ್ಮೇಳನವನ್ನು ಸಂಘಟಿಸುತ್ತಿದೆ. ಆರೆಸ್ಸೆಸ್ಸಿನ ಶತಮಾನೋತ್ಸವ ಸಂದರ್ಭದ ಪೀಠಿಕಾ ಕಾರ್ಯಕ್ರಮದಂತೆ ಇದನ್ನು ಸಂಘಟಿಸಲಾಗಿದೆ. ಇದೇ ಆರ್‌ಎಸ್‌ಎಸ್‌ ನೂರು ವರ್ಷಗಳ ಹಿಂದೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಪ್ರತಿಜ್ಞೆಗೈದಿದ್ದನ್ನು ನಾವು ಸ್ಮರಿಸಬೇಕಿದೆ. ಈ ಕಾರ್ಯಕ್ರಮದ  ರೂವಾರಿ ಗೋವಿಂದಾಚಾರ್ಯ ಒಂದು ಕಾಲದಲ್ಲಿ ಭಾಜಪದ ಸೂತ್ರಧಾರರಾಗಿದ್ದು ಈಗ ಆರೆಸ್ಸೆಸ್‌ ಅಣತಿ ಮೇರೆಗೆ ಇನ್ನೊಂದು ಪಾತ್ರ ನಿರ್ವಹಿಸುತ್ತಿದ್ದಾರೆ.

ಸಂವಿಧಾನವನ್ನು ಬದಲಿಸಬೇಕೆಂಬ ಮೊದಲಮಾತು ಶುರು ಮಾಡಿದ್ದೇ ಈ ಗೋವಿಂದಾಚಾರ್ಯ. ಈ ಸದರಿ ಸಮ್ಮೇಳನವು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಗೌಪ್ಯ ಅಜೆಂಡಾವನ್ನು ಹೊಂದಿದ್ದು, ಅದರಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಭಾಜಪ/ ಆರೆಸ್ಸೆಸ್ಸಿಗರು ಅಥವಾ ತೆರೆಮೆರೆಯಲ್ಲಿ ಆರೆಸ್ಸೆಸ್‌ ಬೆಂಬಲಿಸುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಶಕ್ತಿಗಳೇ ಆಗಿವೆ. ಈ ಅಜೆಂಡವೂ ಅವರ ಸಾರ್ವಜನಿಕ ಹೇಳಿಕೆಗಳು, ಸಿದ್ಧತೆಗಳು ಮತ್ತು ಕ್ರಿಯೆಗಳು ನಿಚ್ಚಳವಾಗಿವೆ. ಇದು ಅವರ ಹಿಂದುತ್ವ ನಿಲುವನ್ನು ಢಾಳಾಗಿ ತೋರಿಸಿದೆ.

ಈ  ಸಮ್ಮೇಳನವೂ ಮಾರುವೇಶದ ಆರೆಸ್ಸೆಸ್‌ನ ದೇಶ ವಿಭಜನೆ ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿದೆ. ಭಾರತೀಯ ಎಂದರೆ ಹಿಂದೂ ಅದರಲ್ಲೂ ಹಿಂದೂ ಬ್ರಾಹ್ಮಣೀಯ ಸಂಸ್ಕೃತಿ ಎಂಬಾ ಆರೆಸ್ಸೆಸ್ಸಿನ ಸಿದ್ಧಾಂತವನ್ನು ಪ್ರಚಾರ ಮಾಡುವುದೇ ಈ ಸಮಾವೇಶದ ಉದ್ದೇಶವಾಗಿದೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯು ಬಸವರಾಜ ಪಾಟಿಲ ಸೇಡಂ ಎಂಬ ಕಟ್ಟಾ ಆರ್ ಎಸ್ ಎಸ್ ನ ನಾಯಕರು ಇದರ ಪ್ರಮುಖ ಸಂಘಟಕರದ್ದು. ಭಾರತೀಯ ಸಂಸ್ಕೃತಿ ಉತ್ಸವ ಎಂಬುದು ತೋರಿಕೆಯ ಹೆಸರು. 240 ಎಕರೆ ಜಾಗದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವವು ಹಿಂದೂ ಧರ್ಮ ಉಳಿಸಲು ಅಂದರೆ ಸನಾತನ ವ್ಯವಸ್ಥೆ ಉಳಿಸಲು ನಡೆಸಲಾಗುತ್ತಿರುವ ಉತ್ಸವವಾಗಿದೆ. ಇದೊಂದು ಆರ್ ಎಸ್ ಎಸ್ ನ ನೂರನೇ ವರ್ಷದ ಆಚರಣೆಯ ಆರಂಭದ ಭಿನ್ನರೂಪ. ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರವೇಶದ ಭಾಗವಾಗಿ ಆರ್ ಎಸ್ ಎಸ್ ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು, ಕಲಬುರ್ಗಿಯನ್ನು ಹೆಬ್ಬಾಗಿಲು ಮಾಡಿಕೊಂಡಿದೆ. ಈ ಉದ್ಧೇಶಕ್ಕಾಗಿಯೇ “ಭಾರತೀಯ ಸಂಸ್ಕೃತಿ ಉತ್ಸವ ಎಂಬ ಹೆಸರಿನ  “ಪುರೋಹಿತಶಾಹಿತ್ವದ ಉತ್ಸವ” ನಡೆಸಲಾಗುತ್ತಿದೆ. ಪುರೋಹಿತಶಾಹಿಗಳಿಗೆ ಗೌರವಿಸುವ ಸಂವಿಧಾನ (ಮನುಸ್ಮೃತಿ)ಕ್ಕಾಗಿ ಈ ಉತ್ಸವ. ಸಂವಿಧಾನವನ್ನು ಗೌರವಿಸಿ ಮಾನವೀಯತೆ, ಸೌಹಾರ್ದತೆ, ಶಾಂತಿ, ಬಂಧುತ್ವ, ಬಹುತ್ವ, ಬಹು ಸಂಸ್ಕೃತಿ, ಬಹುಭಾಷೆ ಮತ್ತು ಸಮಗ್ರತೆಯನ್ನು ಬಯಸುವವರೆಲ್ಲರೂ ಈ ಉತ್ಸವನ್ನುನ ಧಿಕ್ಕರಿಸಬೇಕಿದೆ.

ಈಗಾಗಲೇ, ಸೇಡಂನಲ್ಲಿ ನಡೆಯಲಿರುವ ಈ ಭಾರತೀಯ ಸಂಸ್ಕೃತಿ ಕಾರ್ಯಕ್ರಮದಲ್ಲಿ  ಭಾಗವಹಿಸುತ್ತಿಲ್ಲ ಎಂದು ತಮ್ಮ X ಖಾತೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಬಹಿರಂಗವಾಗಿ ಘೋಷಣೆ ಮಾಡುವ ಮೂಲಕ ಅವರು ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ಸಂವಿಧಾನದ ಹೆಸರಿನಲ್ಲಿ ತೆಗೆದುಕೊಂಡ ಪ್ರತಿಜ್ಞೆಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ಅವರೂ ನಾನು ಭಾಗವಹಿಸಲಾರೆ ಎಂದು ಬಹಿರಂಗವಾಗಿ ಸ್ಪಷ್ಟ ಮಾಡಿದ್ದಾರೆ.

ಆದರೆ ಈ  ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಇರುವುದು ಕೇವಲ ಮುಖ್ಯಮಂತ್ರಿಯವರ  ಹೆಸರು, ಪ್ರಿಯಾಂಕ ಖರ್ಗೆಯವರ ಹೆಸರು ಮಾತ್ರವಲ್ಲ. ಸಂಘಟಕರು ಹೊರತಂದಿರುವ 52 ಪುಟಗಳ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿಗಳ ಸಚಿವ ಸಂಪುಟದ ಭಾಗವಾಗಿರುವ ಹಲವು ಮಂತ್ರಿಗಳು, ಸಂಸದರು ಮತ್ತು ಆ ಪ್ರದೇಶದ ಕಾಂಗ್ರೆಸ್‌ ನ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ ಎಂದು ಅವರ ಹೆಸರುಗಳನ್ನು ಮುದ್ರಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ  ಈ ಎಲ್ಲಾ ಹೆಸರಗಳನ್ನು ಅವರ ಗಮನಕ್ಕೆ ತಾರದೆ ಮತ್ತು ಒಪ್ಪಿಗೆಯಿಲ್ಲದೆ ಹಾಕಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.  ಇಷ್ಟೇ ಅಲ್ಲದೆ, ಕಾರ್ಯಕ್ರಮದ ಸಿದ್ಧತೆಗಾಗಿ ಇಲಾಖಾವಾರು ಸಭೆಗಳು ನಡೆದಿವೆ ಎಂಬ ಮಾಹಿತಿ ಕೂಡಾ ಇದೆ.

ಹಾಗಾದರೆ ಕೇಳದೇ ಹೆಸರು ಬಳಸಿಕೊಂಡು ರಾಜ್ಯದ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವ ಸಂಘಟಕರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ನಾವೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ. ಕಾಂಗ್ರೆಸ್‌ನ ಈ  ಮೃದುಹಿಂದುತ್ವದ ಧೋರಣೆ ರಾಜ್ಯದ  ಶಾಂತಿ ಸೌಹಾರ್ದತೆಗೆ ಧಕ್ಕೆಯ ಸಂಗತಿಯಾಗಿದೆ. ಆದರೂ ಆಡಳಿತರೂಢ ಕಾಂಗೆಸ್‌ ಪಕ್ಷವೂ ಏಕೆ  ನಿರ್ಲಕ್ಷ್ಯವಹಿಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ? ಜೊತೆಗೆ ಇದು ಸೈದ್ಧಾಂತಿಕ ನಿಲುವಿನ ಪ್ರಶ್ನೆಯಾಗಿದ್ದು ಒಂದು ಸಮ್ಮೇಳನದ ಪೂರ್ವಾಪರಗಳನ್ನು ತಿಳಿಯದೆ ಕಾಂಗ್ರೆಸ್‌ ಸರಕಾರದ ಸಚಿವರು ಮತ್ತು ನಾಯಕರು ಈ ಸಮ್ಮೇಳನಕ್ಕೆ ಹೋಗಲು ಹೇಗೆ ಒಪ್ಪಿಕೊಂಡರು ಎಂಬುದು ಪ್ರಶ್ನೆಯಾಗಿದೆ?

ಈ  ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿದರೆ ಕಾಂಗ್ರೆಸ್‌ ನಾಯಕರನ್ನು ನಿರ್ದಿಷ್ಟ ಕಾರ್ಯಕ್ರಮಗಳಿಗೆ ಆಹ್ವಾನಿಸಿರುವುದು ಸ್ಪಷ್ಟ. ಕೇಳದೇ, ಒಪ್ಪಿಗೆ ಪಡೆಯದೇ ಇಂಥಾ ದೊಡ್ಡ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸುವುದು ಸಾಧ್ಯವೇ ಇಲ್ಲ. ಕಾಂಗ್ರೆಸಿಗರಿಗೆ ಕನಿಷ್ಠ ತಮ್ಮ ಪಕ್ಷದ ಸೈದ್ಧಾಂತಿಕ ನಿಲುವು, ಪರಂಪರೆ ಬಗ್ಗೆ ಕನಿಷ್ಠ ತಿಳುವಳಿಕೆ ಇದ್ದಿದ್ದರೆ ಇಂಥಾ ಅಭಾಸಕ್ಕೆಡೆಯಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿಯವರು ಸದಾ ಸಂವಿಧಾನವನ್ನು ಎತ್ತಿ ಹಿಡಿಯುವ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವುದು ಕಾಂಗ್ರೆಸ್ಸಿಗರಿಗೆ ಮಾದರಿಯಾಗಬೇಕಿತ್ತು. ಹಾಗಾಗದಿರುವುದು ವಿಷಾದನೀಯ ಸಂಗತಿಯಾಗಿದೆ.

240 ಎಕರೆ ಬೆಳೆಯುವ ಭೂಮಿಯಿಂದ ತಾತ್ಪೂರ್ತಿಕವಾಗಿ ರೈತರನ್ನು ಒಕ್ಕಲೆಬ್ಬಿಸಿ ಲಕ್ಷಾಂತರ ಜನರನ್ನು ಸೇರಿಸಿ ವಾತಾವರಣ ಕಲುಷಿತ ಮಾಡುತ್ತಿದ್ದಾರೆ. ಇದಕ್ಕೇನು ಕ್ರಮ ಕೈಗೊಳ್ಳಲಾಗುತ್ತಿದೆ ಈ ಸರ್ಕಾರ ಉತ್ತರಿಸಬೇಕು.

ಈ ಎಲ್ಲಾ ಕಾರಣಗಳಿಂದ ಸರ್ಕಾರದ ಎಲ್ಲಾ ಸಚಿವರು ಮತ್ತು ಸಂವಿಧಾನದ ಪರ ಇರುವ ಕಾಂಗ್ರೆಸ್‌ನ ಹಿರಿಯ ನಾಯಕರರು  ಈ ಕೋಮುವಾದೀ ಸಮ್ಮೇಳನದಲ್ಲಿ ಭಾಗವಹಿಸಬಾರದೆಂದು ನಾವು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ. ಜೊತೆಗೆ,  ಈ ಸಮ್ಮೇಳನದಲ್ಲಿ ಭಾಗಿಯಾಗುವ ನಿರ್ಧಾರದಿಂದ ಸಚಿವರು ಮತ್ತು ಕಾಂಗ್ರೆ ಸ್‌ ನಾಯಕರು ಹಿಂದೆ ಸರಿದರೆ ಮಾತ್ರ ಸಾಲದು, ಹಿಂದುತ್ವದ ಹಲವು ಮುಖಗಳ ಸೈದ್ಧಾಂತಿಕ ದಾಳಿಯನ್ನು ಎದುರಿಸುವ ಸೈದ್ಧಾಂತಿಕ ಕಾರ್ಯಕ್ರಮವನ್ನು ಜನಾಂದೋಲನವಾಗಿ ಕಾಂಗ್ರೆಸ್‌ ನಾಯಕರು ರೂಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ. 

ರಾಜ್ಯದ ಜನಗಳಿಗೆ ಕೋಮುವಾದಿ ವಿಷಾನಿಲ ಉಣಿಸಿ ಮುಗ್ಧ ಶೂದ್ರ ಮಕ್ಕಳ ಮನೋಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದಾರೆ. ಅಲ್ಲಿ ಈಗಾಗಲೇ ನೂರಾರು ಶೂದ್ರರನ್ನು ಹಗಲು ರಾತ್ರಿ ದುಡಿಸಿಕೊಂಡು ಸನಾತನಿಗಳ ಸೇವೆಗೆ ಅವರ ಚರ್ಮವನ್ನು ರತ್ನಗಂಬಳಿ ಮಾಡಿ ಹಾಸಲಾಗುತ್ತಿದೆ ಎಂಬುದನ್ನು ರಾಜ್ಯದ ಎಚ್ಚರಿಕೆಯಿಂದ ಗಮನಿಸಬೇಕು ಮತ್ತದನ್ನು ವಿರೋಧಿಸಬೇಕು ಎಂಬುದು ನಮ್ಮ ನಿಲುವಾಗಿದೆ.

ಮೀನಾಕ್ಷಿ ಬಾಳಿ ಕಲಬುರ್ಗಿ
ಕೆ ಪಿ ಸುರೇಶ ಬೆಂಗಳೂರ
ನಿರಂಜನಾರಾಧ್ಯ .ವಿ.ಪಿ, ಬೆಂಗಳೂರು
ಬಸವರಾಜ ಸೂಳಿಭಾವಿ ಗದಗ
ಕೆ ನೀಲಾ ಕಲಬುರ್ಗಿ
ಡಾ. ವಸುಂಧರ ಭೂಪತಿ ಬೆಂಗಳೂರ
ಡಾ. ಮೂಡ್ನಾಕೂಡ ಚಿನ್ನಸ್ವಾಮಿ ಬೆಂಗಳೂರ
ಡಾ. ಎಚ್ ಎಸ್ ಅನುಪಮಾ ಕವಲಕ್ಕಿ
ಆರ್ ಕೆ ಹುಡುಗಿ ಕಲಬುರ್ಗಿ
ನಾಗೇಗೌಡ ಕೀಲಾರ ಶಿವಲಿಂಗಯ್ಯ ಬೆಂಗಳೂರ
ಕೇಸರಿ ಹರವೂ ಬೆಂಗಳೂರ
ಇಂದಿರಾ ಹೆಗ್ಗಡೆ ಬೆಂಗಳೂರ
ಯಡೂರ ಮಹಾಬಲ ಬೆಂಗಳೂರ
ನಾ ದಿವಾಕರ ಮೈಸೂರ
ವಿ. ಎನ್. ಲಕ್ಷ್ಮೀನಾರಾಯಣ ಮೈಸೂರ
ಅನಿಲ ಹೊಸಮನಿ ವಿಜಯಪುರ
ಬಿ. ಸುರೇಶ (ಬೀಸು)
ಡಾ. ಜಿ ವಿ ಆನಂದಮೂರ್ತಿ. ತುಮಕೂರು.
ಡಾ. ಮಂಜುನಾಥ್.ಬಿ.ಆರ್ ಬೆಂಗಳೂರ
ಡಾ.ಜಯಲಕ್ಷ್ಮಿ.ಎಚ್.ಜಿ ಬೆಂಗಳೂರ
ಡಾ. ಟಿ. ಶ್ರೀನಿವಾಸ ರೆಡ್ಡಿ ಬೆಂಗಳೂರ
ಬಿ. ಶ್ರೀಪಾದ ಭಟ್ ಬೆಂಗಳೂರ
ಪ್ರೊ. ಎನ್ ಎಸ್ ವೇಣುಗೋಪಾಲ ಮೈಸೂರ
ಕೆ. ವೆಂಕಟರಾಜು ಚಾಮರಾಜನಗರ
ನಗರಗೆರೆ ರಮೇಶ್ ಬೆಂಗಳೂರ
ಜೇ.ಕಲೀಮ್ ಬಾಷಾ,ಹರಿಹರ.
ಕುಮಾರ ಶ್ರಿಂಗೇರಿ ಶಿವಮೊಗ್ಗ
ಮಂಗ್ಳೂರ ವಿಜಯ ಬೆಂಗಳೂರ
ಡಾ ಪ್ರಭು ಖಾನಾಪೂರೆ ಕಲಬುರ್ಗಿ
ಕೋದಂಡರಾಮಪ್ಪ ಕಲಬುರ್ಗಿ
ಧನರಾಜ ತಾಂಬೋಳೆ ಕಲಬುರ್ಗಿ
ಶ್ರೀಮಂತ ಬಿರಾದಾರ ಕಲಬುರ್ಗಿ
ಸುಧಾಮ ಧನ್ನಿ ಕಲಬುರ್ಗಿ
ಪಾಂಡುರಂಗ ಮಾವಿನಕರ್ ಕಲಬುರ್ಗಿ
ದತ್ತಾತ್ರೇಯ ಇಕ್ಕಳಕಿ ಕಲಬುರ್ಗಿ
ಪಿ ವಿ ಸುಬ್ರಾಯ ಸಾಗರ
ಸಿ ಎಚ್ ಭಾಗ್ಯ ಬೆಂಗಳೂರ
ಎನ್ ರವಿಕುಮಾರ್ ಟೆಲೆಕ್ಸ್ ಶಿವಮೊಗ್ಗ
ಬಿ.ಸಿದ್ದಪ್ಪ, ಹಿರಿಯೂರು
ಚಂದ್ರಪ್ರಭ ಕಠಾರಿ ಬೆಂಗಳೂರ
ಡಾ. ಚಂದ್ರಮತಿ ಸೋಂದಾ ಮೈಸೂರ
ಹ.ಮಾ‌.ರಾಮಚಂದ್ರ ಕೋಲಾರ.
ಅನಿಲ್ ಬಾಫುಲೆ ದಾವಣಗೆರೆ
ಅಮರ್ ಬಿ ಹೊಳೆಗದ್ದೆ
ಎಚ್ ಬಿ ಪೂಜಾರ ಗದಗ
ಎಸ್. ಪ್ರಭಾಕರ್ ಚಾಮರಾಜಪೇಟೆ
ಡಾ. ಟಿ ಹನುಮಂತರಾಯ ಬೆಂಗಳೂರ
ರಮೇಶ ಗಬ್ಬೂರ ಗಂಗಾವತಿ
ಟಿ ಎನ್ ಷಣ್ಮುಖ ದಾವಣಗೆರೆ
ಚೆನ್ನಕೇಶವ, ಮಂಗಳೂರು
ಪಟೇಲ್ ಜಗನ್ನಾಥ ಸಿರಾ, ತುಮಕೂರು
ಪ್ರಿಯಾಂಕ ಮಾವಿನಕರ ಕಲಬುರ್ಗಿ
ಎಚ್ ಎ. ನಂಜುಂಡಸ್ವಾಮಿ ಮೈಸೂರ
ಚೆನ್ನು ಕಟ್ಟಿಮನಿ ವಿಜಯಪುರ
ಡಿ ಎಂ ಬಡಿಗೇರ ಕೊಪ್ಪಳ
ಡಾ.ವೆಂಕಟಯ್ಯ ಅಪ್ಪಗೆರೆ ಬಳ್ಳಾರಿ
ಟಿ.ಕೆ.ಗಂಗಾಧರ ಪತ್ತಾರ ಬಳ್ಳಾರಿ
ವೃಂದಾ ಹೆಗಡೆ ಸಾಗರ
ಸಂಪತಕುಮಾರ ಮೈಸೂರ
ಅಬ್ದುಲ್ ರೆಹಮಾನ ಬಿದರಕುಂದಿ ಮುದ್ದೇಬಿಹಾಳ
ಕುಮಾರ. ಆರ್. ಉದ್ದೂರು ಮೈಸೂರ
ದೇವಗಳ್ಳಿ ಸೋಮಶೇಖರ, ಮೈಸೂರು
ಗುಂಡಣ್ಣ ಚಿಕ್ಕಮಗಳೂರು.
ಎಸ್ ಎಸ್ ವೆಂಕಟೇಶ ದಾಬಸಪೇಟೆ
ಕೆ.ಮಹಾಂತೇಶ ಬೆಂಗಳೂರು
ವಿಶಾಲ ಮ್ಯಾಸರ ಹೊಸಪೇಟೆ
ನಾಗರಾಜ್ ಹರಪನಹಳ್ಳಿ. ಕಾರವಾರ
ಸರಿತಾ ಮಾರುತೇಶ ಚಳ್ಳಕೆರೆ
ಮಹಾಂತೇಶ ಕೊತಬಾಳ ಕೊಪ್ಪಳ
ಭೀಮನಗೌಡ ಪರಗೊಂಡ ಅಥಣಿ
ಕಾರಳ್ಳಿ ಶ್ರೀನಿವಾಸ ಬೆಂಗಳೂರ
ಸೈಯ್ಯದ್ ಅಹಮ್ಮದ ಖಾನ ತುಮಕೂರ
ಎಸ್ ಎ ಗಫಾರ ಕೊಪ್ಪಳ
ಭಾರತಿ ಮೂಲಿಮನಿ ಹೊಸಪೇಟೆ
ಲಕ್ಷ್ಮಣ ಚೀರನಹಳ್ಳಿ ಮಂಡ್ಯ
ಕರಿಬಸಪ್ಪ ಎಂ ದಾವಣಗೆರ
ಸುರೇಶ್ ಶಂಕರಪುರ, ನಂಜನಗೂಡು
ದಾದಾಯತ್ ಭಾವಜಿ ಹೂವಿನ ಹಡಗಲಿ
ಬಸವರಾಜ ಬ್ಯಾಗವಾಟ ದೇವದುರ್ಗ
ಬಸವರಾಜ ಬೋದೂರ ಯಲಬುರ್ಗ
ಗುರುಪ್ರಸಾದ್ ಎಂ ಸಿ. ಚನ್ನಪಟ್ಟಣ.
ಅನಂತ ಕಟ್ಟಿಮನಿ ಲಕ್ಷ್ಮೇಶ್ವರ
ಗುಡಿಬಂಡೆ ಗಂಗಪ್ಪ ಚಿಕ್ಕಬಳ್ಳಾಪುರ
ಎಂ ಶಿವಕುಮಾರ್ ಮೈಸೂರ
ಈರಪ್ಪ ಎಂ ಸುತಾರ ಜಮಖಂಡಿ
ಸಲೀಮಾ‌‌ ಜಾನ್  ಕೊಪ್ಪಳ
ಪ್ರಭುಗೌಡ ಪಾಟೀಲ ವಿಜಯಪುರ
ಆನೂಡಿ ನಾಗರಾಜ, ಗೌರಿಬಿದನೂರ
ಬಸವರಾಜ ಶೀಲವಂತರ, ಕೊಪ್ಪಳ
ವೀರೇಶ ಬಳ್ಳಾರಿ, ಗಂಗಾವತಿ
ಎಸ್. ಜಿ. ಚಿಕ್ಕನರಗುಂದ, ರಾಮದುರ್ಗ
ಸೋಮಶೇಖರ ವಾಲಿ, ರಾಮದುರ್ಗ
ಪ್ರಾ. ಎ. ಬಿ. ಹಿರೇಮಠ, ಮುಂಡರಗಿ
ಡಾ.ಪ್ರದೀಪ್ ಮಾಲ್ಗುಡಿ, ಘಟಪ್ರಭ

Leave a Reply