ವಿಶ್ವ ನದಿಗಳ ದಿನಾಚರಣೆಯ ಅಂಗವಾಗಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ

2 years ago

ದಾವಣಗೆರೆ: ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ದೊಡ್ಡಬಾತಿ ಹಾಗೂ ಹರಿಹರ ನಗರಸಭೆ ಇವರ ಸಹಯೋಗದೊಂದಿಗೆ ವಿಶ್ವ ನದಿಗಳ ದಿನಾಚರಣೆಯ ಅಂಗವಾಗಿ ಹರಿಹರ ನಗರ ತುಂಗಾಭದ್ರ ನದಿಯ ದಡದಲ್ಲಿ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ  ರಾಜ್ಯ ಮಟ್ಟದ ಸಮನ್ವಯ ಸಂಸ್ಥೆಯ ನಿರ್ದೇಶಕ ಡಾ. ಶಶಿಕುಮಾರ್ ಮೆಹರ್ವಾಡೆ ಇವರ ಮಾರ್ಗದರ್ಶನದಲ್ಲಿ ಸಂಸ್ಥೆಯ ಸಂಯೋಜಕರಾದ ಶೈಲಾಶ್ರೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ಮಹತ್ವ ಹಾಗೂ ಅದನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಬೇಕು, ನದಿಗಳು ಮಾನವ ಕುಲಕ್ಕೆ ವರದಾನವಾಗಿದೆ, ಅವುಗಳನ್ನು ನಮ್ಮ ಮುಂದಿನ ಸಂಕುಲಕ್ಕೂ ಮೀಸಲಿಡಬೇಕು ಎಂದು ತಿಳಿಸಿದರು.

ನದಿಗಳ ಬದಿ ಕಸ ಹಾಕುವುದರಿಂದ ಜಲಚರ ಪ್ರಾಣಿಗಳು ವಿನಾಶದ ಹಂಚಿನಲ್ಲಿ ಸಾಗುತ್ತಿವೆ, ಹಾಗಾಗಿ ನದಿ ಬದಿ ಕಸವನ್ನು ಹಾಕದಂತೆ ಎಲ್ಲರೂ ಹೆಚ್ಚರಿಕೆ ವಹಿಸಬೇಕು. ಜನರ ಉತ್ತಮ ಅರೋಗ್ಯದ ವಿಷಯವಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿ ಪ್ರತಿಜ್ಞಾ ವಿಧಿ ಭೋದಿಸಿದರು.

ಕಾರ್ಯಕ್ರಮದಲ್ಲಿ ನದಿ ಬದಿಯ ಬಟ್ಟೆ, ಕಸ, ಪ್ಲಾಸ್ಟಿಕ್, ಸ್ವಚ್ಛಗೊಳಿಸಿ ನಗರಸಭೆಯ ಕಸವಿಲೇವಾರಿ ವಾಹನದಲ್ಲಿ ಕಳುಹಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷಕ ಹನುಮಂತಪ್ಪ, ಕಾರ್ಯಕ್ರಮ ಸಹಾಯಕ ಅಧಿಕಾರಿ ಜಗದೀಶ್, ಎಸ್.ಎಲ್.ಸಿ.ಎ ಸಿಬ್ಬಂದಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.

Leave a Reply