ಬಡವರಿಗೆ ಉಚಿತ ಶಿಕ್ಷಣ, ಆರೋಗ್ಯ ಉದ್ಯೋಗ ಮತ್ತು ಆರ್ಥಿಕ ಸಮಾನತೆ ಸಿಗಬೇಕು: ರಘುವೀರ್ ಎಸ್.ಗೌಡ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರದ, ಶಿವನಗರದ ವಾರ್ಡ್ ನಲ್ಲಿರುವ ಸಿದ್ದಗಂಗಾ ಮಠ ಆವರಣದಲ್ಲಿ ರಘುವೀರ್ ಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೀದಿ ಬದಿಯ ವ್ಯಾಪಾರಿಗಳಿಗೆ ಬಿಸಿಲು ರಕ್ಷಣೆಗೆ ಛತ್ರಿ ವಿತರಣೆ ಕಾರ್ಯಕ್ರಮ ನಡೆಯಿತು.
ರಾಜಾಜಿನಗರ ವಿಧಾನಸಭಾ ಕಾಂಗ್ರೆಸ್ ಮುಖಂಡರು, ರಘುವೀರ್ ಗೌಡ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ರಘುವೀರ್ ಎಸ್. ಗೌಡ ಬೀದಿ ಬದಿಯ ವ್ಯಾಪಾರಿಗಳಿಗೆ ಬಿಸಿಲ ರಕ್ಷಣೆಗೆ ಬೃಹತ್ ಛತ್ರಿಗಳನ್ನು ವಿತರಿಸಿದರು.
ರಘುವೀರ್ ಎಸ್.ಗೌಡ ಮಾತನಾಡಿ, ದುಡಿಯುವ ಕೈಗಳು ಎಂದು ನೋವುನಿಂದ ಬಳಲಬಾರದು, ಶ್ರಮಿಕ ವರ್ಗ ನಮ್ಮ ದೇಶದ ಸಂಪತ್ತು. ಎಲ್ಲ ನಾಗರಿಕರಿಗೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬಂತೆ ಶಿಕ್ಷಣ, ಆರೋಗ್ಯ ಉದ್ಯೋಗ ಮತ್ತು ಆರ್ಥಿಕ ಸಮಾನತೆ ಸಿಗಬೇಕು ಎಂದರು.
ಸಮಾಜದಲ್ಲಿ ಶ್ರೀಮಂತರಂತೆ ಬಡವರಿಗೆ ಉತ್ತಮ ಜೀವನ ಸಾಗಿಸಲು ಆರ್ಥಿಕವಾಗಿ ಸಹಕಾರ, ಸಹಾಯ ಮಾಡುವುದು ಮಾನವನ ಧರ್ಮ. ರಘುವೀರ್ ಗೌಡ ಚಾರಿಟೇಬಲ್ ಟ್ರಸ್ಟ್ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬವನ್ನು ಆರ್ಥಿಕವಾಗಿ ಸಬಲರಾಗಿ ಮಾಡಿ, ಸಮಾಜದ ಮುಖ್ಯವಾಹಿನಿಗೆ ತರಬೇಕೆಂದು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.
ವಿದ್ಯಾರ್ಥಿ ವೇತನ, ಬಡವರ ವೈದ್ಯಕೀಯ ವೆಚ್ಚದ ನೆರವು ಮತ್ತು ತಳ್ಳುವ ಗಾಡಿ , ಆಟೋ ಚಾಲಕರಿಗೆ ಉಚಿತವಾಗಿ ಟೈರ್ ವಿತರಣೆ, 10000 ಜನರಿಗೆ ಪುಣ್ಯಕ್ಷೇತ್ರಗಳಿಗೆ ಉಚಿತ ಪ್ರವಾಸ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಏಳು ವಾರ್ಡ್ಗಗಳಲ್ಲಿರುವ ಸಾವಿರಾರು ಹಣ್ಣು, ತರಕಾರಿ ಮಾರುವ ಬೀದಿ ಬದಿಯ ವ್ಯಾಪಾರಿಗಳಿಗೆ ಬಿಸಿಲಿನಿಂದ ರಕ್ಷಣೆಗೆ ಬೃಹತ್ ಛತ್ರಿ ವಿತರಣೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ಸೇವಾ ಮನೋಭಾವನೆಯಿಂದ ಬಡವರ ಸೇವೆಯಲ್ಲಿ ದೇವರನ್ನ ಕಾಣು ಎಂದು ಗುರುಹಿರಿಯರು ಹೇಳುತ್ತಾರೆ. ಜನರ ನಡುವೆ ಅವರ ನೋವು, ನಲಿವುಗಳಿಗೆ ಸದಾ ಒಡನಾಡಿ ಸೇವೆ ಮಾಡುವ ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ. ರಾಜಕೀಯ ಕ್ಷೇತ್ರ ಮತ್ತು ಸಮಾಜಸೇವೆಯಲ್ಲಿ ನನ್ನ ಯಶ್ವಸಿಯಾಗಲು ನನ್ನನು ಕುಟುಂಬದಲ್ಲಿ ನಾನು ಒಬ್ಬ ಎಂದು ಸಹಕಾರ, ಬೆಂಬಲ ನೀಡಿರುತ್ತಿರುವ ಅವರ ವಿಶ್ವಾಸ, ಪ್ರೀತಿಗೆ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮಂಜುಳ ವಿಜಯಕುಮಾರ್, ಹೆಚ್.ವಿಜಯಕುಮಾರ್, ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ರಾಕೇಶ್, ಚಂದ್ರ ಉಪಸ್ಥಿತರಿದ್ದರು.



