ಲಖ್ನೋ: 8ನೇ ತರಗತಿ ವಿದ್ಯಾರ್ಥಿ ತನ್ನನ್ನು ಶಾಲೆಯಿಂದ ಹೊರಗೆ ಹಾಕಿದ ಕಾರಣಕ್ಕೆ ನೊಂದು ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉತ್ತರ ಪ್ರದೇಶದ ಕುಶಾರದಲ್ಲಿ ವರದಿಯಾಗಿದೆ. ಶಾಲೆಯಲ್ಲಿ ಶಿಕ್ಷಕರು ಥಳಿಸಿ, ಶಾಲೆಯಿಂದ ಹೊರಹಾಕಿದ್ದರಿಂದ ಬಾಲಕ ಆತ್ಮಹತ್ಯೆಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥೀ ಮತ್ತು ಆತನ ತಮ್ಮ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಅಣ್ಣನನ್ನು ಥಳಿಸಿದ ಕಾರಣಕ್ಕೆ ಪ್ರತಿಭಟನೆ ನಡೆಸಿದ್ದ. ಅನಂತರ ಪ್ರಾಂಶುಪಾಲರ ಬಳಿ ಕರೆದೊಯ್ದು ಥಳಿಸಲಾಗಿತ್ತು. ಘಟನೆ ನಡೆದ 1 ದಿನದ ನಂತರ ಆತನನ್ನು ಶಾಲೆಯಿಂದ ಹೊರ ಹಾಕಲಾಗಿತ್ತು. ನೊಂದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.



