ಬೆಂಗಳೂರು: ಭಾರತವು 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಆರ್ವಿ ವಿಶ್ವವಿದ್ಯಾನಿಲಯವು ದೇಶಭಕ್ತಿ ಜೊತೆಗೆ ಪರಿಸರ ಪ್ರೀತಿಯನ್ನು ಸೇರಿಸಿದೆ. ಬೆಂಗಳೂರು ರೋಟರಿ ಇ-ಕ್ಲಬ್ ನ ಸಹಭಾಗಿತ್ವದಲ್ಲಿ ಕ್ಯಾಂಪಸ್ ನಲ್ಲಿ ಗಿಡಗಳನ್ನು ನೆಟ್ಟು ಹಸಿರು ಪರಿಸರಕ್ಕೆ ಕೊಡುಗೆ ನೀಡುವ ಮೂಲಕ ಆರ್ವಿ ವಿಶ್ವವಿದ್ಯಾನಿಲಯವು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿತು.
- ದೇಶದ ರಾಜ್ಯಗಳಲ್ಲಿ ಕೊನೆಯ ಬಾರಿ ಕಾಂಗ್ರೆಸ್ ಸಿಎಂ ಇದ್ದದ್ದು ಯಾವಾಗ?
- ನಮ್ಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸಿದ್ದರಾಮಯ್ಯ ಸ್ಫೂರ್ತಿ: ಪ್ರಿಯಾಂಕ್ ಖರ್ಗೆ
- ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸಿದ್ದರಾಮಯ್ಯ ಹೇಳಿದ್ದೇನು?
- ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ: ಯಾರು, ಏನೆಂದರು?
- ಹಣಕಾಸು ಮಂತ್ರಿಗಳಾಗಿ ಸಿದ್ದರಾಮಯ್ಯ ಸಾಧಿಸಿದ ಆರ್ಥಿಕ ಶಿಸ್ತು ಒಂದು ಪಠ್ಯದಂತಿದೆ: ಬಿ ಶ್ರೀಪಾದ ಭಟ್
ಆರ್ವಿ ವಿಶ್ವವಿದ್ಯಾನಿಲಯದ ಅಡ್ಮಿನಿಸ್ಟ್ರೇಟಿವ್ ಬ್ಲಾಕ್ನಲ್ಲಿ ಬೆಳಿಗ್ಗೆ 8:00 ರಿಂದ 9:30ರವರೆಗೆ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ಆರ್ಐ ಡಿಸ್ಟ್ರಿಕ್ಟ್ 3191ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಎಲ್ಲರೂ ಸೇರಿ ರಾಷ್ಟ್ರಗೀತೆಯನ್ನು ಹಾಡುವುದರ ಮೂಲಕ ದೇಶಪ್ರೇಮ ಮೆರೆದರು.
ಈ ಸಂದರ್ಭದಲ್ಲಿ ಭಾಗವಹಿಸಿದವರು ಕ್ಯಾಂಪಸ್ ನಲ್ಲಿ ಸುಮಾರು 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು. ಈ ಮೂಲಕ ಆರ್ವಿ ವಿಶ್ವವಿದ್ಯಾಲಯವು ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತ ಬದ್ಧತೆಯನ್ನು ತೋರಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಆರ್ವಿ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ವೈ.ಎಸ್.ಆರ್. ಮೂರ್ತಿ, ಸ್ವಾತಂತ್ರೋತ್ಸವದಂದು ಹಸಿರು ಮತ್ತು ಸುಸ್ಧಿರ ಭವಿಷ್ಯಕ್ಕೆ ಬೀಜ ಬಿತ್ತಿದ್ದೇವೆ. ಈ ಮೂಲಕ ದೇಶಪ್ರೇಮ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಿದ್ದೇವೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಮತ್ತು ಪರಿಸರ ಪ್ರಜ್ಞೆ ಬೆಳೆಸುವ ಉದ್ದೇಶ ಹೊಂದಿದ್ದೇವೆ ಎಂದರು.
ಆರ್ಐ ಡಿಸ್ಟ್ರಿಕ್ಟ್ 3191ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಮಾಧವನ್ ಮಾತನಾಡಿ, ಗಿಡ ನೆಡುವ ಕಾರ್ಯಕ್ರಮ ಸ್ಫೂರ್ತಿದಾಯಕವಾಗಿದೆ. ಆರ್ವಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕಡೆಗೆ ಗಮನ ಹರಿಸುವುದನ್ನು ನೋಡಲು ಸಂತೋಷವಾಗಿದೆ. ಆರ್ವಿ ವಿಶ್ವವಿದ್ಯಾಲಯವು ಅರ್ಥಪೂರ್ಣವಾಗಿ ಮಹತ್ವಪೂರ್ಣವಾಗಿ ಸ್ವಾತಂತ್ರ್ಯ ದಿನ ಆಚರಿಸಿದೆ ಎಂದರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮತ್ತು ಸುಸ್ಥಿರ ಪ್ರಜ್ಞೆ ಮೂಡಿಸುವ ಆರ್ವಿ ವಿಶ್ವವಿದ್ಯಾಲಯದ ಪ್ರಯತ್ನವನ್ನು ಸಾರಿದೆ. ಕಾರ್ಯಕ್ರಮದ ಕೊನೆಗೆ ಆರ್ವಿ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಸಹನಾ ಗೌಡ ಧನ್ಯವಾದ ಸಮರ್ಪಣೆ ಮಾಡಿದರು.







