ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಪ್ರತಿಷ್ಠಿತ ರಂಗ ವಾಹಿನಿ(ರಿ) ಸಂಸ್ಥೆಯು ಚಾಮರಾಜನಗರ ಜಿಲ್ಲೆಯ ಚೆಲುವ ಚಾಮರಾಜನಗರ ರಾಯಭಾರಿಯಾಗಿದ್ದ ಕನ್ನಡ ಚಲನಚಿತ್ರರಂಗದ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ನೆನಪಿನಲ್ಲಿ ಪುನೀತ – ಅಕ್ಷರ ನಮನ ಎಂಬ ಕವನ ಸಂಕಲನವೊಂದನ್ನು ಹೊರತರಲು ನಿರ್ಧರಿಸಿದೆ.
ಇದು ರಾಜ್ಯಮಟ್ಟದ್ದಾಗಿದ್ದು, ಯಾವುದೇ ಶುಲ್ಕವಿಲ್ಲದೆ ಆಸಕ್ತರು ಪುನೀತ್ ರಾಜಕುಮಾರ್ ಕುರಿತು 20 ಸಾಲುಗಳ ಮಿತಿಯಲ್ಲಿ ಕವಿತೆಯನ್ನು ಬರೆದು ಅಂಚೆ ಮೂಲಕ ದಿನಾಂಕ 30.1.2022ರ ಒಳಗಾಗಿ ಕಳಿಸಬಹುದು.
ವಿಳಾಸ: ಸಿ.ಎಂ.ನರಸಿಂಹಮೂರ್ತಿ, ಅಧ್ಯಕ್ಷರು, ರಂಗ ವಾಹಿನಿ(ರಿ) 10ನೇ ಕ್ರಾಸ್, ಕೋರ್ಟ್ ಎದುರು, ಚಾಮರಾಜನಗರ- 571313 ಅಥವಾ ಇ ಮೇಲ್ cmn.murthy@gmail.com
ಹೆಚ್ಚಿನ ವಿವರಗಳಿಗೆ ಸಂಪರ್ಕ ಸಂಖ್ಯೆ: 9916115263




