150 ಕೋಟಿ ವೆಚ್ಚದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆಗೆ ಸಜ್ಜು

3 years ago

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ವಾರ್ಡ್ ನಲ್ಲಿ ಲೋಕಾರ್ಪಣೆಗೆ ಸಿದ್ಧಗೊಂಡಿರುವ 300 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆದಿಚುಂಚನಗಿರಿ ಪೀಠದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ಸ್ವಾಮೀಜಿ, ಸ್ಥಳೀಯ ಶಾಸಕ, ವಸತಿ ಸಚಿವ ವಿ.ಸೋಮಣ್ಣ ಭೇಟಿ ನೀಡಿದರು.

ಬಹುಮಹಡಿ ಮಲ್ಟಿ  ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜನರಲ್ ಚಕ್ ಅಪ್, ಹೆರಿಗೆ ವಾರ್ಡ್, ಆಪರೇಷನ್ ಥೀಯಟರ್, ಶಿಶುಗಳ ನಿಗಾ ಘಟಕ, ಹೃದಯ, ದಂತ, ಮೂಳೆ, ನೇತ್ರ ತಪಾಸಣೆ ಕೊಠಡಿಗಳು, ಸ್ಕಾನಿಂಗ್ ಅಮ್ಲಜನಕ ಸಂಗ್ರಹ ಕೇಂದ್ರವನ್ನು ವೀಕ್ಷಿಸಿದರು.

ಶ್ರೀ ಶ್ರೀ ಶ್ರೀ ನಿರ್ಮಾಲಾನಂದ ಸ್ವಾಮೀಜಿ ಮಾತನಾಡಿ, ಬಡವರ, ಮಧ್ಯಮವರ್ಗದ ಕುಟುಂಬಗಳಿಗೆ ಆರೋಗ್ಯ ಶಿಕ್ಷಣ ಕಡಿಮೆ ವೆಚ್ಚದಲ್ಲಿ ಲಭಿಸಿದರೆ, ಆರ್ಥಿಕವಾಗಿ ಸಬಲರಾಗುತ್ತಾರೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಎಲ್ಲ ಸೌಲಭ್ಯಗಳು ಜನ ಸಾಮಾನ್ಯರ ಆರೋಗ್ಯ ರಕ್ಷಣೆಗೆ ಸ್ಥಾಪನೆಯಾಗುತ್ತಿರುವುದು ಸಂತೋಷದಾಯಕ ವಿಷಯ. ಪ್ರತಿಯೊಬ್ಬರು ಆರೋಗ್ಯದ ಕಡೆ ಗಮನಹರಿಸಬೇಕು. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ ಎಂದರು.

ವಿ.ಸೋಮಣ್ಣ ಮಾತನಾಡಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಬಡವರು, ಮಧ್ಯಮವರ್ಗದವರು ಹೆಚ್ಚು ಜನಸಂಖ್ಯೆವುಳ್ಳ ಪ್ರದೇಶವಾಗಿದೆ. ಶ್ರೀಮಂತರಿಗೆ ಸಿಗುವ ಹೈಟೆಕ್ ವೈದ್ಯಕೀಯ ಸೌಲಭ್ಯ ಜನಸಾಮಾನ್ಯರಿಗೆ ಲಭಿಸಬೇಕು ಎಂದು 150 ಕೋಟಿ ರೂಪಾಯಿ ವೆಚ್ಚದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ ಎಂದರು.

ಇದೇ ತಿಂಗಳು 31ನೇ ತಾರೀಖು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಉತ್ತರಪ್ರದೇಶ ಮುಖಯಮಂತ್ರಿ ಆದಿತ್ಯನಾಥ್ ಲೋಕರ್ಪಣೆ ಮಾಡಲಿದ್ದಾರೆ ಎಂದರು.

ವಿಶ್ವನಾಥಗೌಡ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗಂಗಭೈರಯ್ಯ, ಕೆ.ಉಮೇಶ್ ಶೆಟ್ಟಿ, ರೂಪ ಲಿಂಗೇಶ್ವರ್, ಕ್ರಾಂತಿರಾಜು,ಶ್ರೀಧರ್, ರಮೇಶ್, ರಾಜಪ್ಪ ಪಾಲ್ಗೊಂಡಿದ್ದರು.

Leave a Reply