ಬೆಂಗಳೂರು: ದನಕರುಗಳಿಗಾಗಿ ಹೊಸ ಹುಲ್ಲು ಚಿಗುರಲಿ ಎಂದು ಒಣಗಿದ್ದ ಹುಲ್ಲಿಗೆ ಹಚ್ಚಿದ ಬೆಂಕಿ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದ ಪರಿಣಾಮ ಸುಮಾರು 30 ಎಕರೆ ಅರಣ್ಯ ಪ್ರದೇಶ ಸುಟ್ಟು ಭಸ್ಮವಾಗಿರುವ ಘಟನೆ ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ವ್ಯಾಪ್ತಿಯ ಸಂಗಮ ವನ್ಯಜೀವಿ ವಲಯದಲ್ಲಿ ನಡೆದಿದೆ.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ಅರಣ್ಯಕ್ಕೆ ಬೆಂಕಿ ಹಚ್ಚಿದ ಆರೋಪದಲ್ಲಿ ಹೂಳ್ಯ ಗ್ರಾಮದ ರಾಜಪ್ಪ (42) ಎಂಬುವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.
ಸಂಗಮ ವನ್ಯಜೀವಿ ವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಕುರಿಗಾಹಿ ರಾಜಪ್ಪ ಮೇಕೆ ಮೇಯಿಸಲು ಹೋಗಿದ್ದ. ಈ ವೇಳೆ ಅರಣ್ಯದಲ್ಲಿರುವ ಒಣ ಹುಲ್ಲು ಸುಟ್ಟರೆ ಹೊಸ ಹುಲ್ಲು ಚಿಗುರುತ್ತೆ. ಇದರಿಂದ ಕುರಿ, ಮೇಕೆಗಳಿಗೆ ಮೇವು ಸಿಗುತ್ತದೆ ಎಂಬ ಕಾರಣಕ್ಕೆ ಅರಣ್ಯಕ್ಕೆ ಬೆಂಕಿಹಚ್ಚಿದ್ದ.
ಅರಣ್ಯಕ್ಕೆ ಬೆಂಕಿಬಿದ್ದ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಬಳಿಕ ಬೆಂಕಿನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಬೆಂಕಿ ನಂದಿಸುವಷ್ಟರಲ್ಲಿ ಸುಮಾರು 30 ಎಕರೆಯಷ್ಟು ಅರಣ್ಯ ಸುಟ್ಟು ಭಸ್ಮವಾಗಿದೆ. ಈ ವೇಳೆ ಅಕ್ರಮವಾಗಿ ವನ್ಯಜೀವಿ ವಲಯಕ್ಕೆ ಎಂಟ್ರಿಯಾಗಿದ್ದ ರಾಜಪ್ಪನನ್ನ ಹಿಡಿದು ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಬೆಂಕಿಹಾಕಿದ್ದನ್ನು ರಾಜಪ್ಪ ಒಪ್ಪಿಕೊಂಡಿದ್ದಾನೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರಣ್ಯಕ್ಕೆ ಬೆಂಕಿಹಾಕಿದ ಹಿನ್ನೆಲೆ ಕೆಲ ವನ್ಯಜೀವಿಗಳೂ ಸಹ ಸಾವನ್ನಪ್ಪಿದ್ದು, ಬೃಹತ್ ಗಾತ್ರದ ಹೆಬ್ಬಾವು ಸಹ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದೆ.




