ಅಪರಾಧ ಗುರುತಿಸುವಲ್ಲಿ ವಿಧಿ ವಿಜ್ಞಾನ ತಜ್ಞರು ಮುಖ್ಯ

2 years ago

#Forensic #experts #important #identifying #crime #PralhadJoshi

ಎನ್.ಎಫ್.ಎಸ್ ವಿಶ್ವವಿದ್ಯಾಲಯ ಬೆಳವಣಿಗೆಗೆ ಆದ್ಯತೆ: ಪ್ರಲ್ಹಾದ ಜೋಶಿ

ಧಾರವಾಡ: ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಧಿ ವಿಜ್ಞಾನ ಪ್ರಕ್ರಿಯೆ ಮುಖ್ಯವಾಗಿದೆ. ಬೆರಳಚ್ಚು ಸೇರಿದಂತೆ ವಿಧಿ ವಿಜ್ಞಾನದ ತಜ್ಞರು ಬಹು ಬೇಡಿಕೆ ಹೊಂದಿದ್ದು, ರಾಜ್ಯದಲ್ಲಿ ನೂತನವಾಗಿ ಆರಂಭವಾಗಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಬೆಳವಣಿಗೆಗೆ ಕೇಂದ್ರ ಸಕಾರವು ಅಗತ್ಯ ಸಹಾಯ ಮತ್ತು ಪ್ರೋತ್ಸಾಹವನ್ನು ನೀಡಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಮತ್ತು ಗಣಿ, ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ವಾಲ್ಮೀ ಕಟ್ಟಡದಲ್ಲಿರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಯ ಧಾರವಾಡ ಹಾಗೂ ಕರ್ನಾಟಕ ಡಿ.ಎನ್.ಎ ಸಂಶೋಧನಾ ಸಂಸ್ಥೆ ಧಾರವಾಡ ಜಂಟಿಯಾಗಿ ಆಯೋಜಿಸಿದ್ದ ಡಿ.ಎನ್.ಎ ಫೋರೆನ್ಸಿಕ್ಸ್ನಕಲ್ಲಿ ಇತ್ತೀಚಿನ ಪ್ರವೃತ್ತಿಗಳ ಕುರಿತ ಎರಡು ದಿನಗಳ ಅಂತರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆರೋಪಿಗಳ ತನಿಖೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಅಗತ್ಯವಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ವ್ಯಾಸಾಂಗ ಮಾಡುವ ಪದವಿದರರು ಸಮರ್ಥವಾಗಿ ಈ ಕಾರ್ಯವನ್ನು ನಿರ್ವಹಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೃಹ ಇಲಾಖೆಯ ಮೂಲಕ ವಿಧಿ ವಿಜ್ಞಾನ ಪದವಿಧರರಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಧಾರವಾಡದಲ್ಲಿ ಇರುವ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಡಿ.ಎನ್.ಎ. ಕೇಂದ್ರಗಳು ಉತ್ತಮ ಕಾರ್ಯ ಮಾಡುತ್ತಿದ್ದು, ಭವಿಷ್ಯದಲ್ಲಿ ರಾಷ್ಟ್ರದ ಬೇಡಿಕೆಗಳನ್ನು ಪೂರ್ಣಗೊಳಿಸುತ್ತವೆ ಎಂದರು.

ಎನ್ ಎಫ್ ಎಸ್ಯುಾ ಕ್ಯಾಂಪಸ್ನವ ನಿರ್ದೇಶಕ ಡಾ.ಮಂಜುನಾಥ ಘಾಟೆ ಸ್ವಾಗತಿಸಿದರು. ಇದೇ ಸಂದರ್ಭದಲ್ಲಿ ಎನ್ ಎಫ್ ಎಸ್ಯುಯ ಧಾರವಾಡದ ಸುದ್ದಿಪತ್ರದ ಮೊದಲ ಆವೃತ್ತಿಯನ್ನು ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದರು.

ಅಂತರಾಷ್ಟ್ರೀಯ ಸಮೇಳನ: ಈ ಸಮ್ಮೇಳನದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು, ರಾಜ್ಯ ಮತ್ತು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳಿಂದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಆಹ್ವಾನಿತ ಅತಿಥಿಗಳು ಸೇರಿದಂತೆ 250 ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.

ನ್ಯಾಯಶಾಸ್ತ್ರ ಮತ್ತು ವೈದ್ಯಕೀಯ ಕಾನೂನು ಪ್ರಕರಣಗಳಲ್ಲಿ ಡಿ.ಎನ್.ಎ ವಿಶ್ಲೇಷಣೆ ಬಹುಮುಖಿ ಅನ್ವಯಗಳೂ, ವೈಲ್ಡ್ ಲೈಫ್ ಡಿ.ಎನ್ಎ. ಫೋರೆನ್ಸಿಕ್ಸ್, ಫೋರೆನ್ಸಿಕ್ ಜೆನೆಟಿಕ್ಸ್ನಸಲ್ಲಿ ಜೆನೆಟಿಕ್ ಮಾರ್ಕರ್ಗ್ಳ ಅಪ್ಲಿಕೇಶನ್ಗಲಳು, ಶ್ರೀಲಂಕಾದ ಸನ್ನಿವೇಶದಿಂದ ಒಳನೋಟಗಳು, ನೇಪಾಳದಲ್ಲಿ ಡಿ.ಎನ್.ಎ ಫೋರೆನ್ಸಿಕ್ಸ್ನಅಲ್ಲಿನ ಇತ್ತೀಚಿನ ಪ್ರವೃತ್ತಿ, ಡಿ.ಎನ್.ಎ ಫೋರೆನ್ಸಿಕ್ಸ್ನುಲ್ಲಿ ನೆಕ್ಸ್ಟ್ ಜನರೇಶನ್ ಸಿಕ್ವೆನ್ಸಿಂಗ್ ಅಪ್ಲಿಕೇಶನ ಇತ್ಯಾದಿ ವಿಷಯಗಳ ಕುರಿತು ಭಾರತ, ನೇಪಾಳ, ಶ್ರೀಲಂಕಾ ಮತ್ತು ಅಮೇರಿಕಾದ ಪರಿಣಿತ ವಿಜ್ಞಾನಿಗಳು ವಿಶೇಷ ಉಪನ್ಯಾಸಗಳನ್ನು ನೀಡಿದರು.

ಈ ಸಮ್ಮೇಳನದಲ್ಲಿ ಯುವ ವಿಜ್ಞಾನಿಗಳಲ್ಲಿ ವೈಜ್ಞಾನಿಕ ಜ್ಞಾನ ವಿನಿಮಯವನ್ನು ಉತ್ತೇಜಿಸಲು ಮೌಖಿಕ ಮತ್ತು ಪೋಸ್ಟರ್ ಮೇಕಿಂಗ್ ಸ್ಪರ್ಧೆಯನ್ನು ನಡೆಸಲಾಯಿತು.

Leave a Reply