ಜಮ್ಮು ಬ್ರಾಂಡ್ ಬಿಯರ್ ಗಳಿಗೆ 4 ಪದಕ

5 years ago

ಶ್ರೀನಗರ: ಜಮ್ಮು ಮೂಲದ ದೇವನ್ಸ್ ಮಾಡರ್ನ್ ಬ್ರೀವೆರೀಸ್ ಲಿಮಿಟೆಡ್ನ ನಾಲ್ಕು ಬಿಯರ್ ಬ್ರ್ಯಾಂಡ್ಗಳಿಗೆ ‘ಸ್ಪಿರಿಟ್ಸ್ ಸೆಲೆಕ್ಷನ್ ಅವಾರ್ಡ್ಸ್ 2021’ ಪ್ರಶಸ್ತಿ ಘೋಷಣೆಯಾಗಿದೆ. 2020ರಲ್ಲೂ ಜಮ್ಮುವಿನ ಈ ಕಂಪನಿ ಪ್ರಶಸ್ತಿಯನ್ನ ತನ್ನ ಮುಡಿಗೇರಿಸಿಕೊಂಡಿತ್ತು.

ಗಾಡ್ಫಾದರ್ ಲೆಜೆಂಡರಿ, ಕಾಟ್ಸ್ಬರ್ಗ್ ಬಿಲ್ಸ್, ಸಿಕ್ಸ್ ಫೀಲ್ಡ್ಸ್ ಬ್ಲಾಂಚ್ ಹಾಗೂ ಸಿಕ್ಸ್ ಫೀಲ್ಡ್ಸ್ ಕಲ್ಟ್ ಹೆಸರಿನ ಬಿಯರ್ಗಳಿಗೆ ಚಿನ್ನದ ಪದಕಗಳು ಮತ್ತು ಬೆಳ್ಳಿಯ ಪದಕಗಳನ್ನು ಘೋಷಿಸಲಾಗಿದೆ. ಬಿಯರ್ ರುಚಿ ನೋಡುವ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡುವ ವಿಧಾನ ಅನುಸರಿಸಲಾಗಿದೆ. ಬಿಯರ್ನ ಹೆಸರು, ಕಂಪನಿಯ ವಿವರ ನೋಡದೆಯೇ ರುಚಿಯ ಮೂಲಕ ಮಾತ್ರವೇ ಅತ್ಯುತ್ತಮ ಡ್ರಿಂಕ್ ಅಥವಾ ಬಿಯರ್ ಆಯ್ಕೆ ಮಾಡುವ ಪದ್ಧತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿದೆ. ಇದೇ ಮಾದರಿ ಅನುಸರಿಸಿ ಪ್ರಶಸ್ತಿ ಘೋಷಿಸಲಾಗಿದೆ.

Leave a Reply