ಮೈಸೂರು / ಚಾಮರಾಜನಗರ /ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡದಂತೆ ವ್ಯಾಪಕ ಮುಂಜಾಗ್ರತೆ ವಹಿಸಿರುವ ಚುನಾವಣಾ ಆಯೋಗದ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಬಿಯರ್ ಮತ್ತು ಅದನ್ನು ತಯಾರಿಸಲು ಸಂಗ್ರಹಿಸಲಾಗಿದ್ದ ಕಚ್ಚಾವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದ ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಅನಾಮಧೇಯ ಕರೆಯ ಬೆನ್ನು ಹತ್ತಿದ ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಅಬಕಾರಿ ಇಲಾಖೆ ಉಪ ಆಯುಕ್ತರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಜಂಟಿ ತಂಡ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕು ಇಮ್ಮಾವು ಗ್ರಾಮ ತಾಂಡ್ಯಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೂವರೀಸ್ ಕಂಪೆನಿ ಮೇಲೆ ದಾಳಿ ನಡೆಸಿತು.
ವಶಪಡಿಸಕೊಂಡ ವಸ್ತುಗಳು:
- 7000 ವಿವಿಧ ಬ್ರಾಂಡಿನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು
- 6,03,644 ರಟ್ಟಿನ ಪೆಟ್ಟಿಗೆಗಳು
- ಕೆಗ್ಗಳಲ್ಲಿ 23,160 ಲೀಟರ್
- ಬಿಬಿಟಿ ಟ್ಯಾಂಕ್ನಲ್ಲಿ 5,16,700 ಲೀಟರ್
- ಯು.ಟಿ.ಟ್ಯಾಂಕ್ನಲ್ಲಿ 66,16,700 ಲೀಟರ್
- ಸ್ಟೆಲೋಸ್ ಟ್ಯಾಂಕ್ನಲ್ಲಿ 6,50,458 ಕೆಜಿ ಕಚ್ಚಾ ವಸ್ತುಗಳು
ಒಟ್ಟಾರೆ ಇಲ್ಲಿ ಕಂಪನಿಯಲ್ಲಿ ಇಡಲಾಗಿದ್ದ ಲೆಕ್ಕಪುಸ್ತಕಗಳಿಗೂ ದಾಸ್ತಾನಿಗೆ ಹೋಲಿಕೆಯಾಗದ ಹಿನ್ನೆಲೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 98.52 ಕೋಟಿ ಮೊತ್ತದ ಬಿಯರ್ ಹಾಗೂ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದೆ. ಘಟನೆಗೆ ಸಂಬಂಧಿಸಿದ 17 ಆರೋಪಿಗಳು ಪರಾರಿಯಾಗಿದ್ದಾರೆ.
ಜಪ್ತಿಯಾದ ಒಟ್ಟು ಪದಾರ್ಥಗಳ ಮೌಲ್ಯ 98.52 ಕೋಟಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಅಂದಾಜಿಸಿದ್ದಾರೆ. ನಾಪತ್ತೆಯಾದ 17 ಆರೋಪಿಗಳ ಪತ್ತೆಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.




