ಪುತ್ರ ನ್ಯಾಯಾಂಗ ವಶಕ್ಕೆ, KSDL ಹುದ್ದೆಗೆ ರಾಜೀನಾಮೆ ಸಲ್ಲಿಸಿದ ವಿರುಪಾಕ್ಷಪ್ಪ

3 years ago

ಬೆಂಗಳೂರು: ಕಾಮಗಾರಿ ಗುತ್ತಿಗೆ ನೀಡಿದ್ದಕ್ಕಾಗಿ ನಿಗದಿಯಾಗಿದ್ದ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಂಧಿಸಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಪುತ್ರ ಬೆಂಗಳೂರು ಜಲಮಂಡಳಿಯ (ಬಿಡ್ಲೂಎಸ್ ಎಸ್ ಬಿ) ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಬಳಿ ಕೋಟಿಗಟ್ಟಲೆ ಹಣ ಪತ್ತೆಯಾಗಿದ್ದು ಆಡಳಿತ ಪಕ್ಷ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದೆ. ಈ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ‌ಊಚನೆ ಹಿನ್ನೆಲೆಯಲ್ಲಿ ಮಾಡಾಳ್ ವಿರುಪಾಕ್ಷಪ್ಪ KSDL ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ಡಿಎಲ್‌) ರಾಸಾಯನಿಕ ಪೂರೈಸುವ ಟೆಂಡರ್ ನೀಡಲು 40 ಲಕ್ಷ ರೂ ಪಡೆಯುತ್ತಿದ್ದ ಪ್ರಶಾಂತ್‌ ಮಾಡಾಳ್‌ ಅವರನ್ನು ನಿನ್ನೆ ರಾತ್ರಿ ಮಿಂಚಿನ ಕಾರ್ಯಾಚರಣೆ ಕೈಗೊಂಡು ಬಂಧಿಸಿದ್ದ ಲೋಕಾಯುಕ್ತ ಅಧಿಕಾರಿಗಳು ರಾತ್ರಿಯಿಡೀ ನಡೆಸಿದ ದಾಳಿಯಲ್ಲಿ ಪ್ರಶಾಂತ್ ಮನೆ ಹಾಗೂ ಕಚೇರಿಯಲ್ಲಿ ಪತ್ತೆಯಾಗಿರುವ 7.62 ಕೋಟಿ ರೂಗಳು ಜಪ್ತಿ ಮಾಡಿದ್ದಾರೆ.

ಸಂಜಯನಗರದ ಕೆಎಂವಿ‌ ಮ್ಯಾನ್ಷನ್ ಅಪಾರ್ಟ್ಮೆಂಟ್ನಲ್ಲಿರುವ  ಶಾಸಕ ಮಾಡಾಳ್ ಪುತ್ರ ಪ್ರಶಾಂತ್ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು, ನಿವಾಸದಲ್ಲಿ ಒಟ್ಟು 6 ಕೋಟಿ ರೂ ನಗದು ಹಣ ಪತ್ತೆಯಾಗಿದೆ. ಒಟ್ಟು ಎಂಟು ಫ್ಲ್ಯಾಟ್ಗಳನ್ನು ಹೊಂದಿರುವ ಅಪಾರ್ಟ್ಮೆಂಟ್ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಇನ್ನು ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್  ಕಚೇರಿಯಲ್ಲಿ 1.62 ಕೋಟಿ ರೂ ನಗದು ಜಪ್ತಿಯಾಗಿದ್ದು, ಬಿಜೆಪಿ ಶಾಸಕನ ಪುತ್ರನ ಮನೆ-ಕಚೇರಿಯಲ್ಲಿ ಕೈ ಇಟ್ಟಲೆಲ್ಲ ಕಂತೆ ಕಂತೆ ಹಣ ಪತ್ತೆಯಾಗಿದ್ದು ಅಧಿಕಾರಿಗಳೇ ದಂಗಾಗಿದ್ದಾರೆ.

ಕ್ರೆಸೆಂಟ್ ರಸ್ತೆಯ ಅವರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ಇಂದು ಬೆಳಗಿನ ಜಾವ 4 ಗಂಟೆವರೆಗೂ ಶೋಧ ನಡೆಸಿ ಪ್ರಶಾಂತ್‌ ಮಾಡಾಳ್‌ ಅವರ ‌ಸಂಬಂಧಿ ಸಿದ್ದೇಶ್, ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್ (ದುಡ್ಡು ಕೊಡಲು ಬಂದವನು)ನನ್ನು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರು ಪಡೆಸಿ ಅರೋಪಿಗಳ ವಶಕ್ಕೆ ಪಡೆಯಲಿದ್ದಾರೆ.

ಎಂಡಿ ಮನೆ ಮೇಲೆ ದಾಳಿ‌: ಕೆಎಸ್ ಡಿಎಲ್ ಅಧ್ಯಕ್ಷ ಮತ್ತು ಪುತ್ರನ ಮನೆ ಮೇಲೆ ದಾಳಿ ಬೆನ್ನಲ್ಲೆ ನಿಗಮದ ವ್ಯವಸ್ಥಾಪಕ ನಿರ್ದೇಶಕ  ಡಾ.ಮಹೇಶ್ ಮನೆ ಮೇಲೆ  ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ನಗರದ ಬಸವನಗುಡಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದಾಳಿ ಮಾಡಿದ್ದಾರೆ. ಇನ್ನು ಶಾಸಕ‌ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಪುತ್ರನ ಚನ್ನಗಿರಿ ತಾಲೂಕಿನ ಚನ್ನೇಶಪುರ ಗ್ರಾಮದ ಶಾಸಕರ ಮನೆ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿಮಾಡುವ ಸಾದ್ಯತೆ ಇದೆ.

ನಿನ್ನೆ 1 ಕೋಟಿ ಪತ್ತೆ: ವಿರೂಪಾಕ್ಷಪ್ಪ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇನ್ನೂ ಮೂರು ಕಂಪನಿಗಳು ಈ ಟೆಂಡರ್ ಪಡೆಯಲು 40 ಲಕ್ಷ ಹಣ ತೆಗೆದುಕೊಂಡು ಬಂದಿರುವುದು ಪತ್ತೆಯಾಗಿತ್ತು. ಹಣವನ್ನು‌ ಖಾಸಗಿ ಕಚೇರಿಗೆ ತಂದು ಕೊಡುವಂತೆ ಸೂಚನೆ‌ ನೀಡಲಾಗಿತ್ತು. ಹಾಗಾಗಿ ಎಲ್ಲರೂ ಹಣ ನೀಡಲು  ಖಾಸಗಿ ಕಚೇರಿಯಾದ ಎಂ ಸ್ಟುಡಿಯೋಗೆ ಲಕ್ಷ ಲಕ್ಷ ಹಣ ತಂದಿದ್ದರು. ಹೀಗೆ ತಂದಿರುವ ಒಟ್ಟು 1 ಕೋಟಿ 62 ಲಕ್ಷ ರೂಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತಂದೆ ವಿರೂಪಾಕ್ಷಪ್ಪ ಅವರ ಪರವಾಗಿ ಮಗ ಮಾಡಾಳ್ ಪ್ರಶಾಂತ್ ಹಣ ಪಡೆಯಲು ಬಂದಿರುವುದು ಕಂಡುಬಂದಿದೆ.

ನ್ಯಾಯಾಂಗ ಬಂಧನ: ಈ ನಡುವೆ ಬರೋಬರಿ 40 ಲಕ್ಷ ಲಂಚ ಸ್ವೀರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಬೆಂಗಳೂರು ಜಲಮಂಡಳಿಯ (ಬಿಡ್ಲೂಎಸ್ ಎಸ್ ಬಿ) ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮಡಾಳ್ ಗೆ 14 ದಿನ ನ್ಯಾಯಾಂಗ ಬಂಧನವಾಗಿದೆ. ಬಂಧಿತ ಪ್ರಶಾಂತ್ ಮಾಡಾಳ್ ಹಾಗೂ ಅವರ ಸಂಬಂಧಿ ಸಿದ್ದೇಶ್, ಸುರೇಂದ್ರ (ಅಕೌಂಟೆಂಟ್), ನಿಕೋಲಸ್ (ದುಡ್ಡು ಕೊಡಲು ಬಂದವನು) ಹಾಗೂ ಗಂಗಾಧರ್(ದುಡ್ಡು ಕೊಡಲು ಬಂದವನು)ಸೇರಿ ಐವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ನಗರದ ಲೋಕಾಯುಕ್ತ ಕೋರ್ಟ್ ಆದೇಶ ಹೊರಡಿಸಿದೆ.

Leave a Reply