ಬೆಂಗಳೂರು: ‘Narendra Modi ಅವರೇ, ಬಹಳ ದಿನಗಳ ಬೇಡಿಕೆಯ ನಂತರ ಸಿಎಂ ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದಕ್ಕೆ ಧನ್ಯವಾದಗಳು. ಮಾಜಿ ಪ್ರಧಾನಿ ದೇವೇಗೌಡರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು ಎಂದು ಕೆಪಿಸಿಸಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದ ಸದಸ್ಯರನ್ನು ಭೇಟಿಯಾದ ನರೇಂದ್ರ ಮೋದಿಯವರ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕೆಪಿಸಿಸಿ, ನಿಮ್ಮ ಹೊಸ ಬ್ರದರ್ ಕುಮಾರಸ್ವಾಮಿಯವರನ್ನು ಕರೆಸಿಕೊಂಡು ಭೇಟಿಯಾಗಿದ್ದಕ್ಕೂ ಧನ್ಯವಾದಗಳು. ನಿಮ್ಮ ಹೊಸ ಬ್ರದರ್ನ ಬ್ರದರ್ ರೇವಣ್ಣನವರನ್ನು ಹಾಗೂ ಅವರ ಮಗನನ್ನು ಭೇಟಿಯಾಗಿದ್ದಕ್ಕೂ ಧನ್ಯವಾದಗಳು ಎಂದಿದೆ.
ಹೀಗೆಯೇ ಕರ್ನಾಟಕದ ಮರ್ಯಾದೆ ತೆಗೆದಿರುವ ನಿಮ್ಮ ಪ್ರತಾಪ್ ಸಿಂಹ ಅವರನ್ನೂ ಕರೆಸಿಕೊಂಡು “ಯಾಕಪ್ಪಾ ಸಂಸತ್ತಿನ ಭದ್ರತೆಯನ್ನು ಪರೀಕ್ಷೆ ಮಾಡಿದೆ? ಯಾಕಪ್ಪಾ ದಾಳಿಕೋರರೊಂದಿಗೆ ಕೈಜೋಡಿಸಿದೆ?” ಎಂದು ಕೇಳುವುದು ಯಾವಾಗ? ಎಂದು ಪ್ರಶ್ನಿಸಿದೆ.




