ಬೆಂಗಳೂರು: ಸಚಿವ ಸಂಪುಟದಿಂದ ವಂಚಿತರಾದ ಮಾಜಿ ಸಚಿವ ಶ್ರೀಮಂತ ಪಾಟೀಲರ ಪರ ಅಖಿಲ ಕರ್ನಾಟಕ ಕ್ಷತ್ರಿಯ ಮರಾಠ ಸಂಟನೆಗಳ ಒಕ್ಕೂಟ ವತಿಯಿಂದ ಮಲ್ಲೇಶ್ವರಂ ರಿಜಾಯ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದರು.
ರಾಣೋಜಿರಾವ್ ಸಾಠೆ ಮಾತನಾಡಿ, ರಾಜ್ಯ ಬಿ.ಜೆ.ಪಿ. ಸರ್ಕಾರ ಆಡಳಿತ ಅವಧಿಯಲ್ಲಿ ಮರಾಠ ಸಮುದಾಯವನ್ನು ಕಡೆಗಣಿಸಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮರಾಠ ಸಮುದಾಯದ ಏಕೈಕ ಶಾಸಕ ಶ್ರೀಮಂತ ಪಾಟೀಲ್ ಬಿ.ಜೆ.ಪಿ. ಸರ್ಕಾರ ಬರುವಲ್ಲಿ ಮಹತ್ವವಾದ ಪಾತ್ರವಹಿಸಿದರು. ಆದರೆ ಈ ಬಾರಿ ಸಂಪುಟದಲ್ಲಿ ಶ್ರೀಮಂತ ಪಾಟೀಲ್ ಅವರನ್ನು ಕೈ ಬಿಟ್ಟಿರುವುದರಿಂದ ಇಡೀ ಮರಾಠ ಸಮುದಾಯಕ್ಕೆ ನೋವುಂಟಾಗಿದೆ ಎಂದರು.
ಮರಾಠ ಅಭಿವೃದ್ದಿ ನಿಗಮಕ್ಕೆ ಕಳೆದ 8 ತಿಂಗಳಿಂದ ಅನುದಾನ ಕೊಟ್ಟಿಲ್ಲ ಮತ್ತು ಅಧ್ಯಕ್ಷರ ನೇಮಕಾತಿ ಮಾಡಿಲ್ಲ. ಇದೇ ರೀತಿ ಮರಾಠ ಸಮುದಾದಕ್ಕೆ ಅನ್ಯಾಯವಾದರೆ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮರಾಠ ಸಮುದಾಯದ ಶ್ರೀಮಂತ ಪಾಟೀಲ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.




