ಬೆಂಗಳೂರು: ಕರ್ನಾಟಕ ಮರಾಠ ವೆಲ್ ಫೇರ್ ಆಸೋಸಿಯೇಷನ್ ವತಿಯಿಂದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ 395ನೇ ಜಯಂತೋತ್ಸವ ಸಮಾರಂಭವನ್ನು ಸದಾಶಿವನಗರದ ಬಾಷ್ಯಂ ಸರ್ಕಲ್ ಬಳಿ ಇರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಗೋಸಾಯಿ ಮಠ, ಗವೀಪುರಂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಿ.ಎನ್.ಅಶ್ವಥ್ ನಾರಾಯಣ್, ಮಾಜಿ ಗೃಹ ಮತ್ತು ಸಾರಿಗೆ ಸಚಿವ ಪಿ.ಜಿ.ಸಿಂಧ್ಯಾ, ಮಾಜಿ ಶಾಸಕ ಎಂ.ಜಿ.ಮೂಳೆ, ಕರ್ನಾಟಕ ಮರಾಠ ವೆಲ್ ಫೇರ್ ಆಸೋಸಿಯೇಷನ್ ಅಧ್ಯಕ್ಷರಾದ ಎಸ್. ಮನೋಜ್ ಕುಮಾರ್ ರಣ್ಣೋರ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಬೋಜಗಡೆ ಮತ್ತು ಮರಾಠ ಸಮಾಜದ ಮುಖಂಡರಾದ ಶ್ಯಾಮ್ ಸುಂದರ್ ಗಾಯಕ್ ವಾಡ್, ಕನ್ನಡ ಚಲನಚಿತ್ರ ಕಲಾವಿದ ಗಣೇಶ್ ರಾವ್ ಕೇಸರ್ ಕರ್ ಮತ್ತು ನಿಕಟಪೂರ್ವ ಬಿ.ಬಿ.ಎಂ.ಪಿ. ಸದಸ್ಯ ಸುಮಂಗಲ ಕೇಶವ್, ಮಾಜಿ ಪಾಲಿಕೆ ಸದಸ್ಯೆ ಹೇಮಲತಾ ಸತೀಶ್, ಗಣೇಶ್ ರಾವ್ ಮಾನೆ ಭಾಗವಹಿಸಿದ್ದರು.
ಬಸವರಾಜ್ ಬೊಮ್ಮಾಯಿರವರು ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ ಹಬ್ಬ ಇಂದು ಶುಭಾ ದಿನ. ಆಧುನಿಕ ಪ್ರಜಾಪ್ರಭುತ್ವದಲ್ಲಿ ಶಿವಾಜಿ ಮಹಾರಾಜರ ಆರ್ದಶ ಗುಣಗಳು ಇದ್ದವರು ಸಮಾಜದಲ್ಲಿ ಉತ್ತಮ ನಾಯಕರಾಗಿ ಬೆಳೆಯಬಹುದು. ನೈಜ, ರಕ್ತ, ಗುಣದಿಂದ ವೀರತ್ವ ಇತ್ತು. ಪ್ರತಿ ಬಾರಿ ಯುದ್ದದಲ್ಲಿ ಜಯಗಳಿಸಲು ಅವರ ಮುಖದಲ್ಲಿ ತೇಜಸ್ಸು ಕಾರಣವಾಗಿತ್ತು. ಶಿವಾಜಿ ಮಹಾರಾಜ ಸೈನಿಕ ಬಲ ಕಡಿಮೆ ಇದ್ದರು ಅವರಲ್ಲಿ ಇದ್ದ ಶಕ್ಕಿಯಿಂದ ಎದುರಾಳಿಯನ್ನು ಸೆದೆ ಬಡಿಯುತ್ತಿದ್ದರು ಎಂದರು.
ಶಿವಾಜಿ ಮಹಾರಾಜರಿಗೆ ಬೆಂಗಳೂರು ನಿಕಟ ಸಂಬಂಧವಿದೆ. ಇಂದಿನ ಸಮಾಜಕ್ಕೆ ಶಿವಾಜಿ ಆದರ್ಶವಾಗಿದ್ದಾರೆ. ಬಡತನ ಅವಿದ್ಯಾವಂತಕೆ ಮತ್ತು ಅಜ್ಞಾನವನ್ನು ಓಡಿಸಿ ,ಜ್ಞಾನವೆಂಬ ಬೆಳಕು ಚಲ್ಲಲು ಜ್ಞಾನವೆಂಬ ಖಡ್ಗ ಹಿಡಿಯಬೇಕು. ಶಿಕ್ಷಣದಲ್ಲಿ ಮಹತ್ವದ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿರವರು ರಾಷ್ಟೀಯ ಶಿಕ್ಷಣ ನೀತಿ ಜಾರಿ ತಂದಿದ್ದಾರೆ. ಕರ್ನಾಟಕ ಹೊಸ ಶಿಕ್ಷಣ ನೀತಿ ಆಳವಡಿಸಿಕೊಂಡ ಮೊದಲ ರಾಜ್ಯವಾಗಿದೆ ಎಂದರು.
ವೇದಾಂತಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ ಧರ್ಮ ರಕ್ಷಣೆ, ಧರ್ಮ ಸ್ಥಾಪನೆಗಾಗಿ ಬೀಜಾಬಾಯಿ ಮಡಿಲಿನಲ್ಲಿ ಜನಸಿದ ಮಹಾಪುರುಷ ಛತ್ರಪತಿ ಶಿವಾಜಿರವರು .ಅವರ ಜನ್ಮ ಸಹ ದಿವ್ಯ ಶಿವಾಜಿ ಮಹಾರಾಜರು ಸರ್ವ ಜನಾಂಗದ ನಾಯಕರಾಗಿದ್ದರು. ಧರ್ಮ ರಕ್ಷಣೆಗಾಗಿ ಹೋರಾಟ ಮಾಡಿದರು, ದೇಶ ಭಕ್ತರಾಗಿದ್ದರು ಭಾರತ ಹೆಮ್ಮೆ ಪಡುವಂತಹ ದಿನ ಶಿವಾಜಿ ಜಯಂತಿಯಾಗಿದೆ ಎಂದರು.
ಪಿ.ಜಿ.ಆರ್.ಸಿಂಧ್ಯಾ ಮಾತನಾಡಿ ಬಸವರಾಜ್ ಬೊಮ್ಮಾಯಿರವರು ತಂದೆಯಂತೆ ಸರಳ, ಸಜ್ಞನ ರಾಜಕಾರಣಿ. ರಾಜ್ಯದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಅರಿವು ಇದೆ. ಅಭಿವೃದ್ದಿ ಪಥದತ್ತ ಕರ್ನಾಟಕವನ್ನು ಮುನ್ನಡೆಸಲಿದ್ದಾರೆ. ಮರಾಠದ ಹೋರಾಟಗಾರ ನಾರಾಯಣ್ ರವರ ಪ್ರತಿಮೆಯನ್ನು ಹುಬ್ಬಳ್ಳಿಯಲ್ಲಿ ಸ್ಥಾಪಿಸಲಾಗಿದೆ. ಸರ್ವ ಜನಾಂಗದ ರಕ್ಷಕರು ಮಹಾಶೂರ ಛತ್ರಪತಿ ಶಿವಾಜಿ ಮಹಾರಾಜರಾಗಿದ್ದರು. ಅಖಂಡ ಭಾರತಕ್ಕೆ ಕ್ಷತ್ರಿಯರ ಕೂಡುಗೆ ಅಪಾರ ಎಂದರು.
ರಾಜ್ಯ ಮಾರ್ಚ್ ಬಜೆಟ್ ನಲ್ಲಿ ಹೆಚ್ಚಿನ ಅನುದಾನವನ್ನು ಮರಾಠ ಸಮುದಾಯಕ್ಕೆ ಮೀಸಲು ನೀಡಬೇಕು ಮತ್ತು ನಿಗಮ, ಮಂಡಳಿಯಲ್ಲಿ ಮರಾಠ ಸಮುದಾಯಕ್ಕೆ ನೀಡಬೇಕು ಎಂದು ಮನವಿ ಮಾಡಿದರು.




