ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹಂತಕರಿಂದ ಸಾಕ್ಷಿ ನಾಶಕ್ಕೆ ಯತ್ನ

3 years ago

ಬೆಳಗಾವಿ: ಚಿಕ್ಕೋಡಿಯ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಕೊಲೆ ಪ್ರಕರಣದ ನಂತರ ಹಂತಕರು ಒಳ ಉಡುಪು ಸೇರಿದಂತೆ ಎಲ್ಲಾ ಬಟ್ಟೆ ಸುಟ್ಟು ಹಾಕುವ ಮೂಲಕ ಸಾಕ್ಷಿ ನಾಶಕ್ಕೆ ಯತ್ನಿಸಿದ್ದಾರೆ.

ಜೈನಮುನಿಯ ಕೊಲೆಯ ರಹಸ್ಯವನ್ನು ಇಂಚಿಂಚೂ ಸಂಗ್ರಹಿಸಿದ್ದು ಇನ್ನೂ ಹಲವು ಅಯಾಮದ ತನಿಖೆಯು ಮುಂದುವರೆದಿದೆ. ಆರೋಪಿಗಳಾದ ನಾರಾಯಣ ಮಾಳಿ ಹಾಗೂ ಹಸನಸಾಬ್ ಡಾಲಾಯತ್‌ ತೀವ್ರ ವಿಚಾರಣೆಯಲ್ಲಿ ಇಬ್ಬರೂ ಪೊಲೀಸರ ಕೈಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು ವ್ಯವಸ್ಥಿತ ಸಂಚು ಮಾಡಿ ಜೈನಮುನಿ ಭಯಾನಕ ಕೊಲೆಯ ಬಳಿಕ ಒಳ ಉಡುಪು ಸೇರಿ ತಮ್ಮೆಲ್ಲಾ ಬಟ್ಟೆಗಳನ್ನೆಲ್ಲಾ ಸುಟ್ಟು ಹಾಕಿ ಸಾಕ್ಷ್ಯನಾಶದ ಪ್ರಯತ್ನ ನಡೆಸಿದ್ದರು.

ಸಾಕ್ಷ್ಯ ನಾಶ ಮಾಡಲು ಖತರ್ನಾಕ್ ಐಡಿಯಾ ಮಾಡಿದ್ದ ಬಂಧಿತರು, ಮುನಿಯ ಹತ್ಯೆ ಮಾಡಿ ಮಧ್ಯರಾತ್ರಿ 3 ಗಂಟೆಗೆ ಚಿಕ್ಕೋಡಿ ತಾಲೂಕಿನ ಹೀರೆಕೋಡಿ ಗ್ರಾಮದಿಂದ ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದವರೆಗೆ ಶವ ಸಾಗಿಸಿ ಬಳಿಕ ಅವರ ಮೃತದೇಹವನ್ನು 7 ತುಂಡು ಮಾಡಿ ಕೊಳವೆ ಬಾವಿಗೆ ಎಸೆದಿದ್ದರು.

ನಂತರ ಆರೋಪಿ ನಾರಾಯಣ ಮಾಳಿ ಮನೆಗೆ ಬಂದು ಒಳ ಉಡುಪು ಸಹಿತ ಕೊಲೆ ಮಾಡಲು ಬಳಸಿದ್ದ ಎಲ್ಲಾ ಬಟ್ಟೆಗಳಿಗೆ ಬೆಂಕಿ ಹಾಕಿ ಸುಟ್ಟಿದ್ದಾನೆ.

ಬಳಿಕ ಬೇರೆ ಬಟ್ಟೆ ತೊಟ್ಟು ಚಿಕ್ಕೋಡಿಯ ಎರಡನೇ ಆರೋಪಿ ಹಸನ್ ಡಾಲಾಯತ್ ಮನೆಗೆ ತೆರಳಿದ್ದ ಎನ್ನುವುದು ತನಿಖೆಯಲ್ಲಿ ಪತ್ತೆಯಾಗಿದೆ.

ಸಾಕ್ಷಿ ನಾಶ ಮಾಡಿದ ಬಟ್ಟೆ ಹಾಗೂ ಡೈರಿಯ ಬೂದಿಯನ್ನು ಪೊಲೀಸರು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ತಾವೇ ಕೊಂದು ಜೈನಮುನಿಯ ಹುಡುಕಾಟದ ನಾಟಕವಾಡಲು ಹೋಗಿ ಆರೋಪಿಗಳು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಸಾಕ್ಷಿ ನಾಶ ಮಾಡಿದ ಕುರಿತು ಮಾಹಿತಿ ಸಂಗ್ರಹಿಸಿ ಪುರಾವೆಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಲಿದ್ದಾರೆ.

ತನಿಖೆ ವೇಳೆ ಕೊಲೆ ಮಾಡಿದ್ದ ಕುಡಗೋಲು ಕಾಲುವೆಯಲ್ಲಿ ಪತ್ತೆಯಾಗಿದ್ದು, ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಲು ಪೊಲೀಸರು ಸಾಕ್ಷಿ ಸಂಗ್ರಹ ಮಾಡಿದ್ದಾರೆ.

Leave a Reply