ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ ಕಾಂಗ್ರೆಸ್ ಪಕ್ಷದ ವರಿಷ್ಟರಿಗೆ ಮನವಿ
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಇಂದು ಮಾಧ್ಯಮಗೋಷ್ಟಿ ಏರ್ಪಡಿಸಿ ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವಂತೆ ಒತ್ತಾಯಿಸಲಾಯಿತು.
ಅಧ್ಯಕ್ಷರಾದ ರಾಮಚಂದ್ರರವರು, ಮಾಜಿ ಮಹಾಪೌರರಾದ ವೆಂಕಟೇಶ್ ಮೂರ್ತಿ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷರಾದ ಮಾವಳ್ಳಿ ಶಂಕರ್, ಡಾ.ಜಾಬೀಟ್ ಅಬ್ದುಲ್ ,ಅಥರ್ವ್, ಯಲ್ಲಪ್ಪ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಜಿ.ಕೃಷ್ಣಮೂರ್ತಿ, ಕುರುಬರ ಸಂಘದ ಮುಖಂಡರುಗಳಾದ ಸುಬ್ರಮಣ್ಯಿ, ರಾಮಕೃಷ್ಣಪ್ಪ, ಹಲವಾರು ಮುಖಂಡರುಗಳು ಭಾಗವಹಿಸಿದ್ದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕಳೆದ 45 ವರ್ಷ ರಾಜಕಾರಣದಲ್ಲಿ ಕಪ್ಪುಚುಕ್ಕೆ ಇಲ್ಲದಂತೆ, ಮುಖ್ಯಮಂತ್ರಿಯಾಗಿ ಭ್ರಷ್ಟಚಾರ ಮುಕ್ತ, ಜನಪರ ಆಡಳಿತ ನೀಡಿದ್ದಾರೆ ಎಂದು ತಿಳಿಸಿದರು.
ನಾಡಿನ ಜನರ ಹಿತಕ್ಕಾಗಿ ಅಂದು ಅವರ ಆಡಳಿತದಲ್ಲಿ 165ಭರವಸೆಗಳನ್ನು ಕೊಟ್ಟಿದ್ದರು, ನಾಡಿನ ಜನರಿಗೆ ನೀಡಿದ ಭರವಸೆಯನ್ನ ಪೂರೈಸಿದ ದೇಶದ ಮೊಟ್ಟ ಮೊದಲ ಸರ್ಕಾರ ಎಂಬ ಕೀರ್ತಿ ಪಾತ್ರವಾಗಿದೆ ಎಂದರು.
ಹಸಿವು ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಅನ್ನಭಾಗ್ಯ, ಕ್ಷೀರ ಭಾಗ್ಯ, ಇಂದಿರಾ ಕ್ಯಾಂಟೀನ್ ಸೂರುಭಾಗ್ಯ, ಶಾಧಿಭಾಗ್ಯ ಎಲ್ಲ ಧರ್ಮ, ವರ್ಗವರನ್ನ ಸರಿಸಮಾನವಾಗಿ ಯೋಜನೆಗಳನ್ನು ರೂಪಿಸಿ ಆನುಷ್ಠಾನಕ್ಕೆ ತಂದರು ಎಂದು ಹೇಳಿದರು.
ಕಾಯಕವೇ ಕೈಲಾಸ, ಸರ್ವರಿಗೂ ಸಮಪಾಲು, ಸರ್ವರಿಗೂ ಬಾಳು ಎಂಬ ಸಿದ್ದಾಂತ ಅನ್ವಯ ಸಾಗುತ್ತಿರುವ ನಾಡಿನ ಜನಪ್ರಿಯ ನಾಯಕರಾದ ಸಿದ್ದರಾಮಯ್ಯರವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಬೇಕು ಕಾಂಗ್ರೆಸ್ ಪಕ್ಷದ ಅಧಿನಾಯಕಿ ಶ್ರೀಮತಿ ಸೋನಿಯ ಗಾಂಧಿಜಿರವರು, ಯುವ ನಾಯಕ ರಾಹುಲ್ ಗಾಂಧಿಜೀರವರು, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆರವರನ್ನು ಒತ್ತಾಯಿಸಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.




