ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿ ಡಾ||ರಾಜ್ ಕುಮಾರ್ ಗಾಜಿನಮನೆ ಸಭಾಂಗಣದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಆಡಳಿತಧಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರುಗಳಾದ ಜಯರಾಮ್ ರಾಯಪುರ, ಹರೀಶ್, ತ್ರಿಲೋಕ್ ಚಂದ್ರ, ಪ್ರೀತಿ ಗಣೇಶ್, ವಿಶೇಷ ಆಯುಕ್ತರಾದ ಪಲ್ಲವಿ, ಮೋಹಕ ತಾರೆ ರಮ್ಯ, ಕಾಂತಾರ ಚಲನಚಿತ್ರ ನಟಿ ಸಪ್ತಮಿಗೌಡ, ಸಂಗೀತ ನಿರ್ದೇಶಕ, ಹಾಸ್ಯನಟ ಸಾಧುಕೋಕಿಲ, ಅದ್ಯಕ್ಷ ಎ.ಅಮೃತ್ ರಾಜ್ ಕಾರ್ಯಕ್ರಮ ಉದ್ಘಾಟನೆ ಮಾಡಿದರು.
ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್ ಮಾತನಾಡಿ, ಮಹಿಳೆಯರ ಪಾತ್ರ ಡೊಡ್ಡದು. ಮಹಿಳೆಯರೆಲ್ಲರು ದಿಟ್ಟ ಮಹಿಳೆಯರೇ.
ಸಮಾಜದಲ್ಲಿ ಇಷ್ಟು ಕಷ್ಟದ ಸಂದರ್ಭದಲ್ಲಿ ಧೈರ್ಯವಾಗಿ ಎದುರಿಸಿ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿ ತೋರಿಸಿಕೊಟ್ಟಿದ್ದಾಳೆ ಎಂದರು.
ಈ ಹಿಂದೆ ಮಹಿಳೆಯರಿಗೆ ಅವಕಾಶವಿರಲ್ಲಿಲ. ಆದರೆ ಇಂದು ಸಂವಿಧಾನ ಕಾನೂನಬದ್ದವಾಗಿ ಅವಕಾಶ ನೀಡಿದೆ. ನನ್ನ ಜೀವನದಲ್ಲಿ ಐಎಎಸ್ ಪಾಸ್ ಮಾಡಲು ನನ್ನ ತಾಯಿಯವರ ಪಾತ್ರ ಡೊಡ್ಡದು. ಹೆಣ್ಣು ಮಕ್ಕಳು ಕುಟುಂಬದ ಕಣ್ಣು, ನನ್ನ ಜೀವನದಲ್ಲಿ ನನ್ನ ಮಗಳು ಜೀವನಕ್ಕೆ ಸ್ಪೂರ್ತಿಯಾಗಿದ್ದಾಳೆ ಎಂದರು.
ಖ್ಯಾತನಟಿ ರಮ್ಯರವರು ಮಾತನಾಡಿ, ಸಮಾಜದಲ್ಲಿ ಪ್ರತಿದಿನ ಮಹಿಳಾ ದಿನಾಚರಣೆಯಾಗಬೇಕು.
ಎಲ್ಲ ಮಹಿಳೆಯರಲ್ಲು ವಿಶೇಷತೆ ಇರುತ್ತದೆ. ಮಹಿಳೆಯರು ಎಲ್ಲರು ಸಂಘಟಿತರಾಗಿ ಸಾಗಬೇಕು.
ಮಹಿಳೆಯರು ಆರೋಗ್ಯದ ಕಡೆ ಗಮನಹರಿಸಬೇಕು ಎಂದರು.
ನಾನು ಇಂದು ಚಲನಚಿತ್ರದಲ್ಲಿ ಸಾಧನೆ ಮಾಡಲು ಡಾ||ರಾಜ್ ಕುಮಾರ್ ಕುಟುಂಬ ಕಾರಣ. ನಾವು ಮಾಡಿದ ಕೆಲಸದಿಂದ ಇನ್ನೊಬ್ಬರಿಗೆ ಒಳ್ಳೆಯದಾದರೆ ಸಾಕು ಎಂಬ ಭಾವನೆಯಿಂದ ರಾಜಕೀಯ, ಚಲನತಚಿತ್ರ ರಂಗದಲ್ಲಿ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಸಾಧಕೋಕಿಲ ಮಾತನಾಡಿ, ಮಹಿಳೆಯೆಂದರೆ ತಾಯಿ, ಅಮ್ಮ ಮತ್ತು ಎಲ್ಲ ನದಿಗಳ ಹೆಸರು ಮಹಿಳೆಯರ ಹೆಸರಿನಲ್ಲಿವೆ. ತಾಯಿಗಿಂತ ಡೊಡ್ಡವರಿಲ್ಲ. ತಂದೆ ಹೆಸರು ಕೊಡಬಹುದು, ನಮ್ಮ ಜೀವನ ರೂಪಿಸಿ ನಡೆಸುವವಳು ತಾಯಿ, ದೇವರನ್ನ ಹೆಣ್ಣಿಗೆ ಹೋಲಿಸುತ್ತಾರೆ ಎಂದು ಹೇಳಿದರು.
ಐಪಿಎಸ್ ಅಧಿಕಾರಿ ಶೋಭರಾಣಿ ಮಾತನಾಡಿ, ಮಹಿಳೆಯರು ಶಿಕ್ಷಣ, ಉದ್ಯೋಗ, ಎಲ್ಲ ರಂಗಗಳಲ್ಲಿ ಮತ್ತು ಮನೆ ಯಾಜಮಾನಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದರು.
ನಟಿ, ನಿರೂಪಕಿ ಅರ್ಪಣಾರವರು ಮಾತನಾಡಿ, ರಾಷ್ಟ್ರಕವಿ ಕುವೆಂಪುರವರು ಹೇಳಿದಂತೆ ಸ್ತ್ರೀ ಎಂದರೆ ಮನೆ, ಮನೆ ಬೆಳಗುವ ತಪಸ್ವಿ. ದೌರ್ಜನ್ಯ, ಹಿಂಸೆ ಮತ್ತು ಕಿರುಕುಳದಿಂದ ಮಹಿಳೆಯರು ನರಳುತ್ತಿದ್ದಾರೆ. ಅವರ ಮೇಲೆ ಆಗುತ್ತಿರುವ ಹಿಂಸೆ, ದೌರ್ಜನ್ಯ ನಿಂತಾಗ ಅಂದೇ ಮಹಿಳೆಯರ ದಿನಾಚರಣೆ ಎಂದು ಹೇಳಿದರು.
ಮಹಿಳೆಯರು ಸ್ವಾಭಿಮಾನಿಯಾಗಿ, ಸ್ವಾವಲಂಬಿ ಜೀವನ ಸಾಗಿಸಬೇಕು. ಪುರುಷರ ಸರಿಸಮಾನವಾಗಿ ಬದುಕಬೇಕು ಎಂದು ಹೇಳಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ದಿಟ್ಟ ಮಹಿಳಾ ಪ್ರಶಸ್ತಿಯನ್ನು ಖ್ಯಾತ ಚಿತ್ರನಟಿ ಸಪ್ತಮಿಗೌಡ, ಪ್ರಿಯಾಂಕ ಉಪೇಂದ್ರ, ಡಾ.ಶೋಭಾರಾಣಿ, ಪರಿಸರವಾದಿ ರೇವತಿ ಕಾಮತ್, ವಕೀಲೆ ಅಶ್ವಿನಿರಾವ್, ಹಿರಿಯ ನಿರೂಪಕಿಯರಾದ ಅಪರ್ಣಾ, ರಾಧಾ ಹಿರೇಗೌಡ, ಶ್ವೇತಾ ಆಚಾರ್ಯ, ಮಧುಶ್ರಿ ಹಾಗೂ ಹಿನ್ನೆಲೆ ಗಾಯಕಿ ಅನುರಾಧ ಭಟ್ ಮತ್ತು ಬಿಬಿಎಂಪಿಯಲ್ಲಿ ಅಧಿಕಾರಿ ನೌಕರರಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.




