ಅಂಜನಾದ್ರಿ ಬೆಟ್ಟದಲ್ಲಿ ಜನ ಸಂದಣಿ

5 years ago

ವಿಜಯನಗರ: ನವರಾತ್ರಿ, ದಸರಾ ಹಬ್ಬ ಹಿನ್ನೆಲೆಯಲ್ಲಿ ಸಾಲುಸಾಲು ರಜೆಗಳ ಕಾರಣ ಹೊಸಪೇಟೆಯ ಅಂಜನಾದ್ರಿ ಕಿಷ್ಕಿಂಧಾ ಪ್ರದೇಶಕ್ಕೆ ಶನಿವಾರ ಮತ್ತು ಭಾನುವಾರ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ದಾಂಗುಡಿ ಇಟ್ಟಿದ್ದಾರೆ.

ಅಂಜನಾದ್ರಿ ಶ್ರೀ ಆಂಜನೇಯನ ದರ್ಶನ ಪಡೆಯಲು ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು 575 ಮೆಟ್ಟಿಲುಗಳನ್ನು ಹತ್ತಲು ಕಿಲೋಮೀಟರ್ ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದರು. ಆನೆಗೊಂದಿ ಭಾಗದಲ್ಲಿ ಅಂಜನಾದ್ರಿ ಪಂಪಾ ಸರೋವರ, ಚಿಂತಾಮಣಿ ಋಷಿಮುಖ ಪರ್ವತ, ರಾಣಾಪುರ್ ಲೇಕ್, ಸಾಣಾಪುರ ವಾಟರ್ ಫಾಲ್ಸ್ ಸೇರಿದಂತೆ ಸೂರ್ಯೋದಯ ಮತ್ತು ಸೂರ್ಯಾಸ್ತ ವಾಗುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಐಟಿ ಬಿಟಿ ಉದ್ಯೋಗಿಗಳು ಮತ್ತು ಭಕ್ತರು ಬರುತ್ತಾರೆ. ಶನಿವಾರ ಮತ್ತು ಭಾನುವಾರ ಸುಮಾರು ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಅಂಜನಾದ್ರಿ ಪರ್ವತಕ್ಕೆ ಬಂದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply