ಮುಂಬೈ: ರತನ್ ಎಂಬ ವಯೋವೃದ್ಧ ಮಹಿಳೆ ಪುಣೆಯ ಎಂಜಿ ರಸ್ತೆಯಲ್ಲಿ ಬಣ್ಣಬಣ್ಣ ಪೆನ್ಗಳನ್ನು ಕಾರ್ಡ್ಬೋರ್ಡ್ ಡಬ್ಬದಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ. “ನನಗೆ ಭಿಕ್ಷೆ ಬೇಡಲು ಇಷ್ಟವಿಲ್ಲ. ದಯವಿಟ್ಟು 10 ರೂ.ನ ನೀಲಿ ಬಣ್ಣದ ಪೆನ್ಗಳನ್ನು ಖರೀದಿಸಿ. ಧನ್ಯವಾದ. ದೇವರು ನಿಮಗೆ ಆಶೀರ್ವದಿಸಲಿ” ಎಂದು ರತನ್ ಆ ರಟ್ಟಿನ ಡಬ್ಬದ ಮೇಲೆ ಬರೆದುಕೊಂಡಿದ್ದಾರೆ.
ಈ ವಿಷಯವನ್ನು ಸ್ಟುಡಿಯೋ ಮಾಲಕಿ, ಉದ್ಯಮಿ ಶಿಖಾ ರತಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ತಾವು ಹೊರಗೆ ಹೋಗಿದ್ದ ಸಮಯದಲ್ಲಿ ಆದ ಅನುಭವವನ್ನು ಷೇರ್ ಮಾಡಿದ್ದಾರೆ. ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಜಾಲತಾಣಿಗರು, ತಕ್ಷಣ ಎಂಜಿರಸ್ತೆಗೆ ಹೋಗಿ ಹಿರಿಯ ಜೀವವನ್ನು ನೋಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.




