40 ಪರ್ಸೆಂಟ್ ಸರ್ಕಾರ ಕನ್ನಡಿಗರಿಂದ ₹1,50,000 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ: ಕೆಪಿಸಿಸಿ

3 years ago

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಕಾಂಗ್ರೆಸ್- ಬಿಜೆಪಿ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭಜರಂಗದಳ ನಿಷೇಧ ವಿಚಾರವನ್ನು ಇಟ್ಟುಕೊಂಡು ಬಿಜೆಪಿ ದೊಡ್ಡ ರೀತಿಯಲ್ಲಿ ಆಂದೋಲನಕ್ಕೆ ಮುಂದಾಗಿರುವ ಬೆನ್ನಲೆ ಕಾಂಗ್ರೆಸ್ ಮತ್ತೆ ಬಿಜೆಪಿ ವಿರುದ್ಧದ ಭ್ರಷ್ಟಾಚಾರದ ಆರೋಪ ಕುರಿತು ಹೊಸ ಅಸ್ತ್ರ ಪ್ರಯೋಗಿಸಿದೆ.

ಬಿಜೆಪಿಯ ಆಡಳಿತದ ಅವಧಿಯಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಎಷ್ಟು ಲಂಚ ಪಡೆಯಲಾಗುತ್ತಿತ್ತು? ಕಾಮಗಾರಿಗಳ ಗುತ್ತಿಗೆಗೆ ಯಾವ ಪ್ರಮಾಣದ ಲಂಚ ನೀಡಲಾಗುತ್ತಿದೆ ಎಂದು ಆರೋಪಿಸಿ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಸಿಎಂ ಹುದ್ದೆಗೆ ₹2,500 ಕೋಟಿ

ಮಂತ್ರಿಗಳ ಹುದ್ದೆ ₹500 ಕೋಟಿ

ನೇಮಕಾತಿ ಮತ್ತು ವರ್ಗಾವಣೆ ದರ

ಕೆಎಸ್‌ಡಿಎಲ್‌ ₹5 ಕೋಟಿ – ₹15 ಕೋಟಿ

ಎಂಜಿನಿಯರ್ ₹1 ಕೋಟಿ – ₹5 ಕೋಟಿ

ಸಬ್ ರಿಜಿಸ್ಟಾರ್‌ ₹ಲಕ್ಷ – ₹5 ಕೋಟಿ

ಬೆಸ್ಕಾಂ ₹1 ಕೋಟಿ

ಪಿಎಸ್‌ಐ ₹80 ಲಕ್ಷ

ಸಹಾಯಕ ಪ್ರಾಧ್ಯಾಪಕ ₹50 ಲಕ್ಷ – ₹70 ಲಕ್ಷ

ಉಪನ್ಯಾಸಕ ₹30 ಲಕ್ಷ –₹50 ಲಕ್ಷ

ಎಫ್‌ಡಿಎ ₹30 ಲಕ್ಷ

ಸಹಾಯಕ ಎಂಜಿನಿಯರ್ ₹30 ಲಕ್ಷ

ಬಮುಲ್ ₹25 ಲಕ್ಷ

ಪಿಡಬ್ಲ್ಯೂಡಿ ಸಹಾಯಕ ಎಂಜಿನಿಯರ್ ₹10 ಲಕ್ಷ

ಪೊಲೀಸ್ ₹10 ಲಕ್ಷ

ಹುದ್ದೆಗಳ ದರ

ಬಿಡಿಎ ಆಯುಕ್ತ ₹10 ಕೋಟಿ – ₹15 ಕೋಟಿ

ಕೆಪಿಎಸ್‌ಸಿ ಅಧ್ಯಕ್ಷ ₹5 ಕೋಟಿ – ₹15 ಕೋಟಿ

ಡಿಸಿ ಮತ್ತು ಎಸ್‌ಸಿ ₹5 ಕೋಟಿ – ₹15 ಕೋಟಿ

ಉಪಕುಲಪತಿ ₹5 ಕೋಟಿ – ₹10 ಕೋಟಿ

ಎಸಿ– ತಹಸೀಲ್ದಾರ್ ₹50 ಲಕ್ಷ – ₹3 ಕೋಟಿ

2019ರಿಂದ 2023ರ ರವರೆಗೆ ಆಡಳಿತದುದ್ದಕ್ಕೂ ಲೂಟಿಯನ್ನೇ ಪರಮದೈವ ಎಂದುಕೊಂಡು ರಾಜ್ಯದ ಖಜಾನೆಯನ್ನು ಬರಿದು ಮಾಡಿದ ಬಿಜೆಪಿ ಸರ್ಕಾರ ಕನ್ನಡಿಗರನ್ನು, ಕರ್ನಾಟಕದ ಅಭಿವೃದ್ಧಿಯನ್ನು ಬೀದಿಪಾಲು ಮಾಡಿದೆ. ಮತ ಹಾಕುವ ಮುನ್ನ ಕರ್ನಾಟಕದ ಭವಿಷ್ಯವನ್ನು ಪರಿಗಣಿಸಿ ಎಂದು  ಟ್ವೀಟ್ ಮಾಡಿದೆ.

ಕಳೆದ ನಾಲ್ಕು ವರ್ಷಗಳಲ್ಲಿ 40 ಪರ್ಸೆಂಟ್ ಸರ್ಕಾರ ಕನ್ನಡಿಗರಿಂದ ₹1,50,000 ಕೋಟಿಗೂ ಹೆಚ್ಚು ಹಣ ಲೂಟಿ ಮಾಡಿದೆ. ಇದೇ ಗತಿಯಲ್ಲಿ ಸಾಗಿದರೆ ನಮ್ಮ ರಾಜ್ಯವೇ ನಾಶವಾಗುತ್ತದೆ. ಈ ಲೂಟಿಯನ್ನು ನಿಲ್ಲಿಸಿ! ಎಂದು ಕಾಂಗ್ರೆಸ್ ಮನವಿ ಮಾಡಿದೆ.

Leave a Reply