ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

3 years ago

ಜಮಖಂಡಿ: ವಿಧಾನ ಸಭೆಯ ಚುನಾವಣೆಯಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಪರವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಾಜು ಮೇಲಿನಕೇರಿ ತಿಳಿಸಿದ್ದಾರೆ.

ಸಾಮಾಜಿಕ ನ್ಯಾಯದ ಬದ್ದತೆ, ಸೈದ್ಧಾಂತಿಕ ಪ್ರಖರತೆ ಅಭಿವೃದ್ಧಿಗೆ ಡಾ.ಬಿ.ಆರ್.ಅಂಬೇಡ್ಕರ್ ರವರು ಭಾರತೀಯ ಸಂವಿಧಾನದಲ್ಲಿ ಸಮಾನತೆ ನೀಡಿದ್ದರೂ ಬಿಜೆಪಿಗರು ಸಂವಿಧಾನವನ್ನೇ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ಮುಸ್ಲಿಂರ ಮೀಸಲಾತಿ ಹಿಂಪಡೆದಿರುವುದು ಸಂವಿಧಾನ ವಿರೋಧಿಗಳ ಕೈಗಳು ಕೆಲಸ ಮಾಡುತ್ತಿವೆ. ಒಳ ಮೀಸಲಾತಿ ಘೋಷಿಸಿ ದಲಿತರನ್ನು ವಂಚನೆಗೊಳಪಡಿಸಿದ್ದು ಇದರ ವಿರುದ್ದ ದಮನಿತ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮಾಜದ ಜನ ಒಗ್ಗೂಡಬೇಕಾಗಿದೆ, ಸಾಂವಿಧಾನಿಕ ಹಕ್ಕು ಕಾಪಾಡಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು.

ಖಂಡನೆ: ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ಮೇಲೆ ಕಲ್ಲು ಎಸೆದು ಹಲ್ಲೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಯಲ್ಲಿ ವಿರೋಧ ಪಕ್ಷಗಳ ಕುಮ್ಮಕ್ಕು ಎದ್ದುಕಾಣುತ್ತಿದೆ.
ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಅವರಿಗೆ ಸರ್ಕಾರ ರಕ್ಷಣೆ ನೀಡಬೇಕು, ದುಷ್ಕರ್ಮಿಗಳನ್ನು ತಕ್ಷಣ ಗುರುತಿಸಿ ಬಂಧಿಸುವ ಮೂಲಕ ಈ ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಕಾಪಾಡಬೇಕಿದೆ ಎಂದು ದಲಿತ ನಾಯಕ ರವಿ ಬಬಲೇಶ್ವರ, ತಾಲೂಕಾ ಸಂಚಾಲಕ ವಕೀಲ ದೊಡಮನಿ, ಸದಾಶಿವ ದೊಡಮನಿ, ಸಮೀರ ಕಂಗನೊಳ್ಳಿ, ಸಿದ್ದು ಬಂಡಿವಡ್ಡರ, ವಿಠ್ಠಲ ಹೊಸಮನಿ, ಪುಂಡಲಿಕ ಕಾಂಬಳೆ, ರಾಜು ಕೊಣ್ಣೂರ ಇತರರು ಒತ್ತಾಯಿಸಿದ್ದಾರೆ.

Leave a Reply