ಮರೆತೇನಂದರ ಮರೆಯಲಿ ಹ್ಯಾಂಗ.?
ದೇಶದ ಅನ್ನದಾತನ ಪಾದಕ್ಕೆ ಮೊಳೆ ಹೊಡೆದ ಈ ರಾಕ್ಷಸೀ ಕೃತ್ಯವನ್ನು ಓರ್ವ ರೈತನ ಮಗನಾಗಿ ಜೀವನ ಪೂರ್ತಿ ನಾನು ಮರೆಯುವುದಿಲ್ಲ.
ಒಂದೂವರೆ ವರ್ಷದ ಹಿಂದೆ ತಮ್ಮ ಕೃಷಿ ಉತ್ಪನ್ನಗಳಿಗೆ ಮಾರಕವಾಗುವ ಕೃಷಿ ಮಸೂದೆಗಳ ವಿರುದ್ಧ ಪಂಜಾಬ್, ಉತ್ತರ ಪ್ರದೇಶದ ರೈತರು ಶಾಂತಿಯುತವಾಗಿ ಮತ್ತು ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಲು ಅಡ್ಡಿ ಮಾಡಿದ ಈ ಬಿ.ಜೆ.ಪಿ. ಸರ್ಕಾರವನ್ನು ಹೊಟ್ಟೆಗೆ ಅನ್ನ ತಿನ್ನುವ ಯಾವೊಬ್ಬ ವ್ಯಕ್ತಿಯೂ ಬೆಂಬಲಿಸಬಾರದು.
ತನ್ನ ಅಧಿಕಾರದ ಅವಧಿಯಲ್ಲಿ ಓರ್ವ ಪತ್ರಕರ್ತ ಇರಲಿ, ಜನ ಸಾಮಾನ್ಯನನ್ನು ಭೇಟಿ ಮಾಡಿ ಆತನ ಪ್ರಶ್ನೆಗೆ ಉತ್ತರಿಸಲಾಗದ ಇಂತಹ ದುರ್ಬಲ ಪ್ರಧಾನಿಯನ್ನು ಭಾರತ ತನ್ನ ಇತಿಹಾಸದಲ್ಲಿ ಎಂದೂ ನೋಡಿರಲಿಲ್ಲ. ಮುಂದೆಯೂ ನೋಡುವುದಿಲ್ಲ.
ತನ್ನ ಸಿಂಹಾಸನದ ಗದ್ದುಗೆಗೆ ಅಡ್ಡಿಯಾಗಬಾರದೆಂದು ದೆಹಲಿಗೆ ರೈತರು ಬಾರದಂತೆ ರಸ್ತೆಗೆ ಚೂಪಾದ ಮೊಳೆಗಳನ್ನು ಹೊಡೆಸಿದ ಇಂತಹ ಅಮಾನವೀಯ ವ್ಯಕ್ತಿಯನ್ನು ಆಧುನಿಕ ಜಗತ್ತಿನಲ್ಲಿ ನಾವ್ಯಾರೂ ನೋಡಿರಲಿಲ್ಲ. ಇಡೀ ಜಗತ್ತಿನ ರಾಷ್ಟ್ರಗಳು ಈ ಕೃತ್ಯದ ಬಗ್ಗೆ ಅಸಹ್ಯ ಪಟ್ಟುಕೊಂಡಿದ್ದವು.
ಡಿಸಂಬರ್ ತಿಂಗಳಿನ ಕೊರೆಯುವ ಚಳಿಯಲ್ಲಿ ರಸ್ತೆ ಬದಿ ಮಲಗಿದ್ದ ನಮ್ಮ ಅಪ್ಪಂದಿರಂತಹ, ಅಮ್ಮಂದಿರಂತಹ ರೈತ ಸಮುದಾಯದ ಮೇಲೆ ತಣ್ಣೀರು ಎರೆಚಿದ ಹಾಗೂ ಅವರುಗಳ ಪಾದಗಳಿಗೆ ಮೊಳೆ ಹೊಡೆದ ಈ ರಕ್ಕಸ ಸಮುದಾಯ ನಮಗೆ ಬೇಕೆ? ಇದು ಈ ನಾಡಿನ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರ ತನ್ನ ಆತ್ಮಸಾಕ್ಷಿಗೆ ಹಾಕಿಕೊಳ್ಳಬೇಕಾದ ಪ್ರಶ್ನೆ.
ನಮ್ಮ ಅಪ್ಪಂದಿರ ಪಾದಗಳಿಗೆ ಮೊಳೆ ಹೊಡೆದ ಅನ್ನದಾತನ ವಿರೋದಿಗಳ ನೆತ್ತಿಗೆ ನಾವು ಮತ ಚಲಾವಣೆಯ ಮೂಲಕ ಮೊಳೆ ಹೊಡೆದು ನಾಡಿನ ಬಡವರ ಶಕ್ತಿಯನ್ನು ತೋರಿಸಬೇಕಿದೆ. ನಾವು ಚಲಾಯಿಸುವ ಒಂದೊಂದು ಮತವೂ ಬಿ.ಜೆ.ಪಿ. ನೆತ್ತಿಗೆ ಬಡಿದ ಸುತ್ತಿಗೆಯ ಏಟಾಗಿರಬೇಕು.
ಓರ್ವ ಬಡರೈತನ ಮಗನಾಗಿ ಜನಿಸಿ, ಬಾಲ್ಯದಿಂದಲೂ ಅಪ್ಪನ ಔದಾರ್ಯ ಮತ್ತು ಕೃಷಿಯಲ್ಲಿ ಬದುಕು ಕಟ್ಟಿಕೊಳ್ಳಲಾಗದ ಅವನ ಅಸಹಾಯಕತೆಯನ್ನು ನೋಡುತ್ತಾ ಬೆಳೆದವನು ನಾನು. ಕಾಶ್ಮೀರದಲ್ಲಿ ಕೇಸರಿ ಬೆಳೆಯುವ ಮುಸ್ಲಿಂ ರೈತನಿಂದ ಹಿಡಿದು ಕನ್ಯಾಕುಮಾರಿಯಲ್ಲಿ ಬತ್ತ ಬೆಳೆಯುವ ಹಿಂದೂ ರೈತ ಇವರೆಲ್ಲರೂ ನನ್ನ ಪಾಲಿಗೆ ಅಪ್ಪಂದಿರೇ. ಅವರಿಗೆ ಆಗುವ ಅಪಮಾನ ಕಂಡಾಗ ದೇಹದೊಳಗಿನ ರಕ್ತ ಕುದಿಯತೊಡಗುತ್ತದೆ
ಇದಕ್ಕೆಇರುವ ಏಕೈಕ ಪರಿಹಾರ ಚುನಾವಣೆ ಎಂಬ ಯುದ್ಧ ಮತ್ತು ಮತದಾನ ಎಂಬ ಅಸ್ತ್ರ ಮಾತ್ರ.
ಮಿತ್ರರೇ ಮರೆಯದಿರೋಣ.
ಬಿ.ಜೆ.ಪಿ. ವಿರುದ್ಧ ಮತ ಚಲಾಯಿಸೊಣ.
ಜಗದೀಶ್ ಕೊಪ್ಪ
ಚಿತ್ರ ಸೌಜನ್ಯ- ಸತೀಶ್ ಆಚಾರ್ಯ




