‘ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಿತಂತೆ’ ಎಂಬ ಗಾದೆಯಿದೆ. ದೇಶದಲ್ಲಿ ಬಿಜೆಪಿ ನಡೆಸುತ್ತಿರುವ ದ್ವೇಷ ರಾಜಕಾರಣದ ಪರಮಾವಧಿಗೆ ಈ ಗಾದೆ ಸರಿಹೊಂದುತ್ತದೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಹಣದ ವ್ಯವಹಾರವೇ ಇಲ್ಲದ ಮುಡಾ ಹಗರಣಕ್ಕೂ ಇ.ಡಿ ಗೂ ಯಾವ ಸಂಬಂಧ? ಇ.ಡಿ ಇರುವುದು ಅಕ್ರಮ ಹಣದ ವ್ಯವಹಾರಗಳ ಮೇಲೆ ತನಿಖೆ ನಡೆಸಲು. ಮುಡಾ ಹಗರಣದಲ್ಲಿ ಹಣದ ವಹಿವಾಟೇ ನಡೆದಿಲ್ಲ. ಅಂತಹುದರಲ್ಲಿ #ED ಇಲ್ಲಿ ಮೂಗು ತೂರಿಸುತ್ತಿರುವುದೇಕೆ?
ಇ.ಡಿಯನ್ನು ಬಳಸಿಕೊಂಡು ಶತಾಯಗತಾಯ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲೇಬೇಕೆಂದು ಬಿಜೆಪಿ & ಜೆಡಿಎಸ್ ಪಕ್ಷಗಳು ಪಣ ತೊಟ್ಟಿರುವುದು ಸ್ಪಷ್ಟ. ಜನಪ್ರಿಯರಾಗಿರುವ ‘ಅಹಿಂದ’ ನಾಯಕನನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರವಿದು.
ರಾಜಕೀಯ ದ್ವೇಷ ಎಲ್ಲೆ ಮೀರಬಾರದು. ಸಿದ್ದರಾಮಯ್ಯರಿಗೆ ವಿನಾಕಾರಣ ಕಿರುಕುಳ ನೀಡಿದರೆ ಅದರ ಪರಿಣಾಮ ಯಾರೂ ಊಹಿಸುವುದೂ ಅಸಾಧ್ಯ. Siddaramaiah ನವರು ಹಿಂದಿರುವ ಸಮುದಾಯಗಳ ಶಕ್ತಿಯ ಅರಿವು ಬಹುಶಃ H D Kumaraswamyಯವರ ತಾಳಕ್ಕೆ ಕುಣಿಯುತ್ತಿರುವ ಬಿಜೆಪಿಯ ಹೈಕಮಾಂಡಿಗೆ ಇಲ್ಲ ಎಂದು ತೋರುತ್ತದೆ.
– ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ




