ಸರಿಯಾಗಿ ಎರಡು ವರ್ಷಗಳ ಹಿಂದೆ, ಅಂದರೆ 2021ರಲ್ಲಿ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆದಾಗ ಇದೇ ಬಿಜೆಪಿಯು, ಅಣ್ಣಾಡಿಎಂಕೆಯ ಅಂಗ ಪಕ್ಷವಾಗಿ ಕಣಕ್ಕಿಳಿದಿತ್ತು. ಅದಕ್ಕೆ ಸುಮಾರು ಇಪ್ಪತ್ತು ಸೀಟುಗಳನ್ನು ‘ಉದ್ರಿ’ ಬಿಟ್ಟುಕೊಡಲಾಗಿತ್ತು!
ಮೊನ್ನೆಯಷ್ಟೇ ಕರ್ನಾಟಕದ ಒಬ್ಬ ಬಿಜೆಪಿ ಸಂಸದನಿಂದ “ತಮಿಳುನಾಡಿನ ಮುಂದಿನ ಮುಖ್ಯಮಂತ್ರಿ” ಅಂತ ಹೊಗಳಿಸಿಕೊಂಡ ಮಾಜಿ ಐಪಿಎಸ್ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿಯು ಅಖಾಡಕ್ಕಿಳಿದಿತ್ತು. ಬಿಜೆಪಿ ಸ್ಪರ್ಧಿಸಿದ್ದು ಇಪ್ಪತ್ತೇ ಸೀಟಾದರೂ, ಅದರ ಅಬ್ಬರ ಮಾತ್ರ ಅದಕ್ಕೆ ಸೀಟುಗಳನ್ನು ಬಿಟ್ಟುಕೊಟ್ಟಿದ್ದ ಅಣ್ಣಾಡಿಎಂಕೆಯನ್ನೇ ಬೆಚ್ಚಿಬೀಳಿಸುವಂತಿತ್ತು.
ಆವತ್ತು ತಮಿಳುನಾಡಿನ ಬಿಜೆಪಿ ಉಸ್ತುವಾರಿಯಾಗಿದ್ದದ್ದು ಇದೇ ಸಿಟಿ ರವಿ ಅಲಿಯಾಸ್ ಓಟಿ ರವಿ. ಮನುಷ್ಯ ಕುಲಕ್ಕೇ ಕಳಂಕ ಎಂಬಂತೆ ವರ್ತಿಸುವ ಈ ರಣಹದ್ದಿನ ಜಾತಿಗೆ ಸೇರಿದ ರಾಜಕಾರಣಿ, ತಮಿಳುನಾಡಿನಲ್ಲೂ ಹಿಂದೂ-ಮುಸ್ಲಿಂ ಅಂತೆಲ್ಲ ಅಸಂಬದ್ದವಾಗಿ ಮಾತನಾಡಿ ಅಲ್ಲಿನ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದ. ಅಖಾಡದಲ್ಲಿ ಹಡಬೆ ಹಣವನ್ನು ನೀರಿನಂತೆ ಚೆಲ್ಲಾಡಿದ್ದ ಅಣ್ಣಾಮಲೈ ಮತ್ತು ಓಟಿ ರವಿಯನ್ನು ತಮಿಳುನಾಡಿನ ಜನ ಜೋಡಿ ಜೋಕರ್‌ಗಳಂತೆ ಕಂಡಿದ್ದರು.
ಕೊನೆಗೆ ಫಲಿತಾಂಶ ಪ್ರಕಟವಾದಾಗ ಅಣ್ಣಾಡಿಎಂಕೆ ಬೆಂಬಲವಿದ್ದೂ ಬಿಜೆಪಿ ದಾರುಣವಾಗಿ ಸೋತಿತ್ತು. ಅಣ್ಣಾಮಲೈ ಸ್ಪರ್ಧಿಸಿದ್ದ ಅವರಕುರಚಿ ಕ್ಷೇತ್ರದ ಮತದಾರರು ಆತನನ್ನು ಸೋಲಿಸಿ ತಿಪ್ಪೆಗೆಸೆದಿದ್ದರು. ಬಿಜೆಪಿಯ ಒಟ್ಟಾರೆ ಮತಗಳಿಕೆ ಎರಡೂವರೆ ಪರ್ಸೆಂಟ್ ದಾಟಿರಲಿಲ್ಲ. ಅಬ್ಬರ ಮಾಡಿದ್ದ ಅಣ್ಣಾಮಲೈ ಅಲ್ಲೇ ಭೂಗತನಾದರೆ, ಓಟಿ ರವಿ ಅಸ್ತಂಗತನಾಗಿದ್ದ!
ಈಗ ಕರ್ನಾಟಕದಲ್ಲಿ ಚುನಾವಣೆಗಳು ನಡೆಯುತ್ತಿವೆ. ಆವತ್ತು ತಮಿಳುನಾಡಿನಲ್ಲಿ ಹೀನಾಯವಾಗಿ ಸೋತು ಭೂಗತನಾಗಿದ್ದ ಅಣ್ಣಾಮಲೈನನ್ನು ಇಲ್ಲಿ ಬಿಜೆಪಿ ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಆವತ್ತು ತಮಿಳುನಾಡಿನ ಉಸ್ತುವಾರಿ ಆಗಿದ್ದ ಓಟಿ ರವಿಯನ್ನು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದು ಚಡ್ಡಿ ಸರ್ಕಲ್‌ಗಳಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಇಲ್ಲಿನ ಜನರ ನಾಡಿಮಿಡಿತ ನೋಡುತ್ತಿದ್ದರೆ ಈ ಜೋಕರ್ ಜೋಡಿ ಕರ್ನಾಟಕದಲ್ಲೂ ಭೂಗತ ಮತ್ತು ಅಸ್ತಂಗತ ಆಗುವ ದಿನಗಳು ದೂರವಿಲ್ಲ ಎನಿಸುತ್ತಿದೆ!
- ಸಂಗಮ್ ದೇವ್




