ಬೆಂಗಳೂರು: ವಿಜಯಪುರದಲ್ಲಿ ಇಂಡಿ ತಾಲೂಕಿನಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ 2 ವರ್ಷದ ಮಗು ಸಾತ್ವಿಕ್ ಸುರಕ್ಷಿತವಾಗಿ ಹೊರಬಂದಿದ್ದು ನಾಡಿನ ಲಕ್ಷಾಂತರ ಜನರ ಪ್ರಾರ್ಥನೆ, ಹಾರೈಕೆ ಕೊನೆಗೂ ಫಲಿಸಿದೆ. ನಿರಂತರ 20 ಗಂಟೆಗಳ ಜೀವನ್ಮರಣದ ಹೋರಾಟದಲ್ಲಿ ಗೆದ್ದು ಬಂದಿರುವ ಕಂದಮ್ಮ ನೂರ್ಕಾಲ ಸುಖವಾಗಿ ಬದುಕಲಿ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ ಹಾರೈಸಿದ್ದಾರೆ.
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
ಸತತ 20 ಗಂಟೆಗಳ ಕಾರ್ಯಾಚರಣೆ ಮೂಲಕ ಮಗುವನ್ನು ಬದುಕಿಸಲು ಶ್ರಮಿಸಿದ ಎಸ್ ಡಿ ಆರ್ ಎಫ್ ಪಡೆ, ಪೊಲೀಸ್ ಇಲಾಖೆ, ವಿಜಯಪುರ ಜಿಲ್ಲಾ ಆಡಳಿತಕ್ಕೆ ಹಾಗೂ ಇಡೀ ರಕ್ಷಣಾ ಕಾರ್ಯಾಚರಣೆ ತಂಡಕ್ಕೆ ಕೃತಜ್ಞತೆ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ರಾಜ್ಯದೆಲ್ಲೆಡೆ ಇಂತಹ ಸಾವಿರಾರು ತೆರೆದ ಕೊಳವೆಬಾವಿಗಳಿದ್ದು, ಸರ್ಕಾರ ಅವುಗಳನ್ನು ಮುಚ್ಚಿಸಲು, ಸೂಕ್ತ ಬಂದೋಬಸ್ತ್ ಮಾಡಲು ಕ್ರಮ ವಹಿಸಬೇಕು. ಮುಂದೆ ಎಲ್ಲೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.




