ಡಾ.ಶ್ರೀಧರ್ ಕೊಲೆ ಅಪರಾಧಿಗಳ ಬಂಧನ

3 years ago

ಬೆಂಗಳೂರು: ಯಲಹಂಕದ ಖಾಸಗಿ ಆಸ್ಪತ್ರೆಯಲ್ಲಿ ಫಿಸಿಯೋ ಥೆರಪಿಸ್ಟ್ ಡಾ. ಶ್ರೀಧರ್ ಅವರನ್ನು ಅಪಹರಿಸಿ ಕೊಲೆಗೈದು ನಿರ್ಜನ ಪ್ರದೇಶದಲ್ಲಿ ಪೆಟ್ರೋಲ್ ಸುರಿದು ಶವವನ್ನು ಸುಟ್ಟುಹಾಕಲಾಗಿದ್ದ ಒಂದು ತಿಂಗಳ ಬಳಿಕ ಆಂಧ್ರ ಮೂಲದ ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ವೀರಾಂಜನೆಯಲು ಅಲಿಯಾಸ್ ಪುಲಿ, ಗೋವರ್ಧನ ಅಲಿಯಾಸ್ ಡಿಜೆ, ಭಾಸ್ಕರ್ ಅಲಿಯಾಸ್ ಬುಡಪ್ಪ ಬಂಧಿತ ಆರೋಪಿಗಳಾಗಿದ್ದು ಅವರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ. ಇನ್ನು ಮೊದಲಿಗೆ ಬೆಂಕಿಯಲ್ಲಿ ಸುಟ್ಟು ಅಪರಿಚಿತ ಅನುಮಾನಾಸ್ಪದ ಸಾವು ಎಂದು ಕೇಸ್ ದಾಖಲು ಮಾಡಲಾಗಿತ್ತು. ಬಳಿಕ ತನಿಖೆ ವೇಳೆ ಅದು ವೈದ್ಯ ಶ್ರೀಧರ್ ಎಂಬುದು ಬೆಳಕಿಗೆ ಬಂದಿದೆ.

ನಂತರ ಹಲವಾರು ಆಯಾಮದಿಂದ ತನಿಖೆ ಮಾಡಿದ ಬಳಿಕ ಶ್ರೀಧರ್ ನನ್ನು ಕೊಲೆ ಮಾಡಿ ಸುಟ್ಟು ಹಾಕಲಾಗಿದೆ ಎಂದು ಗೊತ್ತಾಗಿದೆ. ಈ ವೇಳೆ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಹಲವಾರು ದಿನಗಳ ಹಿಂದೆ ಬಾರ್ ನಲ್ಲಿ ಆಂಧ್ರ ಮೂಲದ ಈ ಮೂರು ವ್ಯಕ್ತಿಗಳ ನಡುವೆ ನಡೆದಿದ್ದ ಗಲಾಟೆಯೊಂದು ಈ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಕೂಡಲೇ ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

Leave a Reply