ಬಾಗಲಕೋಟೆ: ಕಾರು ಪಲ್ಟಿಯಾಗಿ ಘಟಪ್ರಬಾ ಕಾಲುವೆಗೆ ಉರುಳಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ಸಂಭವಿಸಿದೆ. ನಿನ್ನೆ ತಡರಾತ್ರಿ ಈ ದುರಂತ ನಡೆದಿದ್ದು, ಕಾರಿನಲ್ಲಿ ಮುಧೋಳದಿಂದ ರಾಮದುರ್ಗದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಕಲ್ಲಿಗೆ ಕಾರು ಡಿಕ್ಕಿ ಹೊಡೆದು ಕಾಲುವೆಗೆ ಉರುಳಿದೆ. ಅಪಘಾತದಲ್ಲಿ ಬಲಿಯಾದವರನ್ನು ಮಹದೇವಗೌಡ (27), ಎರಿತಾತಾ (26), ವಿಜಯ್ (26), ಸುನೀಲ್ (24) ಎಂದು ಗುರುತಿಸಲಾಗಿದೆ.




