ಬೀದಿಬದಿ ವ್ಯಾಪಾರಸ್ಥರಿಂದ ಗುರುತಿನ ಚೀಟಿ, ಸ್ವ-ಸಹಾಯ ಗುಂಪು ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

2 years ago

ಬಳ್ಳಾರಿ: ಸಿರುಗುಪ್ಪ ನಗರಸಭೆ ವ್ಯಾಪ್ತಿಯಲ್ಲಿ ದೀನ್ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪ್ರಸ್ತಕ ಸಾಲಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ಸಂಘಗಳಿಗೆ ಸಾಲ-ಸೌಲಭ್ಯ ಹಾಗೂ ಬೀದಿ ಬದಿ ವ್ಯಾಪಾರಸ್ಥರು ಗುರುತಿನ ಚೀಟಿ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇರುವ ಸ್ವ-ಸಹಾಯ ಗುಂಪಿನಲ್ಲಿ ಸದಸ್ಯರಿರುವ ಕುಟುಂಬದ ಅರ್ಹ ಫಲಾನುಭವಿಗಳಿಂದ ಗುಂಪು ಉದ್ದಿಮೆ ಶೀಲತೆ (ಸಾಲ ಮತ್ತು ಸಹಾಯಧನ) ಚಟುವಟಿಕೆಗಳಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಮಹಿಳಾ ಸ್ವ-ಸಹಾಯ ಗುಂಪು ಹಾಗೂ ಪ್ರದೇಶ ಮಟ್ಟದ ಒಕ್ಕೂಟವನ್ನು ರಚಿಸಲು ಆಸಕ್ತಿ ಹೊಂದಿದ ಅರ್ಹ ಫಲಾನುಭವಿಗಳು ಅಥವಾ ಗುಂಪುಗಳು ಅರ್ಜಿ ಸಲ್ಲಿಸಬಹುದಾಗಿದೆ. ಬೀದಿ ಬದಿ ವ್ಯಾಪಾರಿಗಳು ಗುರುತಿನ ಚೀಟಿಗಾಗಿ ಸಹ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವ ಫಲಾನುಭವಿಗಳು ಸಿರುಗುಪ್ಪ ನಗರಸಭೆ ನಿವಾಸಿಯಾಗಿದ್ದು, ಬಡತನರೇಖೆ ಕೆಳಗಿನ ಕುಟುಂಬದವರಾಗಿರಬೇಕು, ಅರ್ಜಿ ಸಲ್ಲಿಸುವ ಕೊನೆಯ ದಿನ ಜೂ.29 ಆಗಿರುತ್ತದೆ. ಅರ್ಜಿಗಳನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.

ಬೇಕಾದ ದಾಖಲೆಗಳು:
ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಿದ್ಯಾರ್ಹತೆ ಪ್ರಮಾಣ ಪತ್ರ, ಮೂರು ಭಾವಚಿತ್ರಗಳು, ಸ್ವಯಂ ಉದ್ಯೋಗದ ಬಗ್ಗೆ ಭಾವಚಿತ್ರ, ಗುಂಪಿಗೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್, ಅಂಗವಿಕಲರಿದ್ದಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಿರುಗುಪ್ಪ ನಗರಸಭೆ ಕಾರ್ಯಾಲಯ ಹಾಗೂ ಮೊ.7353745626 ಗೆ ಸಂಪರ್ಕಿಸಬಹುದು.

Leave a Reply