5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಗಳನ್ನೂ ಹೈಕೋರ್ಟು ರದ್ದು ಮಾಡಿರುವುದು ಸರಿಯಾಗಿದೆ

2 years ago

ಒಂದು ತುರ್ತು ಮನವಿ

“5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಗಳನ್ನೂ ಹೈಕೋರ್ಟು ರದ್ದು ಮಾಡಿರುವುದು ಸರಿಯಾಗಿದೆ”

” ಕಾಂಗ್ರೆಸ್ ಸರ್ಕಾರ ಅದರ ವಿರುದ್ಧ ಮೇಲ್ಮನವಿ ಸಲ್ಲಿಸದಂತೆ ಆಗ್ರಹಿಸೋಣ”

ಆತ್ಮೀಯರೇ ,

ಬಿಜೆಪಿ ಸರ್ಕಾರ ಜಾರಿ ಮಾಡಿದ ವಿದ್ಯಾರ್ಥಿ ವಿರೋಧಿ, ಅವೈಜ್ಞಾನಿಕ  ಮತ್ತು ಅವಿವೇಕಿ ಕಲಿಕಾ ವ್ಯವಸ್ಥೆಯ ಭಾಗವಾದ NEP ಯ ಕೂಸು ಈ  5, 8, 9 ಮತ್ತು 11 ನೇ ತರಗತಿಗಳ ಬೋರ್ಡ್ ಪರೀಕ್ಷೆ ಗಳು.

ಇದು ತಳಹಂತದಿಂದಲೇ ಬ್ರಾಹ್ಮಣೀಯ ಪ್ರತಿಭಾವಾದವನ್ನು ಅನ್ವಯಿಸಿ ವಂಚಿತ ಸಮುದಾಯದ ವಿದ್ಯಾರ್ಥಿಗಳನ್ನು ಪ್ರಾಥಮಿಕ ಶಿಕ್ಷಣದಿಂದಲೂ ಶಾಶ್ವತವಾಗಿ ಹೊರಗಟ್ಟುವ  ಕುತಂತ್ರವಾಗಿದೆ. 

ಆದರೆ ರಾಜ್ಯದ, ರಾಷ್ಟ್ರದ ಮತ್ತು ಜಾಗತಿಕ ಶಿಕ್ಷಣ ತಜ್ಞರೆಲ್ಲಾ ವಿದ್ಯಾರ್ಥಿಗಳನ್ನು ಹೊರದಬ್ಬುವ ಈ ಎಲಿಮಿನೇಷನ್ ಪರೀಕ್ಷೆಗಳನ್ನು 12 ನೇ ತರಗತಿಯವರೆಗೆ ರದ್ದು ಮಾಡಬೇಕೆಂದೇ ಆಗ್ರಹಿಸುತ್ತಾ ಬಂದಿದ್ದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ NEP ಗೆ ಬದಲು ವೈಜಾನಿಕ SEP ಯನ್ನು ತರುವುದಾಗಿ ಘೋಷಿಸಿದಾಗ ಈ ಅವೈಜ್ಞಾನಿಕ ಬೋರ್ಡ್ ಪರೀಕ್ಷೆಗಳು ರದ್ದಾಗಬಹುದೆಂಬ ನಿರೀಕ್ಷೆ ಬಹಳಷ್ಟು ಜನರಿಗಿತ್ತು. ಆದರೆ ಹಾಗಾಗಲಿಲ್ಲ.

ಈಗ ಹೈಕೋರ್ಟ್ ತಾಂತ್ರಿಕ ಕಾರಣವನ್ನು ಮುಂದೊಡ್ಡಿ  5, 8, 9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಗಳನ್ನು ರದ್ದು ಮಾಡಿದೆ.

ಕಾಂಗ್ರೆಸ್ ಸರ್ಕಾರ ತನ್ನ ತಪ್ಪನ್ನು ತಿದ್ದುಕೊಳ್ಳಲು ಇದೊಂದು ಸದವಕಾಶ. ಆದರೇ ಕಾಂಗ್ರೆಸ್ ಸರ್ಕಾರ, ತನ್ನ  ಪಕ್ಕಾ ಕಾಂಗ್ರೆಸ್ ಧೋರಣೆಯಂತೆ ಹೈಕೋರ್ಟ್ ಆದೇಶದ ವಿರುದ್ಧ ಕರ್ನಾಟಕದ ಹೈಕೋರ್ಟಿನ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆಯೆಂದು ಪತ್ರಿಕಾ ವರದಿಗಳು ಖಚಿತಪಡಿಸಿವೆ.

ಇದರಿಂದ ಕಾಂಗ್ರೆಸ್ ಸರ್ಕಾರವು ಬಿಜೆಪಿಯ ಬ್ರಾಹ್ಮಣಶಾಹಿ ಮತ್ತು ವಿದ್ಯಾರ್ಥಿ ವಿರೋಧಿ ನೀತಿಯನ್ನು ಮುಂದುವರೆಸಿದಂತಾಗುತ್ತದೆ. ಹೀಗಾಗಿ ಈ ಕೂಡಲೇ  ಕರ್ನಾಟಕ ಸರ್ಕಾರದ ಮೇಲೆ ಒತ್ತಡ ತಂದು  5.8.9 ಮತ್ತು 11 ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ಗಳನ್ನು ರದ್ದು ಮಾಡಲು ಆಗ್ರಹಿಸಬೇಕಿದೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಜೆಪಿಯ ಫ್ಯಾಸಿಸ್ಟ್ ಸಿದ್ಧಾಂತವಾದ ಬ್ರಾಹ್ಮಣಶಾಹಿ ಪ್ರತಿಭಾವಾದದ ನಯವಂಚನೆಯನ್ನು ನಿಲ್ಲಿಸುತ್ತದೆ ಎಂದು ಭಾವಿಸಿದ್ದವರ ಮೇಲೆ  ಈ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ನನ್ನ ಭಾವನೆ .

ನಿಮ್ಮ
– ಶಿವಸುಂದರ್, ಸಾಮಾಜಿಕ ಹೋರಾಟಗಾರರು

Leave a Reply