ಬೆಂಗಳೂರು: ಸಮುದಾಯ ಬೆಂಗಳೂರು ತುಘಲಕ್ ನಾಟಕದ 100ನೇ ಪ್ರದರ್ಶನದ ಅಂಗವಾಗಿ ಅಕ್ಟೋಬರ್ 28 ಮತ್ತು 29, 2023ರ ಶನಿವಾರ ಮತ್ತು ಭಾನುವಾರ ರವೀಂದ್ರ ಕಲಾಕ್ಷೇತ್ರ ಬೆಂಗಳೂರಿನಲ್ಲಿ ಎರಡು ದಿನಗಳ ಕಾರ್ನಾಡ್ ನೆನಪಿನಲ್ಲಿ ನಾಟಕ, ವಿಚಾರ ಸಂಕೀರ್ಣ, ರಂಗ ಗೀತೆಗಳು, ಸ್ಮರಣ ಸಂಚಿಕೆ ಮತ್ತು ರಂಗ ಚಿಂತನ ಪುಸ್ತಕ ಬಿಡುಗಡೆಯನ್ನು ರಂಗೋತ್ಸವದಲ್ಲಿ ಹಮ್ಮಿಕೊಂಡಿದೆ.

ಆಕ್ಟೋಬರ್ 28, 2023ರ ಮಧ್ಯಾಹ್ನ 3:00ಕ್ಕೆ “ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ” ಪುಸ್ತಕ ಬಿಡುಗಡೆ ಅತಿಥಿಗಳಾಗಿ ಡಾ| ವಿಜಯ ಹಿರಿಯ ಚಿಂತಕರು, ಸಿ ಬಸವಲಿಂಗಯ್ಯ ರಂಗತಜ್ಞರು ಮತ್ತು ನಿರ್ದೇಶಕರು, ಡಾ| ನಟರಾಜ್ ಹುಳಿಯಾರ್ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ನಾಟಕಕಾರರು, ಅಗ್ರಹಾರ ಕೃಷ್ಣಮೂರ್ತಿ ಹಿರಿಯ ಸಾಹಿತಿಗಳು ಅಧ್ಯಕ್ಷರು ಸಮುದಾಯ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಧ್ಯಾಹ್ನ 4:15ಕ್ಕೆ ಹೆಚ್. ಜನಾರ್ಧನ (ಜನ್ನಿ) ರಂಗ ನಿರ್ದೇಶಕರು ಹಾಗೂ ಗಾಯಕರು ಮತ್ತು ತಂಡದವರಿಂದ ರಂಗಗೀತೆಗಳು. ಸಂಜೆ 5:00ಕ್ಕೆ “ಕಾರ್ನಾಡರ ನೆನಪು” ಅತಿಥಿಗಳು ಪ್ರೊ.ವಿ.ಎಸ್. ಶ್ರೀಧರ್ ಹಿರಿಯ ಚಿಂತಕರು ಕೆ.ಎಂ ಚೈತನ್ಯ ಚಲನಚಿತ್ರ ನಿರ್ದೇಶಕರು ಮತ್ತು ರಂಗಕರ್ಮಿಗಳು, ಕೆ.ಎಸ್. ವಿಮಲ ಸಹ ಕಾರ್ಯದರ್ಶಿ ಸಮುದಾಯ ಕರ್ನಾಟಕ, ಡಾ| ಹೆಚ್.ಎಸ್ ಶಿವ ಪ್ರಕಾಶ ಹಿರಿಯ ನಾಟಕಕಾರರು, ಕವಿಗಳು ಇವರ ಅಧ್ಯಕ್ಷತೆಯಲ್ಲಿ ನಡೆಯಲ್ಲಿದೆ. ಸಂಜೆ 6:45ಕ್ಕೆ ಚೈತನ್ಯ ನಿರ್ದೇಶನದ ಕಾರ್ನಾಡರ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಸಂಜೆ 7:30 ಕ್ಕೆ “ಹೂವು” ಏಕವ್ಯಕ್ತಿ ನಾಟಕ ಪ್ರದರ್ಶನ ರಚನೆ ಗಿರೀಶ್ ಕಾರ್ನಾಡ್, ನಿರ್ದೇಶನ ಡಾ| ಸಾಸ್ವೆಹಳ್ಳಿ ಸತೀಶ್, ಅಭಿನಯ ಚಂದ್ರಶೇಖರ ಶಾಸ್ತ್ರೀ, ಪ್ರಸ್ತುತಿ ಹೊಂಗಿರಣ (ರಿ) ಶಿವಮೊಗ್ಗ ಇವರಿಂದ ಪ್ರದರ್ಶನವಿದೆ.

ಆಕ್ಟೋಬರ್ 29, 2023ರ ಭಾನುವಾರ ಬೆಳ್ಳಿಗ್ಗೆ 10:30ಕ್ಕೆ “ಕಾರ್ನಾಡರ ಕೃತಿಗಳು ಒಳನೋಟ, ಕಾರ್ನಾಡರ ಆತ್ಮಕಥೆ ಆಡಾಡತ ಆಯುಷ್ಯ, ಡಾ| ಎಂ.ಎಸ್. ಆಶಾದೇವಿ, ವಿಮರ್ಶಕರು ಹಾಗೂ ಪ್ರಾಧ್ಯಾಪಕರು ನೆಡಸಲಿದ್ದಾರೆ. ಕಾರ್ನಾಡರ ನಾಟಕಗಳಲ್ಲಿ ಐತಿಹಾಸಿಕ ವಸ್ತು ನಟರಾಜ್ ಹೊನ್ನವಳಿ ರಂಗ ತಜ್ಞರು ಹಾಗೂ ನಿರ್ದೇಶಕರು, ಪೌರಾಣಿಕ ವಸ್ತು ಡಾ| ಎಚ್.ಎಸ್ ಪುಷ್ಪ ನಾಟಕಕಾರರು ಮತ್ತು ವಿಮರ್ಶಕರು, ಸಾಮಾಜಿಕ ವಸ್ತು ಡಾ| ಕೆ.ವೈ ನಾರಾಯಣಸ್ವಾಮಿ ನಾಟಕಕಾರರು, ಅನುವಾದಗಳು ಅಗ್ರಹಾರ ಕೃಷ್ಣಮೂರ್ತಿ ಅಧ್ಯಕ್ಷರು ಸಮುದಾಯ ಬೆಂಗಳೂರು ಇವರು ನಡೆಸಲಿದ್ದು ಇದರ ಅಧ್ಯಕ್ಷತೆಯನ್ನು ಡಾ| ಕೆ.ಮರುಳಸಿದ್ದಪ್ಪ ಹಿರಿಯ ಸಾಹಿತಿಗಳು ವಹಿಸಿಕೊಳ್ಳಲಿದ್ದಾರೆ. ಮಧ್ಯಾಹ್ನ 3:00ಕ್ಕೆ “ರಂಗ ಚಿಂತನ” ಪುಸ್ತಕ ಬಿಡುಗಡೆ ಅತಿಥಿಗಳು ಡಾ| ಶ್ರೀಪಾದ್ ಭಟ್, ರಂಗತಜ್ಞರು ಹಾಗೂ ನಿರ್ದೇಶಕರು, ಸಿ.ಕೆ ಗುಂಡಣ್ಣ ಹಿರಿಯ ರಂಗಕರ್ಮಿಗಳು ಸಮುದಾಯ ಸಂಘಟನೆ, ಕೀರ್ತಿ ತೊಂಡಗೆರೆ ರಂಗಕರ್ಮಿಗಳು ಇವರು ನಡೆಸಿಕೊಡಲಿದ್ದಾರೆ. ಸಂಜೆ 4:15 ಕ್ಕೆ ತುಘಲಕ್ 100 ರ ನೆನಪು ಅಭಿನಂದನೆ ನಮ್ಮೊಂದಿಗೆ ಡಾ| ಶ್ರೀಪಾದ್ ಭಟ್ ರಂಗತಜ್ಞರು ಹಾಗೂ ನಿರ್ದೇಶಕರು, ಸಿ.ಕೆ.ಗುಂಡಣ್ಣ ಹಿರಿಯ ರಂಗಕರ್ಮಿಗಳು ಸಮುದಾಯ ಸಂಘಟನೆ ಇವರು ನಡೆಸಲಿದ್ದಾರೆ. ಸಂಜೆ 6:30 ಕ್ಕೆ ತುಘಲಕ್ ನಾಟಕ, ರಚನೆ ಗಿರೀಶ್ ಕಾರ್ನಾಡ್, ನಿರ್ದೇಶನ ಡಾ| ಸಾಮ್ ಕುಟ್ಟಿ ಪಟ್ಟಂಕರಿ, ಸಹ ನಿರ್ದೇಶನ ಡಾ| ಶ್ರೀಪಾದ್ ಭಟ್ 100ನೇ ಪ್ರದರ್ಶನಗೊಳ್ಳಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆ ಸಮುದಾಯ ಬೆಂಗಳೂರು ಕಾರ್ಯದರ್ಶಿ : 9591967557 ಖಜಾಂಚಿ ಲವನಿಕ : 7406165938




