ದೇಶದಲ್ಲಿ ಭ್ರಷ್ಟಾಚಾರ ನಿಲ್ಲಬೇಕು. ಯಾವ ಪಕ್ಷಗಳು ಅತೀತ ಅಲ್ಲ. ಸ್ವಿಸ್ ಬ್ಯಾಂಕ್ ನಿಂದ ಹಣತರುತ್ತೀವಿ ಎಂದು ಹೇಳಿಕೆ ನೀಡಿದ ಮೋದಿ ವರು ತಂದಿದ್ದಿರೆ ನಮ್ಮ ದೇಶದ ಭ್ರಷ್ಟಚಾರ ನಿಲ್ಲುತ್ತಿತ್ತು. ಆದರೆ ಈಗ ದ್ವಿಗುಣ ಆಗಿದೆ ಎನ್ನುತ್ತಾರೆ. ಹಾಗಾದರೆ ಈಗ ಅಲ್ಲಿ ಇಡುತ್ತಿರುವರು ಯಾರು?
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಇನ್ನೊಂದು ಜನ ಲೋಕಪಾಲ್ ಸಂಸ್ಥೆ ಜಾರಿಗೆ ಬರಬೇಕೆಂದು ಹೋರಾಟ ಆರಂಭ ಮಾಡಿದರು. ಅಣ್ಣಾ ಹಜಾರೆಗೆ ಆಗ ಪ್ರತ್ಯಕ್ಷ ಪರೋಕ್ಷ ಬೆಂಬಲ ನೀಡಿದವರು ಸಂಘ ಪರಿವಾರ,ಜನತೆ ಪೂರ್ಣವಾಗಿ ಬೆಂಬಲಿಸಿದರು. ಜನಲೋಕಪಾಲ್ ಸಂಸ್ಥೆ ಜಾರಿಗೆ ತಂದರೆ ಆಗಲಾದರೂ ದೇಶ ಸುಧಾರಣೆ ಆಗಬಹುದು ಎಂಬ ಕಾರಣದಿಂದ ಪಕ್ಷಾತೀತವಾಗಿ ಜನತೆ ಬೆಂಬಲಿಸಿದರು. ಆದರೆ 10 ವರ್ಷವಾದರೂ ಕೇಂದ್ರ ಸರ್ಕಾರ ಜಾರಿಗೆ ತಂದರಾ ಇಲ್ಲ?
ಏಕೆಂದರೆ ಹಿಂದಿನ ಸರ್ಕಾರಕ್ಕಿಂತ 10 ರಷ್ಟು ಭ್ರಷ್ಟಾಚಾರ ಮಾಡಿದವರೂ ಮಾಡುತ್ತಾರಾ? ಕಾಂಗ್ರೆಸ್ ಪಕ್ಷ ತನ್ನ ಅಧಿಕಾರ ಅವಧಿಯಲ್ಲಿ ಮಾಡಿದ ಅವ್ಯಹಾರ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಲು ಕಾರಣವಾಗಿತ್ತು. ಇನ್ನು ದೇಶದಲ್ಲಿ ಉಗ್ರ ಚಟುವಟಿಕೆಗಳನ್ನು ತಡೆಯುತ್ತೇವೆ ಎಂಬ ಭರವಸೆ ನೀಡಿದ ಮೋದಿ, ಮಾಡಿದ್ದೇನು? ತನ್ನ ನೆರಳನಲ್ಲಿಯೆ ಪುಲ್ವಾಮ ದಾಳಿಗೆ ಅವಕಾಶ ನೀಡಿದರು. ತನಿಖೆಯಲ್ಲಿ ಇಲ್ಲಿವರೆಗೆ ಅಪರಾಧಿಗಳಿಗೆ ಶಿಕ್ಷೆ ಸಹಾ ಆಗಲಿಲ್ಲ. ಹಾಗದರೆ ಮೋದಿಯನ್ನು ನೋಡಿ ಬೆಂಬಲಿಸಿ ಎನ್ನುವವರು ಯಾವ ಕಾರಣಕ್ಕಾಗಿ ಬೆಂಬಲಿಸಬೇಕು? ಇದು ಯಕ್ಷ ಪ್ರಶ್ನೆ ಅಲ್ಲವೇ?
ನಾವು ಹಿಂದೂ ರಾಷ್ಟ್ರ ಮಾಡಬೇಕು ಎಂಬ ಗುರಿ ಇಟ್ಟುಕೊಂಡವರು ಈಗಿನ ಸಂವಿಧಾನ ಉಳಿಸಿಕೊಳ್ಳಲು ಹೇಗೆ ಸಾಧ್ಯ? ಹಿಂದೂ ರಾಷ್ಟ್ರ ಅಂದ ಮೇಲೆ ಈಗಿನ ಸಂವಿಧಾನದಲ್ಲಿ ಇದು ಅವಕಾಶ ಇಲ್ಲ, ಅದಕ್ಕೆ ಬಿಜೆಪಿ ಪಕ್ಷದ ಕೆಲವು ನಾಯಕರು 400 ಸದಸ್ಯರನ್ನು ಆಯ್ಕೆ ಮಾಡಿದ್ದರೆ ಸಂವಿಧಾನ ಬದಲಾವಣೆ ಮಾಡಲು ಸಾಧ್ಯ ಎಂದೂ ಹೇಳಿಕೆ ನೀಡಿದ್ದಾರೆ. ಆದರೆ ಇತ್ತೀಚೆಗೆ ಮೋದಿಯವರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಹಾಗಾದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದ ತಮ್ಮ ಪಕ್ಷದ ನಾಯಕರನ್ನು ಏಕೆ ಉಚ್ಛಾಟನೆ ಮಾಡಲಿಲ್ಲ?
ಇನ್ನೊಂದು ಪ್ರಶ್ನೆ ಏನೆಂದರೆ ಲೋಕಸಭೆ ಹೊಸ ಕಟ್ಟಡವನ್ನು ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಮಮಂದಿರ ಉದ್ಘಾಟನೆ ಸಂಧರ್ಭದಲ್ಲಿ ಸಂವಿಧಾನದ ತತ್ವ ಪರವಾಗಿ ನಡೆದುಕೊಂಡರೆ? ಮನು ಸಿದ್ಧಾಂತ ಪರವಾಗಿ ಎಲ್ಲಾ ಕಾರ್ಯಗಳನ್ನು ಮಾಡಿದರು. ಹಾಗಾದರೆ ಇವರು ಹೇಗೆ ಸಂವಿಧಾನ ಉಳಿಸಲು ಸಾಧ್ಯ?
ಇನ್ನೊಂದು ಸರ್ಕಾರಿ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಮೀಸಲಾತಿಗೆ ಧಕ್ಕೆ ತಂದರು ಹಾಗೂ ಮತದಾರರು ಪ್ರಶ್ನೆ ಮಾಡುವ ಹಕ್ಕುನ್ನು ಮೊಟಕುಗೊಳಿಸಿದರು. ಹಾಗಾದರೆ ಸಂವಿಧಾನದ ಬಗ್ಗೆ ಮಾತಾನಾಡುವ ನೈತಿಕ ಹಕ್ಕು ಮೋದಿಯವರಿಗೆ ಇದೆಯಾ?
ನಾಳೆ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಮುಖ್ಯವಲ್ಲ. ಆದರೆ ಪ್ರಜೆಗಳು ಪ್ರಶ್ನೆ ಮಾಡುವ ಹಕ್ಕನ್ನು ಕಳೆದುಕೊಳ್ಳಬಾರದು ಎಂಬುದು ನೆನಪಿನಲ್ಲಿ ಇರಬೇಕು.
– N.S. ಈಶ್ವರ ಪ್ರಸಾದ್, ನೇರಳೇಕೆರೆ, ಮಧುಗಿರಿ ತಾಲ್ಲೂಕ್




