ಬೆಂಗಳೂರು: ರಾಜ್ಯದಲ್ಲಿ 1 ರಿಂದ 5ನೇ ತರಗತಿಗಳನ್ನು ಪುನರಾರಂಭ ಕುರಿತು ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೊರೋನಾ ಕಾರಣದಿಂದಾಗಿ ಶಾಲೆ ತಡವಾಗಿ ಆರಂಭವಾಗುತ್ತಿರುವುದರಿಂದ ಶೈಕ್ಷಣಿಕ ಪಠ್ಯಕ್ರಮ ಕುಂಠಿತವಾಗಿದೆ. ಆದ್ದರಿಂದ ಶನಿವಾರ, ಭಾನುವಾರವೂ ತರಗತಿ ನಡೆಸುವ ಕುರಿತು ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಪಠ್ಯ ಕ್ರಮ ಕಡಿತದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳುವ ಯೋಚನೆ ಇಲ್ಲ. ತಡವಾಗಿ ಶಾಲೆಗಳು ಆರಂಭವಾದರೂ ಪಠ್ಯದಲ್ಲಿ ಕಡಿತ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಕುರಿತು ಚರ್ಚಿಸಿಲ್ಲ. ಪಠ್ಯ ಕ್ರಮವನ್ನು ಸೂಕ್ತ ಸಮಯಕ್ಕೆ ಮುಕ್ತಾಯಗೊಳಿಸಲು ಶನಿವಾರ ಹಾಗೂ ಭಾನುವಾರ ಕೂಡ ತರಗತಿ ನಡೆಸುವ ಚಿಂತನೆಯಿದೆ. ಆ ಕುರಿತು ಶೀಘ್ರದಲ್ಲೇ ಸಿಎಂ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧಾರ ಪ್ರಕಟಿಸಲಾಗುವುದು ಎಂದಿದ್ದಾರೆ.



