ಭೂಮಿಗೆ ಬಿದ್ದ ಮಳೆ ನೀರನ್ನು ವಾಪಸ್ ಆಕಾಶಕ್ಕೇ ಕಳಿಸಲು ಆಗುವುದಿಲ್ಲ: ಡಾ.ಜಿ.ಪರಮೇಶ್ವರ್

2 years ago

ಬೆಂಗಳೂರು: ರಾಜ್ಯದಲ್ಲಿ ಮಳೆ ಅವಾಂತರ ಸಂಬಂಧ ಪ್ರತಿಪಕ್ಷಗಳ ಆರೋಪವನ್ನು ಖಂಡಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಭೂಮಿಗೆ ಬಿದ್ದ ಮಳೆ ನೀರನ್ನು ವಾಪಸ್ ಆಕಾಶಕ್ಕೇ ಕಳಿಸಲು ಆಗುವುದಿಲ್ಲ. ಅದು ಭೂಮಿ ಮೇಲೆಯೇ ಹರಿದು ಹೋಗಬೇಕು ಎಂದು ತಿರುಗೇಟು ನೀಡಿದರು. 

ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಯಾವತ್ತಾದರೂ ಇಂಥ ಮಳೆ ನೋಡಿದೀವಾ ನಾವು? ಅದೂ ಅಕ್ಟೋಬರ್ನಲ್ಲಿ ಈ ತರ ಮಳೆ ಬಂದಿರುವುದು ಎಂದೂ  ಇಲ್ಲ. ಆದರೆ ಮಳೆ ಬರುತ್ತಿದೆ. ಇಷ್ಟು ಪ್ರಮಾಣದಲ್ಲಿ ಮಳೆ ಬಂದಾಗ ಎಂತಹದ್ದೇ ವ್ಯವಸ್ಥೆ ಇದ್ದರೂ ಅಸ್ತವ್ಯಸ್ತ ಆಗುತ್ತದೆ ಎಂದರು.

ನ್ಯೂಯಾರ್ಕ್ ನಲ್ಲಿ ಆಗಲ್ವಾ, ವಾಷಿಗ್ಟಂನ್ನಲ್ಲಿ ಆಗಲ್ವಾ, ಲಂಡನ್ ಆಗಲ್ವಾ, ಅಲ್ಲಿಯೂ ಈ ರೀತಿಯ ಮಳೆ ಬಂದಾಗ ಆಗಲಿದೆ, ಅದನ್ನು ನಿರ್ವಹಿಸುತ್ತಾ ಹೋಗಬೇಕು ಎಂದು ವಿಪಕ್ಷಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಡಿಜೆಹಳ್ಳಿ,ಕೆಜಿಹಳ್ಳಿ ಕೇಸ್ ವಾಪಾಸು  ಪಡೆಯಲಿದ್ದೇವೆ ಎಂದೂ ನಾನು ಎಲ್ಲೂ ಹೇಳಿಲ್ಲ. ಬಿ.ಕೆ.ಹರಿಪ್ರಸಾದ್ ಯಾವುದೋ ಕಾರಣಕ್ಕೆ ಹೇಳಿರಬಹುದು. ಅವರು ಹೇಳಿದ್ದಾರೆ ಎನ್ನುವ ಕಾರಣಕ್ಕೆ ನಾವು ಕೇಸ್ ವಾಪಸ್ ಪಡೆಯಲು ಆಗಲ್ಲ. ಪ್ರಸ್ತಾಪ ಬಂದಾಗ ಪರಿಶೀಲನೆ ಮಾಡುತ್ತೇವೆ ಎಂದರು.

ಗಲಭೆ ಕೇಸಗಳ ವಾಪಾಸು ಪಡೆಯುವಂತೆ ಯಾರೂ ಪತ್ರ ಬರೆದಿಲ್ಲ, ಪ್ರಸ್ತಾವನೆ ಬಂದಿಲ್ಲ. ಹಿಂದೆ ಪತ್ರ ಬರೆದಿದ್ದರೂ, ಅದು ಅಲ್ಲಿಗೇ ನಿಂತಿದೆ. ಈಗ ಪ್ರಸ್ತಾಪ ಬಂದರೆ ಪರಿಶೀಲನೆ ಮಾಡುತ್ತೇವೆ. ಪ್ರಸ್ತಾಪ ಬಂದರೆ ಸಂಪುಟ ಉಪಸಮಿತಿಯ ಮುಂದಿಡುತ್ತೇವೆ. ನಂತರ ಸಂಪುಟದಲ್ಲಿ ಚರ್ಚೆ ಆಗುತ್ತದೆ. ಹುಬ್ಬಳ್ಳಿ ಕೇಸ್ ವಾಪಾಸ್ ವಿಚಾರದಲ್ಲಿ ಕೋರ್ಟ್ ಯಾವ ತೀರ್ಮಾನಡುತ್ತದೆ ನೋಡಬೇಕು ಎಂದರು.

ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯವರು ವಾಲ್ಮೀಕಿ ನಿಗಮ ಪ್ರಕರಣ ಬಗ್ಗೆ ಪ್ರಚಾರ ಮಾಡಬಹುದು ಎಂಬ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ. ಇದನ್ನೇ ನಾವು ಚುನಾವಣಾ ಪ್ರಚಾರ ವೇಳೆ ಹೇಳುತ್ತೇವೆ. ದದ್ದಲ್ ಅವರನ್ನು ವಿಚಾರಣೆಗೆ ಕರೆದಿದ್ರು. ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲ. ನಾಗೇಂದ್ರ ಅವರ ವಿಚಾರಣೆಯೂ ಆಗಿದೆ ಎಂದರು.

ಮುಡಾ ಪ್ರಕರಣದಲ್ಲಿ ಎ1, ಎ2 ಆರೋಪಿಗಳನ್ನು ವಿಚಾರಣೆ ಮಾಡುತ್ತಿಲ್ಲ ಎಂದು ಸ್ನೇಹಮಯಿ ಕೃಷ್ಣ ದೂರು ಕೊಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಲೋಕಾಯುಕ್ತರ ಕಾರ್ಯವೈಖರಿ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರು ಅವರ ಕೆಲಸ ಮಾಡುತ್ತಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ಯಾವಾಗ ಯಾರನ್ನು ವಿಚಾರಣೆಗೆ ಕರೆಯಬೇಕು ಅಂತ ಗೊತ್ತಿದೆ. ಅದರಂತೆ ಅವರು ವಿಚಾರಣೆಗೆ ಕರೀತಾರೆ. ಅವರನ್ನು ಕರೆದಿಲ್ಲ ಇವರನ್ನು ಕರೆದಿಲ್ಲ ಅಂತ ನಾವು ಹೇಳುವುದಕ್ಕೆ ಆಗಲ್ಲ ಎಂದರು.

Leave a Reply