ಗೌರೀಶ್ ಅಕ್ಕಿಯವರಿಗೆ ಬೆಸ್ಟ್ ಅಂಕರ್ ಮತ್ತು ಯುಟ್ಯೂಬರ್ ಅವಾರ್ಡ್
ಬೆಂಗಳೂರು: Indian business icons ಸಂಸ್ಥೆಯಿಂದ ಕೊಡಲಾಗುವ ವಾರ್ಷಿಕ ಪ್ರಶಸ್ತಿಗಳಲ್ಲಿ ಈ ವರ್ಷ “ಬೆಸ್ಟ್ ಅಂಕರ್ ಮತ್ತು ಯುಟ್ಯೂಬರ್ ಅವಾರ್ಡ್” ಸೇರಿದೆ. ಈ ಬಾರಿಯ ಪ್ರಶಸ್ತಿಯನ್ನು ನಿರೂಪಕ ಗೌರೀಶ ಅಕ್ಕಿಯವರಿಗೆ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೌರೀಶ್ ಅಕ್ಕಿ ಇದು Gaurish Akki Studio ಯೂಟ್ಯೂಬ್ ಚಾನೆಲ್ ನ ಎಲ್ಲ ಸಬ್ ಸ್ಕ್ರೈಬರ್ ಗಳಿಗೆ ಮತ್ತು ಮಿತ್ರರಿಗೆ ಸಲ್ಲಬೇಕು. ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.



