ದೆಹಲಿ: ಅನಕ್ಷರಸ್ಥರಿಗೆ ಮತ ಹಾಕಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡಿರುವ ಶಿಕ್ಷಕ ಕರಣ್ ಸಂಗ್ವಾನ್ ಅವರನ್ನು ಅನ್ ಅಕಾಡೆಮಿ ವಜಾಗೊಳಿಸಿದೆ. ಭಾರತದಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಎಜು ಟೆಕ್ ಕಂಪನಿಯಾಗಿರುವ ಅನ್ ಅಕಾಡೆಮಿ ಈ ಕ್ರಮ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಸದ್ಯಕ್ಕೆ ನಡೆಯುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ, ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಮತ್ತು ಬೆಂಬಲಿಗರು ಕರಣ್ ಅವರ ನಡೆಯನ್ನು ವಿರೋಧಿಸಿದ್ದರೆ, ಕಾಂಗ್ರೆಸ್ ಮತ್ತು ಎಡಪಂಥೀಯ ವಿಚಾರಧಾರೆಯ ಬೆಂಬಲಿಗರು ಕರಣ್ ಅವರ ಬೆಂಬಲಕ್ಕೆ ನಿಂತಿದ್ದಾರೆ.
ಶಂತನು ಎಂಬ ಟ್ವೀಟರ್ ಬಳಕೆದಾರರು ಕರಣ್ ಅವರು ಅವಿದ್ಯಾವಂತರಿಗೆ ಮತ ಹಾಕಬೇಡಿ ಎಂದು ಹೇಳಿರುವ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ವಿಡಿಯೋದ ಜೊತೆಗೆ, “ಈ ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ವಿದ್ಯಾವಂತ ನಾಯಕನಿಗೆ ಮತ ಹಾಕುವಂತೆ ಒತ್ತಾಯಿಸಿದರು. ಅವರು ಯಾರ ಹೆಸರನ್ನು ಹೇಳಿಲ್ಲ. ಬಿಜೆಪಿ ಬೆಂಬಲಿಗರು ಅವರು ಮೋದಿಯನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಾರೆ ಎಂದುಕೊಂಡು ಅನ್ ಅಕಾಡಮಿ ಮೇಲೆ ಒತ್ತಡ ಹೇರಿದರು. ಈಗ ಅವರು ಕೆಲಸ ಕಳೆದುಕೊಂಡಿದ್ದಾರೆ” ಎಂದು ಹೇಳಿದ್ದರು.
This teacher urged his students to vote for an educated leader, he didn’t take anyone’s name.
— Shantanu (@shaandelhite) August 17, 2023
BJP supporters assumed that he was targeting Modi and they made pressure on the Unacademy.
Now he has lost his job. pic.twitter.com/f7olZ3Rr7d
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅನಂತರ ಅಖಾಡಕ್ಕಿಳಿದ ಬಲಪಂಥೀಯ ಮತ್ತು ಮೋದಿ ಬೆಂಬಲಿಗರು ಅನ್ ಅಕಾಡೆಮಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುಮಾಡಿದರು. ಇದಾದ ನಂತರ ಕರಣ್ ಅವರನ್ನು ಅನ್ ಅಕಾಡಿಮೆ ವಜಾಗೊಳಿಸಿತು.
Unacademy, an educational platform, dismissed educator Karan Sangwan for advising his students to vote for candidates with a strong educational background.#UninstallUnAcademy pic.twitter.com/3x7DyI1eWo
— Satyam Patel | 𝕏… (@SatyamInsights) August 17, 2023
ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಿರುವ ಅನ್ ಅಕಾಡೆಮಿ ಸಹ ಸಂಸ್ಥಾಪಕ ರೊಮನ್ ಸೈನಿ, ನಮ್ಮದು ಶೈಕ್ಷಣಿಕ ವೇದಿಕೆ. ನಾವು ಗುಣಮಟ್ಟದ ಶಿಕ್ಷಣ ನೀಡಲು ಬದ್ಧವಾಗಿದ್ದೇವೆ. ಇದನ್ನು ಮಾಡಲು, ನಮ್ಮ ವಿದ್ಯಾರ್ಥಿಗಳಿಗೆ ನಿಷ್ಪಕ್ಷಪಾತ ಜ್ಞಾನ ಹಂಚಿಕೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ನಾವು ನಮ್ಮ ಎಲ್ಲಾ ಶಿಕ್ಷಕರಿಗೆ ಕಟ್ಟುನಿಟ್ಟಾದ ನೀತಿ ಸಂಹಿತೆ ಹೊಂದಿದ್ದೇವೆ ಎಂದಿದ್ದಾರೆ.
ಜೊತೆಗೆ, ನಮ್ಮಲ್ಲಿ ಕಲಿಯುವವರು ಕೇಂದ್ರಬಿಂದುವಾಗಿದ್ದಾರೆ. ತರಗತಿಯು ವೈಯಕ್ತಿಕ ಅಭಿಪ್ರಾಯಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ಥಳವಲ್ಲ. ಏಕೆಂದರೆ ಅವುಗಳು ತಪ್ಪಾಗಿ ಪ್ರಭಾವ ಬೀರಬಹುದು. ಪ್ರಸ್ತುತ ಪರಿಸ್ಥಿತಿಯಲ್ಲಿ, ಕರಣ್ ಸಂಗ್ವಾನ್ ಅವರು ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರಿಂದ ನಾವು ಅವರನ್ನು ಕೈಬಿಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
We are an education platform that is deeply committed to imparting quality education. To do this we have in place a strict Code of Conduct for all our educators with the intention of ensuring that our learners have access to unbiased knowledge.
Our learners are at the centre of…— Roman Saini (@RomanSaini) August 17, 2023
ವಿಶೇಷವೆಂದರೆ ಬಲಪಂಥೀಯರು, ಮೋದಿ ಬೆಂಬಲಿಗರು ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದು, ಇದರ ವೀಕ್ಷಣೆಯ ಸಂಖ್ಯೆ 2 ಮಿಲಿಯನ್ ದಾಟಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ತಮ್ಮನ್ನು ವಜಾಗೊಳಿಸಿದ ಕುರಿತು ವಿಡಿಯೋ ಒಂದರಲ್ಲಿ ಪ್ರತಿಕ್ರಿಯಿಸಿರುವ ಕರಣ್ ಸಂಗ್ವನ್, ನೂರು ಬಾರಿ ಬಿದ್ದರೂ ಎದ್ದು ನಿಂತಿದ್ದೇನೆ ಎಂದು ವಿಶ್ವಾಸದ ಮಾತುಗಳನ್ನು ಹೇಳಿದ್ದಾರೆ.
Karan Sangwan’s reply to Unacademy after resigning… pic.twitter.com/065X7FrEAc
— Shantanu (@shaandelhite) August 17, 2023




