ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳಿಂದ ಉದ್ಘಾಟನೆ
ಕಾಂಗ್ರೆಸ್ ಪಕ್ಷ 20 ಲೋಕಸಭಾ ಸ್ಥಾನಗಳ ಗೆಲುವು ಪಡೆಯುವ ವಿಶ್ವಾಸವಿದೆ
ಬೆಂಗಳೂರು: ಕಾಂಗ್ರೆಸ್ ಪಕ್ಷದ ಸೇವಾದಳದ 100ನೇ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಕೆಪಿಸಿಸಿ, ಸೇವಾದಳ ವಿಭಾಗದ ವತಿಯಿಂದ ದಿನಾಂಕ 9-11-2023ರಂದು ಬೆಳಗ್ಗೆ 10ಗಂಟೆಗೆ ನಲ್ ಪಾಡ್ ಪೆವಿಲಿಯನ್ ಸಭಾಂಗಣದಲ್ಲಿ ಸಂಭ್ರಮಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ
ಈ ಕುರಿತು ಕೆಪಿಸಿಸಿ ಕ್ವೀನ್ಸ್ ಕಛೇರಿಯಲ್ಲಿ ಕಾರ್ಯಾಧ್ಯಕ್ಷ ಸಲೀಮ್ ಅಹಮದ್, ಸೇವಾದಳದ ರಾಜ್ಯಾಧ್ಯಕ್ಷ ಎಂ.ರಾಮಚಂದ್ರ ಮಾಧ್ಯಮಗೋಷ್ಠಿ ನಡೆಸಿದರು.
ಸಲೀಮ್ ಅಹಮ್ಮದ್ ಮಾತನಾಡಿ, ಸೇವಾದಳದ ರಾಜ್ಯಮಟ್ಟದ ಸಮಾವೇಶ ಮತ್ತು ಸೇವಾದಳದ 100ನೇ ವರ್ಷದ ಸಂಭ್ರಮಾಚರಣೆಯನ್ನು ನಲಪಾಡ್ ಪೆವಿಲಿಯನ್ ಅಚರಿಸಲಾಗುತ್ತಿದೆ. ರಾಷ್ಟ್ರಿಯ ಅಧ್ಯಕ್ಷ ಲಾಲ್ ಜೀ ಧ್ವಜಾರೋಹಣ ಮಾಡುತ್ತಾರೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವರು ಸಮಾವೇಶ ಉದ್ಘಾಟನೆ ಮಾಡುತ್ತಾರೆ. ಮುಂದಿನ ಲೋಕಸಭಾ ಚುನಾವಣೆ ತಯಾರಿ ಮತ್ತು ಸಂಘಟನೆ ಕುರಿತು ಸಮಾವೇಶ ನಡೆಯುತ್ತದೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಮಲತಾಯಿ ಧೋರಣೆ ತಾಳುತ್ತಿದೆ. 28 ಲೋಕಸಭಾ ಕ್ಷೇತ್ರ ಸಂಭವನೀಯ ಆಕಾಂಕ್ಷಿಗಳ ಪಟ್ಟಿ ರೆಡಿ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷದ 5 ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಕುಟುಂಬಗಳಿಗೆ ಸಮರ್ಪಕವಾಗಿ ತಲುಪಿದೆ. ಕಾಂಗ್ರೆಸ್ ಪಕ್ಷ 20 ಲೋಕಸಭಾ ಸ್ಥಾನಗಳ ಗೆಲುವು ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು.
ಸೇವಾದಳ ಕರ್ನಾಟಕದ ಅಧ್ಯಕ್ಷ ಎಂ.ರಾಮಚಂದ್ರ ಮಾತನಾಡಿ, 1923ರಲ್ಲಿ ನಾ.ಸು.ಹರ್ಡಿಕರ್ ರವರು ಜೈಲಿನಲ್ಲಿ ಇದ್ದು ಆರಂಭಸಿದ ಸೇವಾದಳ ಸಂಘಟನೆ ಮಹಾತ್ಮಾಗಾಂಧಿ ಮತ್ತು ಜವಹಾರ್ ಲಾಲ್ ನೆಹರೂ ರವರು ಸೇವಾದಳ ವಿಭಾಗವನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಸಿದರು. ಸೇವಾದಳ ಸಪ್ತಾಹವನ್ನು ಅಖಿಲ ಭಾರತ ಕಾಂಗ್ರೆಸ್ ಪಕ್ಷ ಆದೇಶ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಸಪ್ತಾಹ ಅಚರಿಸಲಾಗುತ್ತಿದೆ. ಸೇವಾದಳ ಶಿಸ್ತ್ರು ಮತ್ತು ಜಾತ್ಯತೀತ ಸಿದ್ಧಾಂತ ಮೇಲೆ ಸೇವಾದಳ ಸಂಘಟನೆ ಮಾಡುತ್ತಿದೆ ಎಂದರು.
ರಾಜ್ಯದಲ್ಲಿ 3000ಕ್ಕೂ ಹೆಚ್ಚು ಸೇವಾದಳದ ಸೇನಾನಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಸೇವಾದಳದ ಪದಾಧಿಕಾರಿಗಳು ಜಾಕೀರ್ ಹುಸೇನ್, ಕುಪೇಂದ್ರ ಧೂಳೆ, ರಮೇಶ್, ತೇರಸಾ ವಿಕ್ಟರ್, ಅಬ್ದುಲ್ ಸಮದ್, ರಾಣಾ ಪ್ರತಾಪ್, ಸರಿತಾರವರು ಭಾಗವಹಿಸಿದ್ದರು.




