11 ಸಾವಿರ ಅಕ್ರಮ ಬಾಂಗ್ಲಾ ವಲಸಿಗರಿರುವ ಮಾಹಿತಿ ಕಲೆಹಾಕಿದ ರಾಷ್ಟ್ರೀಯ ತನಿಖಾದಳ

2 years ago

#NIA #illegal #Bangladeshi #immigrants

ಬೆಂಗಳೂರು: ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ದೇಶದೊಳಗೆ ನುಸುಳುವಂತೆ ಮಾಡಿ ಅವರ ಮೂಲಕ ದರೋಡೆ, ಡಕಾಯಿತಿ, ವಂಚನೆ ಮತ್ತು ವೇಶ್ಯಾವಾಟಿಕೆಯಂತಹ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದ ಜಾಲ ಪತ್ತೆಹಚ್ಚಿರುವ ರಾಷ್ಟ್ರೀಯ ತನಿಖಾದಳ ಇದಕ್ಕಾಗಿ ಸುಮಾರು10 ಸಾವಿರಕ್ಕೂ ಅಧಿಕ ಮಂದಿ ಬಂದಿರುವ ಮಾಹಿತಿ ಕಲೆಹಾಕಿದೆ.

ಬಾಂಗ್ಲಾ ವಲಸಿಗರನ್ನು ಅಕ್ರಮವಾಗಿ ಬೆಂಗಳೂರಿಗೆ ಕರೆತರುತ್ತಿದ್ದ 11 ಮಂದಿಯನ್ನು ಬಂಧಿಸಿ ರಾಷ್ಟ್ರೀಯ ತನಿಖಾದಳ ತನಿಖೆ ನಡೆಸುತ್ತಿದೆ. ಅಕ್ರಮವಾಗಿ 10 ಸಾವಿರಕ್ಕೂ ಅಧಿಕ ಮಂದಿ ಅಕ್ರಮವಾಗಿ ಬಂದಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಬಂಧಿತ 11 ಮಂದಿಯನ್ನು ಎಲ್ಲಾ ಆಯಾಮಗಳಲ್ಲಿ ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಎರಡು ದಿನಗಳ ಹಿಂದೆ ಬೆಂಗಳೂರು ಹಾಗೂ ಹೊರವಲಯದ ಹಲವು ಕಡೆಗಳಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಮೇಲೆ ಎನ್ಐಎ ದಾಳಿ ಮಾಡಿತ್ತು. ಈ ವೇಳೆ ಅಕ್ರಮವಾಗಿ ನಗರಕ್ಕೆ ಕರೆತರುತ್ತಿದ್ದ 11 ಜನರನ್ನು ಅಧಿಕಾರಿಗಳು ಬಂಧಿಸಿ ಅಕ್ರಮ ವಲಸಿಗರ ಮಾಹಿತಿ ಕಲೆ ಹಾಕಿದ್ದರು.

ವಿಚಾರಣೆ ವೇಳೆ ಮಾಸ್ಟರ್ ಮೈಂಡ್ ಜಾಕಿರ್ ಹುಸೇನ್ ಹೆಸರನ್ನು ಆರೋಪಿಗಳು ಬಾಯಿಬಿಟ್ಟಿದ್ದಾರೆ. ಈತನ ಸೂಚನೆಯಂತೆ ಅನಧಿಕೃತವಾಗಿ ನಗರಕ್ಕೆ ಕರೆತರಲಾಗುತ್ತಿತ್ತು ಎಂದು ಹೇಳಿದ್ದಾರೆ. ಇತ್ತ, ಎನ್ಐಎ ದಾಳಿ ಆಗುವ ವೇಳೆ ಆರೋಪಿ ಜಾಕಿರ್ ಹುಸೇನ್ ಪರಾರಿಯಾಗಿದ್ದಾನೆ.

ಆಧಾರ್ ಕಾರ್ಡ್ ಪತ್ತೆ: ಎನ್ಐಎ ದಾಳಿ ವೇಳೆ ಮತ್ತೊಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಬಹುತೇಕ ಬಾಂಗ್ಲಾ ಪ್ರಜೆಗಳ ಬಳಿ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಪತ್ತೆಯಾಗಿದೆ. ಹೀಗಾಗಿ ಐಡಿ ಕಾರ್ಡ್ ಮಾಡಿಕೊಟ್ಟಿದ್ದು ಯಾರು ಎಂಬುದನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ರಾಬರಿ, ಡಕಾಯತಿಗೆ ಸಂಚು: ಅಕ್ರಮವಾಗಿ ಬಾಂಗ್ಲಾ ವಲಸಿಗರನ್ನು ಕರೆತಂದು ಆರೋಪಿಗಳು ರಾಬರಿ, ಡಕಾಯತಿ ನಡೆಸಲು ಫ್ಲಾನ್ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಕೆಲವರಿಗೆ ರಾಬರಿ ಡಕಾಯತಿಗಾಗಿ ತರಬೇತಿ ಕೂಡ ನೀಡಿದ್ದರು ಎನ್ನಲಾಗಿದೆ. ಇನ್ನೂ ಕೆಲವರನ್ನು ವೇಶ್ಯಾವಾಟಿಕೆಯಲ್ಲಿ ಸೇರಿಸಲು ಪ್ಲ್ಯಾನ್ ನಡೆದಿತ್ತು.

ಈ ಸಂಬಂಧ ಆರೋಪಿಗಳ ಯೋಜನೆ ಬಗ್ಗೆ ಮಾತ್ರ ಬಾಯಿಬಿಡುತ್ತಿರುವ ಆರೋಪಿಗಳು, ಮಾಡಿದವರ ಹೆಸರನ್ನು ಬಾಯಿ ಬಿಡುತ್ತಿಲ್ಲ ಎಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಎನ್ಐಎ ಅಧಿಕಾರಿಗಳು 11 ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Leave a Reply