ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದು!

4 years ago

ಬೆಂಗಳೂರು: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬ ಮಾತಿನಂತೆ ಯಾವುದೇ ವಿದ್ಯೆ, ನೃತ್ಯ ಮತ್ತು ಸಂಗೀತದಲ್ಲಿ ಗುರುವಿನ ಗುಲಾಮನಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಶ್ರೀ ಲಲಿತಾ ಕಲಾ ನಿಕೇತನ ಕಾರ್ಯದರ್ಶಿ ರೇಖಾ ಜಗದೀಶ್ ಹೇಳಿದರು.

ಭಾರತೀಯ ನೃತ್ಯ ಮತ್ತು ಗುರು, ಶಿಷ್ಯ ಪರಂಪರೆ ಉಳಿಸಲು ಕಳೆದ 20 ವರ್ಷಗಳಿಂದ ಶ್ರೀ ಲಲಿತ ಕಲಾನಿಕೇತನ ಅವಿರತವಾಗಿ ಶ್ರಮಿಸುತ್ತಿದೆ. ಈಗ ನೃತ್ಯ ಅಭ್ಯಾಸಕ್ಕೆ ಗಿರಿಜನ ಯೋಜನೆ ಅನುದಾನ ಅಡಿಯಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ 5 ತಿಂಗಳ ಕಾಲ ಮಕ್ಕಳಿಗೆ ಉಚಿತವಾಗಿ ನೃತ್ಯಾಭ್ಯಾಸ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಭಾರತೀಯ ನೃತ್ಯ ಪರಂಪರೆ ಉಳಿಯಬೇಕು ಮತ್ತು ಬೆಳಯಬೇಕು ಆದ್ದರಿಂದ ಶ್ರೀ ಲಲಿತ ಕಲಾನಿಕೇತನ ಮಕ್ಕಳಿಗೆ ನೃತ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಶ್ರೀ ಲಲಿತ ಕಲಾ ಅಕಾಡೆಮಿ ಅಧ್ಯಕ್ಷರಾದ ಲಲಿತಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ನೀಲಮ್ಮ, ಫಟ ಮತ್ತು ಮೃದಂಗ ವಿದೂಷಿ ಶಶಿಕಲಾ, ಸಮಾಜ ಸೇವಕ ಮಧು ಪೆಂಚಾಲಯ್ಯ, ಕರ್ನಾಟಕ ನೃತ್ಯ ಅಕಾಡೆಮಿ ರಿಜ್ಜಿಸ್ಟಾರ್ ಎಸ್.ಹೆಚ್.ಶಿವರುದ್ದಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply