ಆಗಸ್ಟ್ 10ರಂದು ಕೆಪಿಸಿಸಿಗೆ ಆಗಮಿಸಲಿದೆ ರಾಜೀವ್ ಗಾಂಧಿ ಜ್ಯೋತಿ ಯಾತ್ರೆ

2 years ago

ಆಗಸ್ಟ್ 9ರಿಂದ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಶ್ರೀ ಪೆರಂಬೂರಿನಿಂದ ಚಾಲನೆ ಆಗಸ್ಟ್ 19ನೇ ನವದೆಹಲಿಗೆ ತಲುಪಲಿದೆ

ಬೆಂಗಳೂರು: ಕೆಪಿಸಿಸಿ ಭಾರತ್ ಜೋಡೋ ಸಭಾಂಗಣದಲ್ಲಿ ರಾಜೀವ್ ಗಾಂಧಿ ಯಾತ್ರಾ ಸಮಿತಿ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಜನ್ಮದಿನದ ಪ್ರಯುಕ್ತ ಆಗಸ್ಟ್ 9 ರಿಂದ ಶ್ರೀಪೆರಂಬದೂರಿನಿಂದ ಆರಂಭವಾಗಿ 19ನೇ ಆಗಸ್ಟ್ 19ರಂದು ದೆಹಲಿಯಲ್ಲಿ ರಾಜೀವ್ ಗಾಂಧಿ ಜ್ಯೋತಿ ಯಾತ್ರೆ ಸಮಾರೋಪಗೊಳ್ಳಲಿದೆ.

ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿ ಅಧ್ಯಕ್ಷ ಆರ್.ದೊರೈ, ಉಪಾಧ್ಯಕ್ಷ ಅಯ್ಯರ್, ಉಪಾಧ್ಯಕ್ಷ ರಾಜಣ್ಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಪ್ಪ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೇ ವೇಳೆ ಮಾತನಾಡಿದ ಆರ್.ದೊರೈ, ಕಳೆದ 33 ವರ್ಷಗಳಿಂದ ನಡೆಯುತ್ತಿರುವ ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು 09 ಆಗಸ್ಟ್ 2024 ರಂದು ಶ್ರೀಪೆರಂಬದೂರಿನಿಂದ ಪ್ರಾರಂಭವಾಗಲಿದೆ. ಆಗಲಿದ ನಾಯಕ ಮಾಜಿ ಪ್ರಧಾನಿ ಶ್ರೀ ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಆಗಸ್ಟ್ 19, 2024 ರಂದು ನವದೆಹಲಿ ತಲುಪಲಿದೆ. 80ನೇ ಜನ್ಮ ವಾರ್ಷಿಕೋತ್ಸವವು ವಿವಿಧ ಪಟ್ಟಣಗಳಲ್ಲಿ ಹಾದುಹೋಗುತ್ತದೆ ಎಂದರು.

ಜ್ಯೋತಿಯನ್ನು ಗೌರವಾನ್ವಿತ ಟಿಎನ್‌ಸಿಸಿ ಅಧ್ಯಕ್ಷ ಕೆ. ಸೆಲ್ಮಪೆರುಂತಗೆ, ಸಿಎಎಲ್ ನಾಯಕ ರಾಜೇಶ್ ಮುರುಗಾನಂದಂ ಜಿ, ಟಿಎನ್ ಅಜಯ್‌ಕುಮಾರ್ ಮತ್ತು ಪುದುಚೇರಿ ಅಧ್ಯಕ್ಷ ವಿ ಚೈತಲಿಂಗಂ ಅವರು ಉದ್ಘಾಟಿಸಲಿದ್ದಾರೆ, ಜೊತೆಗೆ, ಕೆ.ಎಚ್.ಮುನಿಯಪ್ಪ, ದಿನೇಶ್ ಗುಂಡೂರಾವ್ ಮತ್ತು ಎಲ್ಲಾ ಸಂಸದರು ಮತ್ತು ಶಾಸಕರು ಶ್ರೀಪೆರಂಬದೂರಿನಲ್ಲಿ ಆಗಸ್ಟ್ 9, 2024 ರಂದು ಬೆಳಗ್ಗೆ 9:00 ಗಂಟೆಗೆ, ಕ್ರಿಟ್ ಇಂಡಿಯಾ ಚಳವಳಿಯ ದಿನದಂದು “ಭಯೋತ್ಪಾದನೆ ತೊರೆಯಿರಿ” ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

10ನೇ ಆಗಸ್ಟ್ 2024 ರಂದು ಬೆಳಿಗ್ಗೆ 9:00 ಗಂಟೆಗೆ ಕೆಪಿಸಿಸಿ ಕ್ರೀನ್ ರಸ್ತೆಯಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಗೃಹ ಸಚಿವ ಜಿ.ಪರಮೇಶ್ವರ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್ ಖಾನ್, ಇಂಧನ ಸಚಿವ ಕೆ.ಜೆ. ಜಾರ್ಜ್, ಶಾಸಕ ಎಂ.ಕೃಷ್ಣಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಶಾಸಕ ಪ್ರಿಯಾ ಕೃಷ್ಣ  ಶಾಸಕ ಎಚ್.ಆರ್.ಗವಿಯಪ್ಪ  ಮತ್ತು ಎಲ್ಲಾ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಜ್ಯೋತಿಯನ್ನು 19ನೇ ಆಗಸ್ಟ್ 2024ರಂದು ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಗೆ ತಲುಪಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಜಯ್‌ ಮಾಕೆನ್, ರಣದೀಪ್ ಸಿಂಗ್ ಸುರ್ಜೆವಾಲಾ, ಪ್ರಿಯಾಂಕಾ ಗಾಂಧಿ ವಾದ್ರಾ, ಕೆ.ಸಿ. ವೇಣುಗೋಪಾಲ್, ಎಚ್.ಕೆ ಪಾಟೀಲ್, ಬಿ.ಕೆ.ಹರಿಪ್ರಸಾದ್ ಮತ್ತು ಎಲ್ಲಾ ಸಂಸದರು ಶಾಸಕರು ಮತ್ತು ಎಲ್ಲಾ ನಾಯಕರು ಪಾಲ್ಗೊಳ್ಳಲಿದ್ದಾರೆ ಎಂದರು.

ರಾಜೀವ್ ಜ್ಯೋತಿ ಯಾತ್ರಾ ಸಮಿತಿಯು ಭಯೋತ್ಪಾದನೆ ವಿರೋಧಿ ಸಂದೇಶವನ್ನು ಸಾರುತ್ತದೆ ಮತ್ತು ರಾಷ್ಟ್ರವನ್ನು ನಿರ್ಮಿಸಲು ಮತ್ತು ದೇಶದ ಎಕತೆಯನ್ನು ಬಲಪಡಿಸಲು ರಾಜೀವ್ ಗಾಂಧಿಜೀ ಅವರ ಕೊಡುಗೆಯನ್ನು ಸಾರುತ್ತದೆ. ರಾಜೀವ್ ಜ್ಯೋತಿ ಸದ್ಭಾವನಾ ಯಾತ್ರೆಯು ಸಹೋದರತ್ವದ ಸಂದೇಶವನ್ನು ಪಸರಿಸುತ್ತದೆ ಏಕತೆ ಮತ್ತು ಭಯೋತ್ಪಾದನೆ ವಿರುದ್ಧ ದೃಢವಾದ ಕ್ರಮ ಕೈಗೊಳ್ಳಿ ಎಂದು. ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ನಮ್ಮ ದೇಶದಲ್ಲಿ ಭಯೋತ್ಪಾದನೆಯ ಅಪಾಯಕಾರಿ ಚಟುವಟಿಕೆಗಳ ನಿಗ್ರಹವಾಗಲಿ, ದೇಶದಲ್ಲಿ ಶಾಂತಿ ನೆಲಸಲಿ ಎಂಬುದು ರಾಜೀವ್ ಗಾಂಧಿ ಜ್ಯೋತಿ ಯಾತ್ರೆಯ ಉದ್ದೇಶವಾಗಿದೆ ಎಂದರು.

Leave a Reply