ಬಿಜೆಪಿ ಪಕ್ಷ ಕಾರ್ಯಕರ್ತರ ಕಡೆಗಣನೆಯ ಪರಿಣಾಮ: ಡಿ.ಕೆ.ಶಿವಕುಮಾರ್
ಮೇಯರ್ ಅವಕಾಶ ತಪ್ಪಿಸಿದರು, ಒಕ್ಕಲಿಗರ ಚುನಾವಣೆಯಲ್ಲಿ ಸೋಲಿಸುವ ಪ್ರಯತ್ನ ಮಾಡಿದರು: ಎಲ್.ಶ್ರೀನಿವಾಸ್

ಬೆಂಗಳೂರು: ಕೆಪಿಸಿಸಿಯ ಇಂದಿರಾ ಭವನ ಸಭಾಂಗಣದಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಮಾಜಿ ಪಾಲಿಕೆ ಸದಸ್ಯರು, ಮುಖಂಡರು ಮತ್ತು ಜೆಡಿಎಸ್ ಮುಖಂಡರುಗಳು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಾರಿಗೆ, ಮುಜಾರಾಯಿ ಸಚಿವ ರಾಮಲಿಂಗಾರೆಡ್ಡಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ಜೆಡಿಎಸ್ ನಾಯಕರಾದ ಕಬ್ಬಡಿ ಬಾಬು ಮತ್ತು ಅವರ ಪುತ್ರ ಪವನ್ ಹಾಗೂ ಉಪಮಹಾಪೌರ ಎಲ್.ಶ್ರೀನಿವಾಸ್, ಮಹಾನಗರ ಪಾಲಿಕೆ ಮಾಜಿ ಸದಸ್ಯರುಗಳಾದ ಶೋಭಾ ಅಂಜನಪ್ಪ, ಸುರೇಶ್,ಹೆಚ್.ನಾರಾಯಣ್,
ಎಲ್.ಗೋವಿಂದರಾಜು, ಸುಪ್ರಿಯ ಶೇಖರ್, ವೆಂಕಟಸ್ವಾಮಿನಾಯ್ಡು, ದಕ್ಷಿಣ ವಿಧಾನಸಭಾ ಕ್ಷೇತ್ರದ ಮಹಾನಗರ ಪಾಲಿಕೆ ಸದಸ್ಯರುಗಳಾದ ವಿ.ಬಾಲಕೃಷ್ಣ, ಸುಗುಣ ಬಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲಕ್ಷ್ಮೀ ಸುರೇಶ್, ಬಿಜೆಪಿ ಮುಖಂಡ ರಂಗಧಾಮಯ್ಯ ಮತ್ತು ಚಲನಚಿತ್ರ ನಟ ರವಿಕಿರಣ್ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಮುಖಂಡರು, ಕಾರ್ಯಕರ್ತರುಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.

ಇದೇ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಇಂದು ವಿಶ್ವಪ್ರಜಾಪ್ರಭುತ್ವ ದಿನ ಆಚರಿಸಲಾಗುತ್ತಿದೆ. 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವ ಪೀಠಿಕೆ ಆರಂಭವಾಗಿದೆ. ಸೂರ್ಯ ಉದಯಿಸಿದ ನಂತರ ಮುಳುಗಲೆಬೇಕು, ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಮುಖ್ಯ.ಯ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ 140 ಸೀಟು ಗೆಲ್ಲುತ್ತದೆ ಎಂದು ಹೇಳಿದ್ದೆ. ಮುಂದಿನ ಬಾರಿ ಪದ್ಮನಾಭನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಖಚಿತ. ಭಾರತ ಜೋಡೋ ಕಛೇರಿಯಲ್ಲಿ ಎಲ್ಲರ ಮನಸ್ಸು ಒಂದಾಗುತ್ತಿದೆ. ಬಿಬಿಎಂಪಿ ಚುನಾವಣೆಯಲ್ಲಿ 8 ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರುಗಳನ್ನು ಗೆಲ್ಲಿಸುವ ಗುರಿ ನಿಮ್ಮದು. ಬಿಜೆಪಿ ನಾಯಕರುಗಳಿಗೆ ಕಾರ್ಯಕರ್ತರು ಉತ್ತರ ನೀಡುತ್ತಾರೆ ಎಂದು ಹೇಳಿದರು.

120 ದಿವಸವಾದರು ವಿರೋಧ ಪಕ್ಷದ ನಾಯಕರನ್ನ ಆಯ್ಕೆ ಮಾಡಿಲ್ಲ. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಉರುಳಿಸಿದ ಬಿಜೆಪಿ ಜೊತೆಯಲ್ಲಿ ನೆಂಟಸ್ಥನ ಮಾಡುವ ಅನಿವಾರ್ಯತೆ ಏನಿತ್ತು. ಅನುಕೂಲಸಿಂಧು ರಾಜಕಾರಣ ಬಿಜೆಪಿ, ಜೆಡಿಎಸ್ ಮಾಡುತ್ತಿದೆ ಎಂದು ಹೇಳಿದರು.
ಪಕ್ಷಕ್ಕೆ ಆಗಮಿಸಿದವರು ವ್ಯಕ್ತಿಗಳಲ್ಲ. ಅವರು ನಗರದ ಡೊಡ್ಡ ಶಕ್ತಿಗಳು. ಸೂಕ್ತಕಾಲದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದೀರ. ಪದ್ಮನಾಭನಗರದಲ್ಲಿ ಕಾಂಗ್ರೆಸ್ ಪಕ್ಷದ ಸಮಾವೇಶಕ್ಕೆ ಮುಖ್ಯಮಂತ್ರಿಗಳು, ನಾನು ಬರುತ್ತೇನೆ. ಇದು ಇದು ಭಾಗ್ಯವಯ್ಯ ಪದ್ಮನಾಭನಗರ ಕ್ಷೇತ್ರದ ನಿಮ್ಮ ಪಡೆದ ನಾವು ಭಾಗ್ಯ ಎಂದು ಹೇಳಿದರು.
ರಾಮಲಿಂಗಾರೆಡ್ಡಿ ಮಾತನಾಡಿ, ಆರ್.ಆರ್.ನಗರ, ಕೆ.ಆರ್.ಪುರ, ಯಶವಂತಪುರ ಪದ್ಮನಾಭನಗರ ವಿಧಾನಸಭಾ ಹಲವಾರು ಪಾಲಿಕೆ ಸದಸ್ಯರುಗಳು, ಬಿಜೆಪಿ ಮುಖಂಡರುಗಳು ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಸೇರ್ಪಡೆಯಾಗಿದ್ದಾರೆ. ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಬಂದಿದೆ, ಪರಿವರ್ತನ ಸಮಯವಾಗಿದೆ ಎಂದು ಹೇಳಿದರು .
ಬೆಂಗಳೂರು ನಗರದ 12 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. 5 ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿಗೆಯಾಗಿವೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ ಎಂದು ಹೇಳಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮುಖಂಡ ಕಬ್ಬಡಿಬಾಬು ಮಾತನಾಡಿ, ಅಂತರಾಷ್ಟ್ರಿಯ ಕಬ್ಬಡಿ ಅಟಗಾರ ನಾನು. ಡಿ.ಕೆ.ಶಿವಕುಮಾರ್ ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಎಮ್.ಎಲ್.ಸಿ ಮಾಡುತ್ತೇನೆ ನಿಮ್ಮ ಸಹಕಾರ ಇರಲಿ ಎಂದು ಹೇಳಿದ್ದರು. ಡಿ.ಕೆ.ಶಿವಕುಮಾರ್ ಅವರು ಸಂಘಟನಾ ಚತುರ, ಪ್ರತಿಯೊಬ್ಬ ಕಾರ್ಯಕರ್ತರನ್ನು ಗುರುತಿಸುತ್ತಾರೆ. ಪದ್ಮನಾಭನಗರ ವಿಧಾನಸಭಾಕ್ಷೇತ್ರ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೇಬಲ್ ಸಂಸ್ಥೆ ಮತ್ತು ಕಬ್ಬಡಿ ಸಂಸ್ಥೆಯ ಸಹಕಾರದಿಂದ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಲಾಗುವುದು ಎಂದು ಹೇಳಿದರು.
ಎಲ್.ಶ್ರೀನಿವಾಸ್ ಮಾತನಾಡಿ, ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದೇವೆ. 33 ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ದುಡಿದ್ದಿದೇನೆ. ಎಲ್ಲರು ಒಟ್ಟಾಗಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು.
ಸರ್ಕಾರ ಮತ್ತು ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದು ಡಿ.ಕೆ.ಶಿವಕುಮಾರ್ ರವರು ಹೇಳಿದರು. ಬಿಜೆಪಿ ನಾಯಕರು ಮೇಯರ್ ಅವಕಾಶ ತಪ್ಪಿಸಿದರು ಮತ್ತು ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಆರ್ ಅಶೋಕ್ ರವರು ನನ್ನನು ಸೋಲಿಸಲು ಪ್ರಯತ್ನ ಮಾಡಿದರು ಎಂದು ಆರೋಪಿಸಿದರು.
ಆಂಜನಪ್ಪ ಮಾತನಾಡಿ, ಫಲ ಕೊಡುವ ಸಸಿ ತಂದು ನೆಡಲಾಯಿತು. ಆದರೆ ಅದು ಮುಳ್ಳಿನ ಗಿಡವಾಯಿತು. ಕಳೆದ 30 ವರ್ಷಗಳಿಂದ ಪಕ್ಷದಲ್ಲಿ ದುಡಿದ್ದಿದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 56 ಸಾವಿರ ಮತಗಳಿಂದ ಗೆಲ್ಲಿಸಿದ್ದೇವೆ. ಆದರೂ ಕಾರ್ಯಕರ್ತರನ್ನು ಕಡೆಗಣನೆ ಮಾಡುತ್ತಾರೆ. ಆದ್ದರಿಂದ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಲೋಕಸಭಾ ಸದಸ್ಯ ಚಂದ್ರಪ್ಪ ಮತ್ತು ಮಾಜಿ ಪಾಲಿಕೆ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.




