ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಸಚಿವರಿಗೆ ಮುಕ್ತ ಅವಕಾಶವಿತ್ತು

2 years ago

ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಪುಣ್ಯಸ್ಮರಣೆ

ಜೆ.ಹೆಚ್.ಪಟೇಲ್ ಮಹಾನ್ ವಾಗ್ಮಿ, ಚಾಣಾಕ್ಷ ರಾಜಕಾರಣಿ, ಸ್ನೇಹ ಮನೋಭಾವನೆಯ ವ್ಯಕ್ತಿತ್ವದ ಶೇಷ್ಠ ವ್ಯಕ್ತಿ: ಶೈಲಜ ಸೋಮಣ್ಣ

ಬೆಂಗಳೂರು: ಮಹಾನ್ ವಾಗ್ಮಿ ಬುದ್ಧಿವಂತ ನಾಯಕ, ಚಾಣಾಕ್ಷ ರಾಜಕಾರಣಿ ಮತ್ತು ಸ್ನೇಹಪರ ಮನೋಭಾವದಿಂದ ತನ್ನ ರಾಜಕೀಯ ವಿರೋಧಿಗಳಿಗೆ ಜೆ.ಹೆಚ್.ಪಟೇಲ್ ಪ್ರೀತಿ ಪಾತ್ರರಾಗಿದ್ದರು ಶೈಲಜ ಸೋಮಣ್ಣ ಹೇಳಿದರು.

ಮಾಜಿ ಸಚಿವ ವಿ.ಸೋಮಣ್ಣ ಅವರ ಜನಸಂಪರ್ಕ ಕಛೇರಿಯಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಡೆಸಲಾಯಿತು.ಜೆ.ಹೆಚ್.ಪಟೇಲ್ ಅವರ ಭಾವಚಿತ್ರಕ್ಕೆ ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶೈಲಜ ಸೋಮಣ್ಣ ಸೇರಿದಂತೆ ಗಣ್ಯರು ಪುಷ್ಪನಮನ ಸಲ್ಲಿಸಿದರು. ಕನ್ನಡ ಪರ ಹೋರಾಟಗಾರ ಪಾಲನೇತ್ರರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಶೈಲಜಾ ಸೋಮಣ್ಣ, ಯಾವುದೇ ಪರಿಸ್ಥಿತಿಯನ್ನ ಚತುರತೆಯಲ್ಲಿ ನಿರ್ವಹಣೆ ಮತ್ತು ಟೀಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಜೆ.ಹೆಚ್.ಪಟೇಲ್ ಹೊಂದಿದ್ದರು. ಲೋಕಸಭೆಯಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಡಿಂಡಿಮ ಬಾರಿಸಿದರು. ರಾಜ್ಯದಲ್ಲಿ ಏಳು ಹೊಸ ಜಿಲ್ಲೆ ನಿರ್ಮಾಣಗೊಳ್ಳಲು ಕಾರಣಕರ್ತರು ಎಂದರು.

ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸಮಾಜವಾದಿ ಚಿಂತನೆಯಲ್ಲಿ ಜೆ.ಹೆಚ್.ಪಟೇಲ್ ಬೆಳೆದರು. ರಾಜಕೀಯ ಗುರು ಗೋಪಾಲಗೌಡರಿಂದ ರಾಜಕೀಯ ಪಟ್ಟುಗಳನ್ನು ಕಲಿತರು. ವಿ.ಸೋಮಣ್ಣರವರ ಬಗ್ಗೆ ಜೆ.ಹೆಚ್.ಪಟೇಲ್ ಅಪಾರ ಪ್ರೀತಿ ವಿಶ್ವಾಸ ಹೊಂದಿದ್ದರು. ಮೊದಲ ಬಾರಿಗೆ ಅವರ ಸಂಪುಟದಲ್ಲಿ ವಿ.ಸೋಮಣ್ಣ ಮಂತ್ರಿಯಾದರು. ಜೆ.ಹೆಚ್.ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸಚಿವರಿಗೆ ಆಡಳಿತ ಮಾಡಲು ಮುಕ್ತ ಅವಕಾಶ ನೀಡಿದ್ದರು ಎಂದರು.

ವಿ.ಸೋಮಣ್ಣ ಪ್ರತಿಷ್ಠಾನದ ಕೋಶಾಧ್ಯಕ್ಷ ಡಾ.ನವೀನ್ ಸೋಮಣ್ಣ, ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಚನ್ನಪ್ಪ, ಮೋಹನ್ ಕುಮಾರ್, ದಾಸೇಗೌಡ, ರೂಪಲಿಂಗೇಶ್ವರ್, ಜಯರತ್ನ ಮತ್ತು ಬಿಜೆಪಿ ಮುಖಂಡರಾದ ರತ್ನಮ್ಮ, ಸಿದ್ದಾರ್ಥ,ಕೃಷ್ಣಮೂರ್ತಿ, ಶ್ರೀಧರ್ ಕ್ರಾಂತಿರಾಜು ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply