ಧನ್ವಂತರಿ ಜಯಂತಿ ಪ್ರಯುಕ್ತ 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

2 years ago

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ, ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘ, ಜಿಲ್ಲಾ ಘಟಕ, ಅಶ್ವಿನಿ ತಪೋವನ ಮತ್ತು ಸುಶೃತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳು, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಮತ್ತು ನ್ಯಾಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್, ಶ್ರೀ ಧನ್ವಂತರಿ ಆಯುರ್ವೇದ ಔಷಧ ಪ್ರತಿನಿಧಿಗಳ ಸಂಘ ಹಾಗೂ ಆಯುರ್ವೇದ ಔಷಧಿ ವಿತರಕರು, ಮಾರಾಟಗಾರರು ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 29 ರಂದು ಬೆಳಿಗ್ಗೆ 10.30ಕ್ಕೆ ನಗರದ ಎಂ.ಸಿ.ಸಿ.ಬಿ ಬ್ಲಾಕ್ನಾಲ್ಲಿರುವ ಡಾ.ಸದ್ಯೋಜ್ಯಾತ ಶಿವಚಾರ್ಯ ಸ್ವಾಮಿಗಳ ಮಠದಲ್ಲಿ ಧನ್ವಂತರಿ ಜಯಂತಿಯ ದಿನದಂದು 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಯೋಜಿಸಲಾಗಿದೆ.

9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 21 ರಿಂದ 25 ರವರೆಗೆ ನಾರೀ ಸ್ವಾಸ್ಥ್ಯ ಹಾಗೂ ಸಬಲೀಕರಣಕ್ಕಾಗಿ ಆಯುರ್ವೇದ ಎಂಬ ಶೀರ್ಷಿಕೆಯಡಿಯಲ್ಲಿ ಹದಿಹರೆಯದ ಹೆಣ್ಣು ಮಕ್ಕಳ ಮತ್ತು ಮಹಿಳೆಯರ, ಪರಿಸರ ರಕ್ಷಣೆ ಹಾಗೂ ಸಸ್ಯ ಮತ್ತು ಪ್ರಾಣಿಗಳ, ಮಾನವನ ಸ್ವಾಸ್ಥ್ಯ ರಕ್ಷಣೆ ಯೋಗಕ್ಷೇಮದಲ್ಲಿ ಆಯುರ್ವೇದ ಪಾತ್ರಗಳ ಬಗ್ಗೆ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಆಯುಷ್ ಇಲಾಖೆಯಿಂದ ಹಮ್ಮಿಕೊಂಡು ಸಾರ್ವಜನಿಕರಿಗೆ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಮಹತ್ವ ಹಾಗೂ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದದ ಆವಿಷ್ಕಾರಗಳ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಯೋಗೇಂದ್ರಕುಮಾರ್. ಬಿ.ಯು. ತಿಳಿಸಿದ್ದಾರೆ.

Leave a Reply