ಜನ ಆರೋಗ್ಯವಂತರಾಗಿಲು ಯೋಗ ಆಂದೋಲನ ಅಗತ್ಯ: ಎಸ್.ಸುರೇಶ್ ಕುಮಾರ್

4 years ago

ಬೆಂಗಳೂರು: ನಮ್ಮ ದೇಶದ ಯೋಗ ವಿಶ್ವಕ್ಕೆ ಕೊಟ್ಟ ಕೊಡುಗೆ. ಇಂದು 170ಕ್ಕೂ ಹೆಚ್ಚು ದೇಶದಲ್ಲಿ ಯೋಗ ದಿನಾಚರಣೆ ಅಚರಿಸಲಾಗುತ್ತಿದೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಭಾಷ್ಯಂ ವೃತ್ತದಲ್ಲಿ 8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ, ಕರ್ನಾಟಕ ಸಹಯೋಗದಡಿಯಲ್ಲಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಇಂದಿನ ಪರಿಸರ, ಕಲುಷಿತ ವಾತವರಣ ಮತ್ತು ಮಾನಸಿಕ ಒತ್ತಡ, ಆಹಾರ ಪದ್ದತಿಯಿಂದ ಆನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದರು.

ಮನುಷ್ಯ ತನ್ನ ಜೀವನದಲ್ಲಿ ಆರೋಗ್ಯವಂತರಾಗಿರಲು ಪ್ರತಿ ದಿನ ಒಂದು ಘಂಟೆ ಯೋಗಕ್ಕೆ ಮೀಸಲು ಇಡಬೇಕು. ಯೋಗದ ಬಗ್ಗೆ ಜನಜಾಗೃತಿ ಮತ್ತು ಅರಿವು ಮೂಡಿಸಲು ಸಾರ್ವಜನಿಕ ಸ್ಥಳದಲ್ಲಿ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಆರೋಗ್ಯವಂತ ಸಮಾಜ, ಸದೃಢ ಮತ್ತು ಸಮರ್ಥ ಭಾರತ ನಿರ್ಮಾಣ ಮಾಡಲು ಪ್ರತಿಯೊಂದು ಮನೆ ಯೋಗ ಕೇಂದ್ರಗಳಾಬೇಕು ಎಂದರು.

ರಾಘವೇಂದ್ರರಾವ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ದೀಪಾ ನಾಗೇಶ್, ಬಿ.ಎನ್.ಶ್ರೀನಿವಾಸ್, ಸತೀಶ್ ಭಗವಾನ್, ವೆಂಕಟೇಶ್ ಬಾಬು, ಕಿರಣ್, ಮತ್ತು ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಿಬ್ಬಂದಿ, ಸಾರ್ವಜನಿಕರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡರು.

Leave a Reply