ಮೂರು ತಮಿಳು ಸಿನಿಮಾಗಳ ಕುರಿತು: ಜಗದೀಶ್ ಕೊಪ್ಪ

3 years ago

ಕಳೆದ ಐದು ವರ್ಷಗಳಿಂದ ಸಿನಿಮಾಗಳಿಂದ ದೂರವಿದ್ದೆ. ಹತ್ತು ದಿನಗಳಲ್ಲಿ ಎರಡು ಮಲೆಯಾಳಂ ( ಇರಟ್ಟ, ಜನ ಗಣ ಮನ) ಮತ್ತು ಮೂರು ತಮಿಳು ಸಿನಿಮಾಗಳನ್ನು ನೋಡಿದೆ.
ಸೆಂಬಿ, ಠಾಣ ಕಾರನ್ ಮತ್ತು ತಲೈ ಕೂಥಲ್ ಈ ಮೂರು ಸಿನಿಮಾಗಳು ಅವುಗಳ ಕಥಾ ವಸ್ತುವಿನ ಆಯ್ಕೆಯಲ್ಲಿ ನನ್ನ ಗಮನ ಸೆಳೆದವು.

ಸೆಂಬಿ ಸಿನಿಮಾ ಹತ್ತು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಕಥನ. ಹೆಸರಾಂತ ಹಿರಿಯ ಹಾಸ್ಯ ನಟಿ ಕೋವೈ ಸರಳಾ  ಬಾಲಕಿಯ ಅಜ್ಜಿಯ ಪಾತ್ರದಲ್ಲಿ ನೀಡಿರುವ ಅಭಿನಯ ಆಕೆ ಎಂತಹ ಅದ್ಭುತ ನಟಿ ಎಂಬುದನ್ನು ಸಾಬೀತು ಪಡಿಸುತ್ತದೆ.  ಚಿತ್ರಕಥೆಯನ್ನು ನಿರ್ದೇಶಕ ಹೇಳಿರುವ ಶೈಲಿ ಮೋಹಕವಾಗಿದೆ.

ಎರಡನೇ ಸಿನಿಮಾ ಠಾಣಕಾರನ್. ಇದು  ನೈಜ ಘಟನೆಯ ಆಧಾರಿತ ಚಿತ್ರ. 1982 ರಲ್ಲಿ ತಮಿಳು ನಾಡಿನ ಪೊಲೀಸ್ ಇಲಾಖೆಯ ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾದ  ಇಪ್ಪತ್ತೆಂಟು ರ್ಷದ ಯುವಕರು  ಆಯ್ಕೆಯಲ್ಲಿನ ದೋಷ ಕುರಿತು ಹದಿನಾರು ವರ್ಷ ನ್ಯಾಯಾಲಯದಲ್ಲಿ ಹೋರಾಟ ನಡೆಸಿ 43 ಮತ್ತು 44 ನೇ ವಯಸ್ಸಿನಲ್ಲಿ ಆಯ್ಕೆಯಾದರು. ನಂತರ ತರಬೇತಿ ಅವದಿಯಲ್ಲಿ ಅವರು ಅಧಿಕಾರಿಗಳಿಂದ ಅನು‌ಭಿಸುವ ಚಿತ್ರಕಥ ಅತ್ಯಂತ   ಹೆಚ್ಚು  ಪರಿಣಾಮಕಾರಿಯಾಗಿದೆ.

ಪ್ರತಿಯೊಬ್ಬ ಅಭ್ಯರ್ಥಿ ಯ ಬದುಕಿನ ಹಿಂದೆ ಇರುವ  ವಾಸ್ತವ ಕಠೋರ ಬದುಕನ್ನು  ಮತ್ತು ಪೊಲೀಸ್ ಅಧಿಕಾರಿಗಳ  ಹಿಂಸಾ  ಪ್ರವೃತ್ತಿಯನ್ನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ.

ಮೂರನೆಯ ಚಿತ್ರ ವಾಸಿಯಾಗದ ಕಾಯಿಲೆಯಿಂದ ಬಳಲುವ ಹಿರಿಯ ಜೀವಗಳನ್ನು ಎಳನೀರಿಗೆ ಸೂರ್ಯಕಾಂತಿ ಬೀಜ ತೇಯ್ದು ಕುಡಿಸಿ ಕೊಲ್ಲುವ ಪದ್ಧತಿ ಕುರಿತಾದ ಚಿತ್ರ.

ದಕ್ಷಿಣ ತಮಿಳುನಾಡಿನ ಜಿಲ್ಲೆಗಳಲ್ಲಿ ಬೇಡವಾದ ಹೆಣ್ಣುಮಕ್ಕಳಿಗೆ ಕಳ್ಳಿ ಗಿಡದ ಹಾಲು ಕುಡಿಸಿ ಕೊಲ್ಲುವುದು, ಹಿರಿಯ ಜೀವಗಳನ್ನು ತಲೈಕೂಥಲ್ ಹೆಸರಿನಲ್ಲಿ ಕೊಲ್ಲುವ ಪದ್ಧತಿ ಎಂಬತ್ತರ ದಶಕದವರೆಗೆ ಅಸ್ತಿತ್ವದಲ್ಲಿ ಇತ್ತು.

ಅಪ್ಪನ ನ್ನು ಕೊಲ್ಲಲಾಗದ ಮತ್ತು ಮನೆಯ ಪತ್ನಿ ಹಾಗೂ ಊರಿನ ಜನರ ಜನರ ಹಿಂಸೆಯನ್ನು ತಡೆಯಲಾರದೆ ಅನುಭವಿಸುವ  ವ್ಯಕ್ತಿಯ ನೋವಿನ  ಕಥನ.ಇದಾಗಿದೆ.

ಠಾಣಕಾರನ್  ಮತ್ತು ತಲೈಕೂಥಲ್ ಸಿನಿಮಾಗಳ ಅವಧಿಯನ್ನು ಕಡಿತಗೊಳಿಸಬಹುದಿತ್ತು  ಎಂದು ಅನಿಸಿದರು ಕೂಡಾ ನೋಡಲೇ ಬೇಕಾದ ಚಿತ್ರಗಳು.

-ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply