ಬೆಂಗಳೂರು – ಮೈಸೂರು ಮಾರ್ಗದ ರಸ್ತೆಯ ನಿರ್ಮಾಣಕ್ಕೆ ಮೂಲ ಕಾರಣ ಯಾರು?

3 years ago

ಬೆಂಗಳೂರು ಮತ್ತು ಮೈಸೂರಿನ ಮಧ್ಯೆ ಉತ್ತಮವಾದ ರಸ್ತೆಯೊಂದರ ನಿರ್ಮಾಣ ಆಗಬೇಕು ಎಂಬ ಕೂಗು ಬಹು ಕಾಲದಿಂದ ಇದ್ದರೂ ಕೂಡಾ ಆ ದಿಕ್ಕಿನೆಡೆಗೆ ವ್ಯವಸ್ಥಿತ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ.

ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರಲ್ಲಿ ಚರ್ಚಿಸಿ ಸುಮಾರು 1882 ಕಿಲೋಮೀಟರ್ ರಸ್ತೆಗಳನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸುವ ಪ್ರಸ್ತಾವವನ್ನು ಅಂದಿನ ಯುಪಿಎ ಸರ್ಕಾರದ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರಿಗೆ ಸಲ್ಲಿಸಲಾಗಿ ಅವರು ಈ ರಸ್ತೆಗಳನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಅನುಮೋದನೆಯನ್ನು ನೀಡಿದರು. ಇದು ಬೆಂಗಳೂರು – ಮೈಸೂರು ಮಾರ್ಗದ ರಸ್ತೆಯ ನಿರ್ಮಾಣಕ್ಕೆ ಇರುವ ಮೂಲ ಕಾರಣ ಆಯಿತು

ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾರ್ಪಡಿಸದ ಹೊರತು ಯಾವುದೇ ಕಾರಣಕ್ಕೂ ಬೆಂಗಳೂರು – ಮೈಸೂರು ರಸ್ತೆ ಕಾರ್ಯ ರೂಪಕ್ಕೆ ಬರುತ್ತಲೇ ಇರಲಿಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಹಲವು ಚರ್ಚೆ ಮತ್ತು ವ್ಯವಸ್ಥಿತವಾದ ಪ್ರಯತ್ನದಿಂದ
ಬೆಂಗಳೂರು – ಮೈಸೂರು ರಸ್ತೆ ಆಗಲೇಬೇಕು ಎಂಬ ಉದ್ದೇಶ ಸಾಕಾರಗೊಳಿಸುವ ಸಲುವಾಗಿ ಅಗತ್ಯ ಪ್ರಸ್ತಾವನೆ ರೂಪಿಸಿ, ಕೇಂದ್ರದ ಅನುಮೋದನೆ ಪಡೆದು ಬೆಂಗಳೂರು – ಮೈಸೂರು ಮಾರ್ಗವಾಗಿ ಬಂಟ್ವಾಳ ತಲುಪುವ (ರಾಷ್ಟ್ರೀಯ ಹೆದ್ದಾರಿ 275) ರಸ್ತೆಗೆ ನಮ್ಮ ರಾಜ್ಯ ಸರ್ಕಾರದಿಂದ ಡಿಪಿಆರ್ ಮಾಡಿಸಲಾಗಿದೆ.

ಈ ಪ್ರಸ್ತಾವನೆಯನ್ನು ಮಂಜೂರು ಮಾಡಿದ ನಂತರ ಯಾವುದೇ ಪಕ್ಷದ ಸರ್ಕಾರ ಬಂದರೂ ಕೂಡಾ ಅದನ್ನು ಪೂರ್ಣಗೊಳಿಸಲೇ ಬೇಕಾಗಿದ್ದು ಅದರ ಭಾಗವಾಗಿಯೇ ಇಂದು ಬೆಂಗಳೂರು – ಮೈಸೂರು ರಸ್ತೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ಕರ್ನಾಟಕದ ಇತಿಹಾಸದಲ್ಲೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯೊಂದು ಸುಮಾರು 30 ರಿಂದ 40 ಸಾವಿರದಷ್ಟು ಕಿಲೋಮೀಟರ್ ರಸ್ತೆಯನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡಿದ್ದು ಇದು ಸರ್ವಕಾಲಿಕ ದಾಖಲೆಯಾಗಿದೆ.

ಈ ಪೈಕಿ

1) ಬೆಂಗಳೂರು- ಮೈಸೂರು- ಬಂಟ್ವಾಳ ರಸ್ತೆ

2) ಬೀದರ್ – ಚಾಮರಾಜನಗರ ರಸ್ತೆ

3) ಶಿವಮೊಗ್ಗ – ಶಿಕಾರಿಪುರ – ಹಾನಗಲ್ ರಸ್ತೆ

4) ಮಳವಳ್ಳಿ- ದಾಬಸ್ ಪೇಟೆ- ಪಾವಗಡ ರಸ್ತೆ

5) ಹುಬ್ಬಳ್ಳಿ ಭಾಗದ ರಸ್ತೆಗಳು

6) ಬಿಜಾಪುರ – ಗುಲ್ಬರ್ಗ ರಸ್ತೆ

7) ಬೀದರ್ ಭಾಗದ ರಸ್ತೆಗಳು

8) ಬಹುತೇಕ ಎಲ್ಲಾ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳನ್ನು ಜೋಡಿಸುವ ರಸ್ತೆಗಳನ್ನು ನಾನು ಇಲ್ಲಿ ಉದಾಹರಣೆಗೆ ತೆಗೆದುಕೊಳ್ಳುವೆ

ಇನ್ನು

ನಮ್ಮ ಸರ್ಕಾರದ ಅವಧಿಯಲ್ಲೇ ಆರಂಭಗೊಂಡು ನಮ್ಮ ಅವಧಿಯಲ್ಲೇ ಪೂರ್ಣಗೊಂಡ, ಕೆಶಿಪ್ ರಸ್ತೆಗಳು ತನ್ನ ಗುಣ ಮಟ್ಟದ ಕಾರಣಕ್ಕಾಗಿ ವಿಶ್ವ ಬ್ಯಾಂಕ್ ನಿಂದ ” Best Infrastructure in the country” ಎಂಬ ಹೆಸರು ಪಡೆದಿದೆ. (ಬೇಕಾದರೆ ಈ ಸಂಗತಿಯನ್ನು ಯಾರಾದರೂ ಪರೀಕ್ಷಿಸಬಹುದಾಗಿದೆ – Subject to verification)

ಇದಕ್ಕೆ ಪೂರಕ ಸಾಕ್ಷಿಯಾಗಿ ಬಿಜೆಪಿ ಪಕ್ಷದವರೇ

“ಸರ್ ನೀವು ನಿಮ್ಮ ಅಧಿಕಾರದ ಅವಧಿಯಲ್ಲಿ ಉತ್ತಮ ಮೂಲ ಸೌಕರ್ಯ ಅಭಿವೃದ್ಧಿ ಪಡಿಸಿದ್ದೀರಿ” ಎಂದು ಕರೆದು ಸನ್ಮಾನ ಮಾಡಿದ್ದಾರೆ

ಇನ್ನೊಂದೆಡೆ

ಇದನ್ನು ಜವಾಬ್ದಾರಿಯಿಂದ, ಗಟ್ಟಿಯಾಗಿ ಮತ್ತು ಅಷ್ಟೇ ಸಂತೋಷದಿಂದ ಹೇಳಬೇಕಾದ ನಮ್ಮ ಪಕ್ಷದವರೂ ಸುಮ್ಮನಿದ್ದಾರೆ. ಅದ್ಯಾಕೋ ನಾನೂ ಕಾಣೆ

ಇರಲಿ !

ಅವರು ಹೇಳಿದರೂ ಹೇಳದೇ ಇದ್ದರೂ, ನಮ್ಮ ಸರ್ಕಾರದ ಅವಧಿಯಲ್ಲಿ ಯೋಜಿಸಿ ಅನುಮೋದಿಸಿರುವ ರಸ್ತೆಗಳೇ, ಕರ್ನಾಟಕದಲ್ಲಿ ಮುಂದಿನ 15 – 20 ವರ್ಷಗಳವರೆಗೆ ಕೆಲಸಗಳಾಗಿ ನಡೆಯುತ್ತದೆ ಎಂಬುದು ಸತ್ಯ ಹಾಗೂ ಅದು ನಮ್ಮ ಕಾಂಗ್ರೆಸ್ ಪಾಲಿಗೆ ಹೆಮ್ಮೆಯ ಸಂಗತಿಯೂ ಹೌದು!

ಅಂದಹಾಗೆ,

ಇದನ್ನೆಲ್ಲ ಹೇಳುವಂತಹ ಇರಾದೆ ನನಗೆ ಇರಲೇ ಇಲ್ಲ.

ಆದರೆ ಒಂದು ಗುರಿ ಮತ್ತು ಬದ್ಧತೆ ಇಟ್ಟುಕೊಂಡು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗೌರವಿಸ ಬೇಕಾದ ಸ್ಥಳದಲ್ಲಿ ಬೇರೆ ಯಾರೋ ಬಂದು ಕೇವಲ ಹುಸಿ ಪ್ರಚಾರದ ಕಾರಣಕ್ಕಾಗಿ ಅದನ್ನು ನಾವೇ ಮಾಡಿದ್ದೇವೆ ಎಂದು ಹೇಳುವಾಗ ಬೇಸರ ಆಗುತ್ತದೆ.

ಹಿಂದೆಲ್ಲಾ ಬರೀ ಕೆಲಸ ಮಾಡಿದರೆ ಸಾಕು, ಜನರು ಅದನ್ನು ನೋಡಿ ಬೆನ್ನು ತಟ್ಟುತ್ತಾರೆ ಎಂದುಕೊಳ್ಳುತ್ತಿದ್ದೆವು.

ಆದರೆ ಈ ಬದಲಾದ ಕಾಲಘಟ್ಟದಲ್ಲಿ ಕೆಲಸ ಮಾಡುವುದರ ಜೊತೆಗೆ ಇದನ್ನು ಮಾಡಿದ್ದು ನಾವೇ ಎಂಬ ಪ್ರಚಾರವನ್ನೂ ಮಾಡಬೇಕಾದ ಸ್ಥಿತಿ ಇರುವುದರಿಂದ ಈ ಬಗ್ಗೆ ಮಾತನಾಡುವ ಅನಿವಾರ್ಯತೆ ಸೃಷ್ಟಿಯಾಗಿದೆಯೇ ಹೊರತು ಜನಕ್ಕೆ ಉಪಯೋಗ ಇಲ್ಲದ ಈ ಸ್ಪರ್ಧೆ ಮಾಡುವುದರಲ್ಲಿ ನನಗೆ ಹೆಚ್ಚಿನ ಆಸಕ್ತಿ ಇಲ್ಲ.

ಕೆಲಸ ಯಾರದ್ದೋ ಮಾತು ಇನ್ಯಾರದ್ದೋ ಎನ್ನುವಂತಹ ಸ್ಥಿತಿಯು ನಿಲ್ಲಬೇಕು. ಒಬ್ಬರ ಕೆಲಸವನ್ನು ಗೌರವಿಸುವ ಆರೋಗ್ಯಕರ ಮನಸ್ಥಿತಿ ಮತ್ತು ರಾಜಕೀಯ ಮುತ್ಸದ್ದಿತನ ಬೆಳೆಯಬೇಕು.

ಮಾಡೋ ಕೆಲಸ ಬಿಟ್ಟು ಸದಾ ಪ್ರಚಾರಕ್ಕಾಗಿ ಹಾತೊರೆಯುವ ಮೋದಿ ಮತ್ತವರ ಅಂಧ ಭಕ್ತರ ಗುಂಪು At least ತಮ್ಮದೇ ಬಿಜೆಪಿ ಪಕ್ಷದಲ್ಲಿ ಸಂಪೂರ್ಣ ಮೂಲೆಗೆ ತಳ್ಳಲ್ಪಡುತ್ತಿರುವ ಯಡಿಯೂರಪ್ಪ ಅವರಿಂದ ಈ ಆರೋಗ್ಯಕರವಾದ Gesture ಗಳನ್ನು ಕಲಿಯುವುದು ಸೂಕ್ತ.

– ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

Leave a Reply