ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ: ಬೃಹತ್ ನವಮತದಾರರ ಸಮಾವೇಶ
ಮತದಾರರಿಗೆ ಅರಿವು ಮೂಡಿಸಬೇಕು
ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾಸಿಯ ಭವನದಲ್ಲಿ ನವ ಮತದಾತ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೆ.ಉಮೇಶ್ ಶೆಟ್ಟಿ ಮಾತನಾಡಿ, ನವ ಮತದಾರರಿಗೆ ಪ್ರಜಾಪ್ರಭುತ್ವದಲ್ಲಿರುವ ಮತದಾನ ಹಕ್ಕು ಅದರ ಪ್ರಯೋಜನ ಕುರಿತು ಜಾಗೃತಿ ಮತ್ತು ಅರಿವು ಮೂಡಿಸುವುದು ಅಗತ್ಯ ಎಂದರು.
ದೇಶದಲ್ಲಿ ಯುವ ಮತದಾರರ ಸಂಖ್ಯೆ ಶೇಕಡ 60%ರಷ್ಟು ಇದೆ .ನವ ಭಾರತ ನಿರ್ಮಾಣ ಮತ್ತು ದೇಶವನ್ನು ವಿಶ್ವಗುರುವಾಗಿ ರೂಪಿಸಲು ಯುವ ಮತದಾರರು ಪ್ರಮುಖ ಪಾತ್ರ ವಹಿಸುತ್ತಾರೆ. ನವ ಭಾರತ ನಿರ್ಮಾಣಕ್ಕೆ ಭವಿಷ್ಯದ ರೂವಾರಿಗಳಾದ ನವ ಮತದಾರರನ್ನ ಜಾಗೃತಿ ಮೂಡಿಸುವ ಕೆಲಸ. 18ವರ್ಷ ತುಂಬಿದವರು ಮೊದಲು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಕೊಂಡು, ಓಟರ್ ಐ.ಡಿ.ಪಡೆದುಕೊಳ್ಳಿ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಹಕ್ಕು ನೀಡಿದ್ದಾರೆ. ನಿಮ್ಮ ಪ್ರತಿ ಒಂದು ಮತ ದೇಶದ ಭವಿಷ್ಯ ರೂಪಿಸುತ್ತದೆ, ನಿಮ್ಮ ಮತದಿಂದ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಯಾಗಿದೆ. ಭಾರತದ ಆರ್ಥಿಕ ವ್ಯವಸ್ಥೆ ಉತ್ತಮವಾಗಿದೆ, ಕೊರೋನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಕೊವಿಡ್ ವಾಕ್ಸಿನ್ ದೇಶದಲ್ಲಿ ತಯಾರಿಕೆ ಮಾಡಿ, ಜನರಿಗೆ ಉಚಿತವಾಗಿ ನೀಡಲಾಯಿತು ಎಂದರು.
ದೇಶದ ರಕ್ಷಣೆ, ಸುರಕ್ಷತೆ ಮತ್ತು ಅಭಿವೃದ್ದಿಗಾಗಿ ಮತ್ತು ಭವಿಷ್ಯದ ಭಾರತ 1 ಕೋಟಿ ನವ ಮತದಾರರು ಕುರಿತು ಪ್ರಧಾನಿ ನರೇಂದ್ರಮೋದಿರವರು ಮಾತನಾಡಲಿದ್ದಾರೆ. ಯುವ ಮತದಾರರು ದೇಶ ಭವಿಷ್ಯ ನಿಮ್ಮ ಕೈಯಲ್ಲಿದೇ, ನಿಮ್ಮಲ್ಲಿ ಶಕ್ತಿ ಇದೆ. ಯುವ ಸಮೂಹ ಒಂದು ಬಾರಿ ಮನಸ್ಸು ಮಾಡಿದರೆ ಸಾಕು. ಪ್ರಧಾನಿ ನರೇಂದ್ರಮೋದಿರವರ 10ವರ್ಷದಲ್ಲಿ ಭಾರತ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ ಎಂದು ಹೇಳಿದರು.
ಡಿಜಿಟಲ್ ಇಂಡಿಯ ಮೂಲಕ ಆನ್ ಲೈನ್ ಮೂಲಕ ಹಣ ಪಾವತಿ ಮಾಡುವ ಯೋಜನೆ ಇಂದು ದೇಶದ ಪ್ರತಿಯೊಬ್ಬ ನಾಗರಿಕರು ಆನ್ ಲೈನ್ ವ್ಯವಹಾರ ಮಾಡುತ್ತಿದ್ದಾನೆ. ಕನಸು ಕಾಣುವುದು ಸಹಜ ಅದನ್ನ ನನಸು ಮಾಡಬೇಕು ದೃಢ ಸಂಕಲ್ಪ ಮಾಡಬೇಕು ಎಂದು ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಹೇಳಿದ್ದರು. ಸುಭದ್ರ ಸರ್ಕಾರವಿದ್ದಾಗ ದೇಶ ಅಭಿವಧ್ದಿ ಸಾಧ್ಯ ನವ ಮತದಾರರು ದೇಶದ ಭವಿಷ್ಯ ರೂಪಿಸಬಲ್ಲರು ಎಂದರು.




