ಭಾರತದ ಜನ ಇತಿಹಾಸ ಮಾಲೆಯ ಪುಸ್ತಕಗಳು ಕರ್ನಾಟಕದ ಇತಿಹಾಸ ವಿದ್ಯಾರ್ಥಿಗಳಿಂದ ಬಹಳ ಬೇಡಿಕೆಯಲ್ಲಿರುವ ಪುಸ್ತಕಗಳು. ಮೂಲ ಇಂಗ್ಲೀಷ್ ನಲ್ಲಿ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ ಪುಸ್ತಕ ಮಾಲೆಯನ್ನು ಅಲಿಗರ್ ಹಿಸ್ಟೋರಿಯನ್ ಸೊಸೈಟಿ ಪ್ರಕಟಿಸುತ್ತಿದೆ.
ಈ ಸರಣಿಯಲ್ಲಿ ಇದುವರೆಗೆ 15 ಪುಸ್ತಕ ಪ್ರಕಟವಾಗಿದೆ. ಇನ್ನು 21 ಪುಸ್ತಕ ಪ್ರಕಟವಾಗಲಿದೆ. ಈಗಾಗಲೇ ಪ್ರಕಟವಾಗಿರುವ 15 ಪುಸ್ತಕಗಳಲ್ಲಿ ಚಿಂತನ ಪುಸ್ತಕವು ಈಗಾಗಲೇ 6 ಪುಸ್ತಕಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದು, ಈಗ ಬಿಡುಗಡೆಯಾಗುತ್ತಿರುವ 3 ಪುಸ್ತಕಗಳನ್ನು ಸೇರಿಸಿದರೆ 9 ಪುಸ್ತಕ ಕನ್ನಡಕ್ಕೆ ಅನುವಾದವಾಗಿವೆ. ಇಂಗ್ಲೀಷ್ ನಲ್ಲಿ ಪ್ರಕಟವಾಗಿರುವ 15 ಪುಸ್ತಕಗಳಲ್ಲಿ ಉಳಿದ 6 ಪುಸ್ತಕ ಅನುವಾದದ ಹಂತದಲ್ಲಿವೆ.
ಈಗ ಬಿಡುಗಡೆಯಾಗುತ್ತಿರುವ ಪುಸ್ತಕಗಳು:
ಪುಸ್ತಕ ಮಾಲಿಕೆ: ಭಾರತದ ಜನ ಇತಿಹಾಸ – 06
ಮೌರ್ಯರ ನಂತರದ ಭಾರತ – ರಾಜಕೀಯ ಮತ್ತು ಆರ್ಥಿಕ ಇತಿಹಾಸ – ಕ್ರಿ.ಪೂ.200 ಕ್ರಿ.ಶ.300; ಲೇಖಕರು : ಇರ್ಫಾನ್ ಹಬೀಬ್; ಅನುವಾದಕರು : ಎಸ್.ಎನ್.ಸ್ವಾಮಿ
ಪುಸ್ತಕ ಮಾಲಿಕೆ: ಭಾರತದ ಜನ ಇತಿಹಾಸ – 07
ಮೌರ್ಯಾನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ ಕ್ರಿ.ಪೂ.200 ಕ್ರಿ.ಶ.300; ಲೇಖಕರು : ಭೈರಬಿ ಪ್ರಸಾದ್ ಸಾಹು ಕೇಶವನ್ ವೇಲುತಾಟ್; ಅನುವಾದಕರು: ಟಿ.ವೆಂಕಟೇಶ ಮೂರ್ತಿ
ಭಾರತದ ಆರ್ಥಿಕತೆ ಬ್ರಿಟಿಷ್ ಆಳ್ವಿಕೆಯ ಪ್ರಾರಂಭಿಕ ಹಂತದಲ್ಲಿ 1757-1857; ಲೇಖಕರು : ಇರ್ಫಾನ್ ಹಬೀಬ್; ಅನುವಾದಕರು : ಕೆ.ಎಮ್.ಲೋಕೇಶ್
ಈ ಮೂರೂ ಪುಸ್ತಕಗಳು ಮಾರ್ಚ್ 13, 2021 ಶನಿವಾರ ಸಂಜೆ 5:00 ರಿಂದ ZOOM ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಈ ಪುಸ್ತಕಗಳನ್ನು ಬಿಡುಗಡೆಯನ್ನು ಸ್ವತಃ ಇಂಗ್ಲೀಷ್ ಪುಸ್ತಕ ಸರಣಿ ಪೀಪಲ್ಸ್ ಹಿಸ್ಟರಿ ಆಫ್ ಇಂಡಿಯಾ ದ ಜನರಲ್ ಎಡಿಟರ್ ಹಾಗೂ ಸರಣಿಯ ಕೆಲವು ಪುಸ್ತಕಗಳ ಲೇಖಕರೂ ಆಗಿರುವ ಹೆಸರಾಂತ ಇತಿಹಾಸಜ್ಞ ಪ್ರೊ.ಇರ್ಫಾನ್ ಹಬೀಬ್ ನಡೆಸಿಕೊಟ್ಟು ಈ ಪುಸ್ತಕ ಸರಣಿಯ ಮಹತ್ವದ ಬಗ್ಗೆ ತಿಳಿಸಿಕೊಡಲಿದ್ದಾರೆ.
ಆಸಕ್ತರು ಈ ಕೆಳಗಿನ ಕೊಂಡಿಯ ಮೇಲೆ ಚಿಟಿಕೆ ಹೊಡೆದು ನಡೆಯಲಿರುವ ವೆಬಿನಾರ್ ಗೆ ಹೆಸರು ನೊಂದಾಯಿಸಬಹುದು
https://us02web.zoom.us/meeting/register/tZ0pcuuvpjMrHNZS91gr6zEpE29Wk4v1ZJsq




